ಮಾಧ್ಯಮ ವೃತ್ತಿ ಉದ್ಯಮವಾಗಿ ಪರಿವರ್ತನೆಯಾದಾಗ ಬಂಡವಾಳ ಬರುತ್ತದೆ. ಪತ್ರಕರ್ತರಿಗೆ ವೇತನ ಸಿಗುತ್ತದೆ ಎಂಬ ಸಮಾಧಾನವಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಆ ಭರವಸೆಯೂ ಕಾಣುತ್ತಿಲ್ಲ
ಲಾಭ ಗಳಿಸಲು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಿ
ಕೃಷಿಯನ್ನು ಲಾಭದಾಯಕವಾಗಿಸಲು ರೈತರು ಸಮಗ್ರ ಕೃಷಿ ನೀತಿ ಅಳವಡಿಕೊಳ್ಳುವುದರ ಜೊತೆಗೆ, ಬೆಳೆ ಸಂಸ್ಕರಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗ ಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯ್ತಿಗಳಲ್ಲೂ ಕಮಲ
ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರಿದ್ದರೆ, ಕಾಂಗ್ರೆಸ್ ಮುಳುಗುತ್ತಿ ರುವ ಹಡಗಿನಂತಾಗಿದೆ. ಮುಂದಿನ ದಿನ ಗಳಲ್ಲಿ ಬಿಜೆಪಿ ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಗಳಲ್ಲೂ ಗೆಲುವು ಸಾಧಿಸಲಿದೆ
ಜಾತ್ರೆ ವೇಳೆಗೆ ಮೀಸಲಾತಿ ಹೆಚ್ಚಿಸದಿದ್ದರೆ ಜಾತ್ರೆಯಂದು ನಮ್ಮ ತೀರ್ಮಾನ ಪ್ರಕಟ : ವಾಲ್ಮೀಕಿ ಸ್ವಾಮೀಜಿ ಎಚ್ಚರಿಕೆ
ಮಲೇಬೆನ್ನೂರು : ಎಸ್ಸಿ-ಎಸ್ಟಿ ಜನರನ್ನು ಸರ್ಕಾರಗಳು ತಾತ್ಸಾರದಿಂದ ನೋಡುತ್ತಾ ಬಂದಿದ್ದು, ಚುನಾವಣೆ ಬಂದಾಗ ಹಣ, ಹೆಂಡ ಕೊಟ್ಟರೆ ಅವರು ನಾವು ಹೇಳಿದಂತೆ ಕೇಳುತ್ತಾರೆ ಎಂಬ ಕೀಳರಿಮೆ ರಾಜಕೀಯ ಮುಖಂಡರಲ್ಲಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಬೇಸಿಗೆಯೊಳಗಾಗಿ ಬಾಕಿ ಸ್ಮಾರ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು : ಉಸ್ತುವಾರಿ ಸಚಿವರ ಸೂಚನೆ
ಸ್ಮಾರ್ಟ್ ಸಿಟಿ ಯೋಜನೆಯಡಿ 975.93 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ 90 ಕಾಮಗಾರಿಗಳ ಪೈಕಿ 24 ಕಾಮಗಾರಿಗಳು ಮಾತ್ರ ಪೂರ್ಣ ಗೊಂಡಿದ್ದು, 54 ಕಾಮಗಾರಿಗಳು ಮಂದಗತಿ ಯಲ್ಲಿ ಸಾಗಿವೆ, ಉಳಿದ 11 ಕಾಮಗಾರಿಗಳು ಇನ್ನೂ ಟೆಂಡರ್ ಹಂತದಲ್ಲಿವೆ.
ರೆವಿನ್ಯೂ ನಿವೇಶನ ಸಕ್ರಮಕ್ಕೆ ಚಿಂತನೆ
ಮಹಾನಗರ ಪಾಲಿಕೆಗಳು ಸೇರಿದಂತೆ ರಾಜ್ಯದ ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ, ವ್ಯಾಪ್ತಿಯಲ್ಲಿನ ರೆವಿನ್ಯೂ ನಿವೇಶನಗಳನ್ನು ಸಕ್ರಮಗೊಳಿಸಲು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಕಾಮಗಾರಿಗಾಗಿ ಕೆರೆ ಖಾಲಿ
ದಾವಣಗೆರೆ ನಗರದ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯ ನೀರನ್ನು ನಿಧಾನವಾಗಿ ಖಾಲಿ ಮಾಡಲಾಗುತ್ತಿದ್ದು, ಪಕ್ಷಿಗಳು ಕೆರೆಯ ನಡುಗಡ್ಡೆಯಲ್ಲಿ ಆಶ್ರಯ ಪಡೆಯುತ್ತಿವೆ.
