ದಾವಣಗೆರೆ, ಮೇ 14 – ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರಥಮ ವರ್ಷದ ಡಿ.ಇಎಲ್.ಇಡಿ. ದಾಖಲಾತಿ ಕನ್ನಡ ಮತ್ತು ಉರ್ದು ಮಾಧ್ಯಮ ಪಡೆಯಲು ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಮೇ 6 ರಿಂದ ಜೂನ್ 5 ರವರೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,( ಡಯಟ್) ಇಲ್ಲಿ ಸಲ್ಲಿಸಬೇಕು.
ಅರ್ಜಿ ನಮೂನೆಗಳನ್ನು WWW.schooleducation.karnataka.gov.in ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಿಗದಿತ ದಾಖಲೆಗಳು ಮತ್ತು ಡಿ.ಡಿ.ಯೊಂದಿಗೆ ನೋಡಲ್ ಕೇಂದ್ರವಾದ ಡಯಟ್. ದಾವಣಗೆರೆ ಇಲ್ಲಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಯನ್ನು WWW.schooleducation.karnataka.gov.in ವೆಬ್ ಸೈಟ್ ತಿಳಿದುಕೊಳ್ಳಬಹುದು. ಹಾಗೂ ಕನ್ನಡ ಮಾಧ್ಯಮ – 9164489972, 988030377. 9844401092. 08192-231156. ಉರ್ದು ಮಾಧ್ಯಮ- 9164489972, 8867932439, 08192-231156 ಸಂಪರ್ಕಿಸಬಹುದೆಂದು ಡಯಟ್ ಪ್ರಾಂಶುಪಾಲರಾದ ಗೀತಾ ತಿಳಿಸಿದ್ದಾರೆ.