ಭೂ ಲೋಕದಿಂದ ಕಾಳಿಂಗ ಸರ್ಪ ಎದ್ದಿತು…

ಭೂ ಲೋಕದಿಂದ ಕಾಳಿಂಗ ಸರ್ಪ ಎದ್ದಿತು…

ಜಿಗಳಿ ರಂಗನಾಥ ಸ್ವಾಮಿ  ಹಾಗೂ ಯಲವಟ್ಟಿ ಆಂಜನೇಯ ಸ್ವಾಮಿ ದೇವರ ಸ್ವಾಮಿಯ ಕಾರಣಿಕ

ಹರಿಹರ, ಆ. 21-  `ಭೂ ಲೋಕದಿಂದ ಕಾಳಿಂಗ ಸರ್ಪ ಎದ್ದಿತು, ಆ ಸರ್ಪ ಮುತ್ತಿನ ಹಾರಕ್ಕೆ ತಳುಕು ಹಾಕಿತು ಎಚ್ಚರ ಲೇ’ 

– ಇದು ಜಿಗಳಿ ರಂಗನಾಥ ಸ್ವಾಮಿ  ಹಾಗೂ ಯಲವಟ್ಟಿ ಆಂಜನೇಯ ಸ್ವಾಮಿ ದೇವರ ಸ್ವಾಮಿಯ ಕಾರಣಿಕ.

ಸೋಮವಾರ ಗೋರಪ್ಪ ಬಸವರಾಜ್ ಅವರು ನಗರದ ಊರಮ್ಮ ದೇವಿ, ಕಾಶಿ ದುರ್ಗಮ್ಮ, ಏಕನಾಥೇಶ್ವರಿ, ಗಾಳಿ ದುರ್ಗಮ್ಮ, ಆಂಜನೇಯ ಸ್ವಾಮಿ, ಯಲವಟ್ಟಿ, ಜಿಗಳಿ, ಹನಗವಾಡಿ, ಲಕ್ಕಶೆಟ್ಟಿಹಳ್ಳಿ, ಬೆಳ್ಳೂಡಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ 38 ಕ್ಕೂ ಹೆಚ್ಚು ದೇವರುಗಳ ಸಮ್ಮುಖದಲ್ಲಿ ಕಾರಣಿಕ ನುಡಿದರು.  ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

ಕಾರಣಿಕದ ನಂತರ ಮಾತನಾಡಿ ಮಾಜಿ ಶಾಸಕ ಎಸ್.ರಾಮಪ್ಪ, ಪ್ರತಿವರ್ಷ ರಾಜ್ಯದ ರಾಜಕೀಯದಲ್ಲಿ ನಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಕಾರಣಿಕ ನುಡಿಯುವ ಪ್ರತೀತಿ ಇದೆ. 

ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಯವರು ಒಬ್ಬೊಬ್ಬರಾಗಿ ತಳಕು ಹಾಕುವುದಕ್ಕೆ ಮುಂದಾಗಿರುವುದು ನೋಡಿದಾಗ ಈ ಕಾರಣಿಕ ಅದಕ್ಕೆ  ಹತ್ತಿರದ ವಿಚಾರಗಳನ್ನು ಕುರಿತು ಹೇಳಿದಂತಿದೆ ಎಂದರು. ಮುಂದಿನ ದಿನಗಳಲ್ಲಿ ಬಿಜೆಪಿಯ ಹಲವಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ತಳಕು ಹಾಕುವುದು ಅಷ್ಟೇ ಸತ್ಯದಿಂದ ಕೂಡಿರಬಹುದು ಎಂದು ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ,  ನಗರಸಭೆ ಸದಸ್ಯ ದಿನೇಶ್ ಬಾಬು, ಮಾಜಿ ಸದಸ್ಯ ನಾಗರಾಜ್, ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ಟಿ.ಜೆ. ಮುರುಗೇಶಪ್ಪ, ಸುರೇಶ್ ಹಾದಿಮನಿ, ವೈ.ಎನ್. ಮಹೇಶ್, ಜಗದೀಶ್ ಚೂರಿ, ಕರಿಬಸಪ್ಪ ಕಂಚಿಕೇರಿ, ಕೃಷ್ಣಮೂರ್ತಿ, ಗಿರೀಶ್, ರಾಮಣ್ಣ, ಅಶೋಕ, ಅರ್ಚಕ ಈರಣ್ಣ ಹಾಗೂ ಇತರರು ಹಾಜರಿದ್ದರು.   

error: Content is protected !!