ದಾವಣಗೆರೆ, ನ.26- ಬೀದಿಬದಿ ವ್ಯಾಪಾರಸ್ಥರ ಸರ್ವತೋಮುಖ ಅಭ್ಯುದಯ ಕ್ಕಾಗಿ ಕೇಂದ್ರ ಪುರಸ್ಕೃತ ಪಿಎಂ-ನಿಧಿ ಈ ಯೋಜನೆಯ ವೇಗವನ್ನು ಹೆಚ್ಚಿಸಲು ನವೆಂಬರ್ 18 ರಿಂದ ಡಿಸೆಂಬರ್ 2ರವರೆಗೆ ಪಖ್ವಾಡ ಶಿಬಿರಗಳನ್ನು ವಿವಿಧ ಬ್ಯಾಂಕುಗಳ ಶಾಖೆಗಳಲ್ಲಿ ಆಯೋಜಿಸಲಾಗಿದೆ.
ಆಸಕ್ತ ಬೀದಿಬದಿ ವ್ಯಾಪಾರಸ್ಥರು ಕಿರು ಸಾಲ ಸೌಲಭ್ಯ ಒದಗಿಸಲು ಅರ್ಜಿ ಸಲ್ಲಿಸಬಹುದು. ಸಾಲ ಮಂಜೂರಾತಿ ಪಡೆಯುವುದು, ಸಾಲ ವಿತರಣೆ ಪಡೆಯುವುದು, ಡಿಜಿಟಲ್ ವಹಿವಾಟು ಪಾವತಿ ನಡೆಸುವುದು ಮತ್ತು ಸಾಮಾಜಿಕ ಭದ್ರತಾ ವಿಮಾ ಯೋಜನೆಗಳ ಅನುಕೂಲ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.