ಮೋದಿ ಆಡಳಿತಕ್ಕೆ ಮತ್ತೆ ಅವಕಾಶ ಕೊಟ್ಟರೆ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕ

ಮೋದಿ ಆಡಳಿತಕ್ಕೆ ಮತ್ತೆ ಅವಕಾಶ ಕೊಟ್ಟರೆ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕ

ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಪಕ್ಕಾ  : ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ ವಿಶ್ವಾಸ

ದಾವಣಗೆರೆ, ಏ. 19 – ಯಾವುದೇ ಬಂಡಾಯವಿದ್ದರೂ ದಾವಣಗೆರೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಗೆಲುವು ತಡೆಯಲಾಗದು ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು. 

ನಗರದ ಬಾಪೂಜಿ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವ ರೊಂದಿಗೆ ಅವರು ಮಾತನಾಡಿದರು. 

ದೇಶದ ಇತಿಹಾಸದಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಬಂಡಾಯವೆದ್ದು ಸ್ಪರ್ಧೆ ಮಾಡಿ ಗೆದ್ದವರು ಇಲ್ಲ, ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಸುಮಲತಾ ಗೆದ್ದರು ಎಂದ ಅವರು,  ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಗೆಲುವು ಸುಲಭವಲ್ಲ ಎಂದರು. 

ಕೇಂದ್ರ ಸರ್ಕಾರವು ಜನರಿಗೆ ಘೋಷಣೆ ಮಾಡಿದಂತಹ ಘೋಷಣೆಗಳನ್ನು ಜಾರಿಗೆ ತಂದಿಲ್ಲ. 140 ರಷ್ಟು ಇದ್ದ ಜನಸಂಖ್ಯೆ ಹೆಚ್ಚಾಗಿದೆ. ನರೇಂದ್ರ ಮೋದಿಯವರು ವಿಕಸಿತ ಭಾರತ ಮಾಡಲು ಹೊರಟಿದ್ದಾರೆ. ವಿಕಸಿತ ಭಾರತದಲ್ಲಿ ಸತ್ವ ಇಲ್ಲ ಎಂದ ಅವರು  ಮಧ್ಯಮ, ಕೆಳ ಹಾಗೂ ಮೇಲ್ವರ್ಗ ವರ್ಗದವರು ಬಿಜೆಪಿ ಪರವಿಲ್ಲ, ವಿರೋಧವಾಗಿದ್ದಾರೆ ಎಂದರು. 

ಕಳೆದ ಹತ್ತು ವರ್ಷಗಳ ಕೇಂದ್ರ ಸರ್ಕಾರದಿಂದ ಅಹಿಂದ ವರ್ಗಕ್ಕೆ ಒಂದು ಹೊಸ ಯೋಜನೆ ರೂಪವಾಗಿಲ್ಲ, ಶೋಷಿತ ಸಮುದಾಯಗಳ ವಿರೋಧ ಬಿಜೆಪಿಗೆ ಇದೆ. ಶೇ 72 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಯಿಂದ ಬಲಿಷ್ಠ ಭಾರತ ಎಂದು, ಹೇಗೆ ನಿರ್ಮಿಸಲು ಸಾಧ್ಯ ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಅವರು ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದಿದ್ದಾರೆ. ಎಲೆಕ್ಟ್ರೋಲ್ ಬಾಂಡ್ ನಲ್ಲಿ 6300 ಕೋಟಿ ಸಂಗ್ರಹ ಕಾನೂನು ಬಾಹಿರವಾಗಿದೆ. ಬಿಜೆಪಿಯಿಂದ ಹಪ್ತಾ ವಸೂಲಿಯಾಗುತ್ತಿದೆ ಎಂದು ದೂರಿದರು. 

ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತವಿಲ್ಲ. ನಾಲ್ಕು ಸಾರಿಯೂ ವಾಮ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಲಾಗಿದೆ,  ಪಾರ್ಲಿಮೆಂಟ್ ನಲ್ಲಿಯೂ ಸಹ ಇದೇ ತರ ಆಗಿದೆ. ದಬ್ಬಾಳಿಕೆ ಮಾಡಿ ತಮ್ಮ ಪಕ್ಷಕ್ಕೆ ಸಂಸದರನ್ನು ಸೆಳೆಯುತ್ತಿದ್ದಾರೆ. ಇದು ಪ್ರಜಾ ಪ್ರಭುತ್ವಕ್ಕೂ ಮಾರಕ ಎಂದರು. 

ಮೋದಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆ ಹುಸಿಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಸ್ವಿಸ್ ಬ್ಯಾಂಕಿಗೆ ಡೆಪಾಜಿಟ್ ಮಾಡಿರುವವರ ಸಂಖ್ಯೆ ಹೆಚ್ಚಾಗಿದೆ. 14 ಸಾವಿರ ಕೋಟಿ ಇದ್ದ ಡೆಪಾಸಿಟ್ 34 ಸಾವಿರ ಕೋಟಿಯಾಗಿದೆ. ಬ್ಲಾಕ್ ಮಾರ್ಕೆಟ್‍ನವರನ್ನು ಹಿಡಿಯಲಾಗುತ್ತಿಲ್ಲ. 38 ಜನ ಎಕಾನಿಮಿಕ್ ಅಡೆಂಟರ್ಸ್‍ಗಳು ಹತ್ತು ವರ್ಷದಲ್ಲಿ ಪರಾರಿಯಾಗಿದ್ದಾರೆ. ಸುಮಾರು 10 ಲಕ್ಷ ಕೋಟಿ ಸಾಲ ವಸೂಲಿ ಮಾಡುತ್ತೇವೆ ಎಂದವರು ಕೇವಲ 13% ಸಾಲ ವಸೂಲಿಮಾಡಿ ಉಳಿದ ಹಣ ಶ್ರೀಮಂತರಿಗೆ ಮನ್ನಾ ಮಾಡಲಾಗಿದೆ ಎಂದರು.  ನರೆಂದ್ರ ಮೋದಿ ಅವರಿಗೆ ಮತ್ತೆ ಐದು ವರ್ಷ ಆಡಳಿತಕ್ಕೆ ಅವಕಾಶ ಕೊಟ್ಟರೆ ಸರ್ವಾಧಿಕಾರ ಪ್ರಜಾ ಪ್ರಭುತ್ವಕ್ಕೆ ಮಾರಕವಾಗಲಿದೆ ಎಂದರು. 

ಬಿಜೆಪಿಯವರ ಮೂಲ ಉದ್ದೇಶವೇ ಸಂವಿಧಾನ ಬದಲಾವಣೆ ಮಾಡುವುದು ಎಂದ ಅವರು ಉತ್ತರ ಪ್ರದೇಶದಲ್ಲಿ ಕ್ಯಾಂಡಿಡೇಟ್ ಒಬ್ಬರು ಸಂವಿಧಾನ ಬದಾಲಾವಣೆ ಮಾಡಬೇಕು ಎಂದು ಭಾಷಣದಲ್ಲಿ ಹೇಳಿದ್ದಾರೆ ಅವರ ಮೇಲೆ ಕ್ರಮ ಆಗಬೇಕು ಎಂದರು. ನಾವು ಸಹ  ಒಳಮೀಸಲಾತಿ ಜಾರಿಗೆ ಮನವಿ ಮಾಡಿದ್ದೇವೆ ಈ ಬಗ್ಗೆ ವಾದ-ವಿವಾದ ಆಗುತ್ತಿದೆ ಎಂದರು.

ನಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಒಂದು ಲಕ್ಷ ಕೊಡ್ತೀವ ಎಂದಿದ್ದೇವೆ, ರೈತರಿಗಾಗಿ ಸ್ವಾಮಿನಾಥನ್ ವರದಿ ಜಾರಿ ಮಾಡಿ ಮಿನಿಮಮ್ ಸಪೋರ್ಟ್‌ ಪ್ರೈಸ್ ರೈತರಿಗೆ ಕೊಡ್ತೀವಿ, ಪದವೀಧರರಿಗೆ 1 ಲಕ್ಷ ನಿರುದ್ಯೋಗ ಭತ್ಯೆ ಕೊಡ್ತೀವಿ, ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗಾಗಿ ಜಾತಿ ಸಮೀಕ್ಷೆ ಮಾಡ್ತೀವಿ ಎಂದ ಅವರು ಮೋದಿಯವರದು ಭಾವನಾತ್ಮಕ ಪ್ರಣಾಳಿಕೆಯಾದರೆ, ನಮ್ಮದು ನಿರ್ದಿಷ್ಟ ಭಾವ ಪ್ರಣಾಳಿಕೆ ಎಂದರು. ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ದೇಶದ ಬೆಳವಣಿಗೆ ಕಾಣಬೇಕು ಎಂದು ತಿಳಿಸಿದರು.

 ಈ ವೇಳೆ ಕಾಂಗ್ರೆಸ್ ಮುಖಂಡರಾದ ಬಿ.ಹೆಚ್. ವೀರಭದ್ರಪ್ಪ, ಬಿ.ಎಂ. ಹನುಮಂತಪ್ಪ, ಎಲ್.ಎಂ ಹನುಮಂತಪ್ಪ, ಎಲ್.ಡಿ. ಗೋಣೆಪ್ಪ, ಸೋಮಲಾಪುರದ ಹನುಮಂತಪ್ಪ, ಎನ್.ನೀಲಗಿರಿಯಪ್ಪ, ಸಾಗರ್, ಹರೀಶ್, ಹೆಚ್.   ಹರೀಶ್,  ವಕೀಲ ಪ್ರಕಾಶ್  ಪಾಟೀಲ್, ನಾಗರಾಜ್ ಬಿ.ಜಿ. ಚಂದ್ರಶೇಖರ, ಎಂ.ಟಿ.ಸುಭಾಶ್, ರಮೇಶ್, ಕೃಷ್ಯನಾಯ್ಕ್, ಶ್ಯಾಂ, ಅಂಜಿನಪ್ಪ, ರಾಕಿ, ಮಂಜಪ್ಪ ಹಲಗೇರಿ, ಈಶಣ್ಣ ಮತ್ತಿತರರು ಉಪಸ್ಥಿತರಿದ್ದರು.

error: Content is protected !!