ದಾವಣಗೆರೆ, ಏ. 3- ಇಲ್ಲಿನ ಕಲರ್ಸ್ ಕಲ್ಚರಲ್ ಅಕಾಡೆಮಿಯಲ್ಲಿ ಇತ್ತಿಚೇಗೆ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕಲರ್ಸ್ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಆರ್ಥಿಕ ಸ್ವಾವಲಂಬನೆ ಮಹಿಳೆಯರಿಗೆ ಬಹಳ ಮುಖ್ಯವಾಗಿದ್ದು, ಇದರ ಪ್ರಾಮುಖ್ಯತೆಯನ್ನು ಮಮತಾ ಮಧು ಅವರು ವಿವರಿಸಿದರು.
ಶ್ರೀಮತಿ ಜಯ ರಾಘವೇಂದ್ರ ನಲ್ಲೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಯಮಿ ನಲ್ಲೂರು ಎಸ್. ರಾಘವೇಂದ್ರ, ಬಿ. ಪ್ರಸನ್ನ, ಶೀಲಾ ಅನಿಲ್ ಗೌಡರ್, ಅನಿಲ್ ಗೌಡರ್, ಬಿ. ಸೌಮ್ಯ, ಶೋಭಾ ಶಿವರಾಜ್, ಮಧು ಜಿಂಗಾಡೆ, ಬಿ ಪ್ರಸನ್ನ, ಶ್ರೀಮತಿ ನೀತಾ ವಿ. ಅಂಬರ್ಕರ್, ಶ್ರೀಮತಿ ಶ್ರೇಯ ನೆಲ್ಲಿಸರ, ಶ್ರೀಮತಿ ನಂದಿನಿ ಗಂಗಾಧರ, ಶೋಭ ಶಿವರಾಜ್ ಇತರರು ಇದ್ದರು.