ಕನಕ ಜಯಂತ್ಯೋತ್ಸವ ಮುಂದೂಡಿಕೆ

ದಾವಣಗೆರೆ, ನ.26- ಜಿಲ್ಲಾ ಕುರುಬ ಸಮಾಜದ ವತಿಯಿಂದ ಬರುವ 2025ರ ಜನವರಿ ತಿಂಗಳ ಮೊದಲ ವಾರದಲ್ಲಿ ಕನಕದಾಸರ 537ನೇ ಜಯಂತ್ಯು ತ್ಸವವನ್ನು ಸಿ.ಎಂ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಆಚರಿಸಲು ತೀರ್ಮಾನಿಸ ಲಾಗಿದೆ ಎಂದು ಕುರುಬ ಸಮಾಜದ ಮುಖಂಡ ಎಸ್.ಎಲ್.ಆನಂದಪ್ಪ ತಿಳಿಸಿದರು.

ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಕನಕದಾಸರ ಜಯಂತಿಯನ್ನು  ಮುಂದೂಡಲಾಗಿದೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ, ಇಟ್ಟಿಗುಡಿ ಮಂಜುನಾಥ, ಎಸ್.ಟಿ. ಅರವಿಂದ, ಮಲ್ಲಿಕಾರ್ಜುನ್, ಸುಧಾ, ಆಶಾ, ಜಯಪ್ಪ, ಲೋಕಪ್ಪ, ಹೊನ್ನಪ್ಪ, ಪ್ರಕಾಶ್, ಧರ್ಮಣ್ಣ, ಶಿವಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!