ಡೆಂಗ್ಯೂ ದಿನಾಚರಣೆ : ಚಳ್ಳಕೆರೆಯಲ್ಲಿ ಜಾಥಾ

ಡೆಂಗ್ಯೂ ದಿನಾಚರಣೆ : ಚಳ್ಳಕೆರೆಯಲ್ಲಿ ಜಾಥಾ

ಚಳ್ಳಕೆರೆ, ಮೇ 19- ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕು ದಂಡಾಧಿಕಾರಿ ರೆಹಾನ್ ಪಾಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಡೆಂಗ್ಯೂ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳಾದ ದಿನಬಳಕೆಗಾಗಿ ಸಂಗ್ರಹಿಸಿದ ನೀರನ್ನು ಯಾವಾಗಲೂ ಮುಚ್ಚಿಡಬೇಕು. ಬೇಸಿಗೆ ಕಾಲ ಹಾಗೂ ಮಳೆಗಾಲದ ಸಮಯದಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣವಾಗುತ್ತವೆ. ಡೆಂಗ್ಯೂ ತಡೆಗಟ್ಟಬಹುದಾದ ಕಾಯಿಲೆಯಾಗಿದ್ದು, ಭಯ ಬೀಳುವ ಅವ್ಯಶಕತೆಯಿಲ್ಲ ಎಂದರು ತಿಳಿಸಿದರು. 

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕಾಶಿ, ಡಾ. ಶ್ರೀನಿವಾಸ್, ಡಾ. ಮೇಘನಾ ತಿಪ್ಪೇಸ್ವಾಮಿ, ಬಿಹೆಚ್ಇಓ ತಾಲ್ಲೂಕು ಆರೋಗ್ಯಾಧಿಕಾರಿಗಳು, ಕಛೇರಿ ಸಿಬ್ಬಂದಿಗಳು, ಜಯಣ್ಣ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.

error: Content is protected !!