ನೂತನ ಶಾಸಕ ಪ್ರಕಾಶ ಕೋಳಿವಾಡಗೆ ತಾಲ್ಲೂಕು ರೆಡ್ಡಿ ಸಮಾಜದಿಂದ ಸನ್ಮಾನ

ನೂತನ ಶಾಸಕ ಪ್ರಕಾಶ ಕೋಳಿವಾಡಗೆ ತಾಲ್ಲೂಕು ರೆಡ್ಡಿ ಸಮಾಜದಿಂದ ಸನ್ಮಾನ

 ರಾಣೇಬೆನ್ನೂರು, ಮೇ 24- ಕ್ಷೇತ್ರದ ಎಲ್ಲ ಸಮಾಜಗಳ ಮತದಾರರು ನನಗೆ ಮತ ನೀಡಿ ನನ್ನ ಜಯಕ್ಕೆ ಕಾರಣರಾಗಿದ್ದಾರೆ. ಎಲ್ಲ ಸಮಾಜಗಳ ಹಿರಿಯರು ಆಶೀರ್ವದಿಸಿದ್ದಾರೆ. ಕಿರಿಯರು ಪ್ರೀತಿ ತೋರಿಸಿದ್ದಾರೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ಇಲ್ಲಿನ ಓಂ ಶಾಲೆಯಲ್ಲಿ ತಾಲ್ಲೂಕು ರಡ್ಡಿ ಸಮಾಜದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪ್ರಕಾಶ ಅವರು,  ಎಲ್ಲ ಸಮಾಜದವರ ಕಷ್ಟ- ಸುಖಗಳಲ್ಲಿ ಭಾಗಿಯಾಗುತ್ತೇನೆ. ಯಾರಲ್ಲಿಯೂ ತಾರತಮ್ಯ ತೋರದೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಚುನಾವಣೆ ಪೂರ್ವದಲ್ಲಿ ನಾನು ಕೊಟ್ಟ ಮಾತುಗಳಂತೆ ನಡೆದುಕೊಳ್ಳುತ್ತೇನೆ ಎಂದರು.

ಐದು ಬಾರಿ ನನ್ನನ್ನು ಆಯ್ಕೆ ಮಾಡಿ ಸಚಿವ ಹಾಗೂ  ಸಭಾಪತಿ ಸ್ಥಾನ ಅಲಂಕರಿಸಲು  ಆಶೀರ್ವದಿಸಿದ ರಾಣೇಬೆನ್ನೂರು ಜನತೆಯ ಋಣ ನನ್ನ ಮೇಲೆ ಬಹಳಷ್ಟಿದೆ. ಎಷ್ಟು ಜನ್ಮ ಹುಟ್ಟಿ ಬಂದರೂ ಅದನ್ನು ತೀರಿಸಲು ಸಾಧ್ಯವಿಲ್ಲ. ನೀವು ನನಗೆ ಕೊಟ್ಟ ಪ್ರೀತಿಯನ್ನು ನನ್ನ ಮಗನಿಗೂ ಕೊಟ್ಟಿದ್ದೀರಿ. ಈ ಕ್ಷೇತ್ರದ ಜನರ ಪ್ರೀತಿಯನ್ನು ಉಳಿಸಿ, ಬೆಳೆಸಿಕೊಳ್ಳುವ ಕರ್ತವ್ಯ ಅವನದಾಗಿದೆ. ಅದರಲ್ಲಿ ಅವನು ಯಶಸ್ಸು ಕಾಣುತ್ತಾನೆ ಎಂದು ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಹೇಳಿದರು.

ತಾಲ್ಲೂಕು ರಡ್ಡಿ ಸಮಾಜದ ಅಧ್ಯಕ್ಷ  ರಾಮಚಂದ್ರಪ್ಪ ರಾಯರೆಡ್ಡಿ ಅಧ್ಯಕ್ಷತೆ ವಹಿಸಿ, ಸಮಾಜದ ಕೆಲ ಬೇಡಿಕೆಗಳನ್ನು ಪ್ರಸ್ತಾಪಿಸಿದರು. ಡಾ. ಮನೋಜ ಸಾವುಕಾರ, ಎಂ.ಎಂ.ಅನಂತರೆಡ್ಡಿ, ಎಲ್ಲಪ್ಪರಡ್ಡಿ ರಡ್ಡೇರ, ಅಜ್ಜನವರ ತಿರುಪತಿ, ರುಕ್ಮಿಣಿ ಸಾವುಕಾರ, ವಾಸು ಸಾವುಕಾರ, ಲಕ್ಷ್ಮಣ ಸಾವುಕಾರ,  ಎಸ್.ಬಿ.ಯೋಗಿ, ಡಾ. ಬಿ.ಆರ್.ಸಾವುಕಾರ, ಮಧು ಕೋಳಿವಾಡ, ಧರ್ಮರಾಜ ಕುಪ್ಪೇಲೂರ, ವೆಂಕಟೇಶ ಬಣಕಾರ  ಮತ್ತಿತರರಿದ್ದರು. 

ಶಾಸಕ ಪ್ರಕಾಶ ಹಾಗೂ ಪತ್ನಿ ಪೂರ್ಣಿಮಾ ದಂಪತಿಗೆ ಬೃಹತ್ ಗಾತ್ರದ ಮಾಲಾರ್ಪಣೆಯೊಂದಿಗೆ ಸನ್ಮಾನಿಸಲಾಯಿತು.

error: Content is protected !!