ಸ್ನಾತಕ ಪದವಿ ಪರೀಕ್ಷೆ: ಎವಿಕೆ ಮಹಿಳಾ ಕಾಲೇಜಿಗೆ 10 ರ್ಯಾಂಕ್
ದಾವಣಗೆರೆ ವಿಶ್ವವಿದ್ಯಾನಿಲಯದ 2023-24ನೇ ಸಾಲಿನ ಸ್ನಾತಕ ಪದವಿ ಪರೀಕ್ಷೆಯಲ್ಲಿ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು 10 ರ್ಯಾಂಕ್ ಪಡೆದಿರುತ್ತಾರೆ.
ತುಮ್ಮಿನಕಟ್ಟೆಯಲ್ಲಿ ಇಂದಿನಿಂದ 3 ದಿನ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ
ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟೆ ಗ್ರಾಮದ ಬೆಲ್ಲದ ಪತೇಯಲ್ಲಿರುವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಇದೇ ದಿನಾಂಕ 7 ರವರೆಗೆ ಶ್ರೀ ಬಸವೇಶ್ವರ ರಥೋತ್ಸವ ಹಾಗೂ ಗುಗ್ಗಳ ಮಹೋತ್ಸವ ನಡೆಯಲಿದೆ.
ಹರಿಹರದಲ್ಲಿ ಬೀಡಾ ಸ್ಟಾಲ್ಗೆ ಬೆಂಕಿ
ಹರಿಹರ : ಹರಿಹರೇಶ್ವರ ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಲ್ಲಿರುವ ಬೀಡಾ ಸ್ಟಾಲ್ನಲ್ಲಿ ಇಂದು ಸಂಜೆ ಬೆಂಕಿ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು.
ಅಪರಿಚಿತ ಶವ ಪತ್ತೆ
ಸುಮಾರು 50 ವರ್ಷದ ವ್ಯಕ್ತಿಯ ಮೃತ ದೇಹ ಕಂಡು ಬಂದಿದ್ದು, ಕಂದು ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿರುವ ಅಪರಿಚಿತ ಶವದ ವಾರಸುದಾರರ ಮಾಹಿತಿ ಕಂಡು ಬಂದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ (08192-262688) ಯನ್ನು ಸಂಪರ್ಕಿಸಬಹುದು.
ನಗರದಲ್ಲಿ ಇಂದು ಕಾಂಗ್ರೆಸ್ ಸಭೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಶೀಘ್ರ ನಡೆಯಲಿದ್ದು, ಈ ಚುನಾವಣೆಗೆ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಉದ್ದೇಶದಿಂದ ದಾವಣಗೆರೆ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಯನ್ನು ಇಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಎಸ್.ಭವನದಲ್ಲಿ ಕರೆಯಲಾಗಿದೆ.
ಇಂದು ಸವಿತಾ ಮಹರ್ಷಿ ಜಯಂತಿ
ಜಿಲ್ಲಾಡಳಿತದಿಂದ ಇಂದು ಬೆಳಿಗ್ಗೆ 10. 30ಕ್ಕೆ ಜಿಲ್ಲಾಡಳಿತ ಭವನದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂ ತ್ಯೋತ್ಸವ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ, ವಕೀಲ ಎನ್. ರಂಗಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಇಂದಿನಿಂದ 9 ರವರೆಗೆ 60 ನೇ ವರ್ಷದ ದಿಂಡಿ ಮಹೋತ್ಸವ
ಬಂಬೂಬಜಾರ್ ಗೋಂದಳಿ ಸಮಾಜದ ಶ್ರೀ ವಿಠಲ ರುಖುಮಾಯಿ ಹರಿ ಮಂದಿರದಲ್ಲಿ 60 ನೇ ವರ್ಷದ ದಿಂಡಿ ಮಹೋತ್ಸವದ ಅಂಗವಾಗಿ ವಿಶ್ವಶಾಂತಿಗಾಗಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಮತ್ತು ಅಖಂಡ ಹರಿನಾಮ ಸಪ್ತಾಹ ಇಂದಿನಿಂದ ಇದೇ ದಿನಾಂಕ 9 ರವರೆಗೆ ನಡೆಯಲಿದೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ನೀಡಲು ಆತ್ಮಸ್ಥೈರ್ಯ ದಿಂದ ಹೋರಾಡಿ ಜೀವ ನೋಪಾಯದಿಂದ ಪಾರು ಮಾಡಿದಂ ತಹ ಮಹಿಳೆಯ ರನ್ನು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಪರಿಗಣಿಸಲು ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಗರದಲ್ಲಿ ಇಂದು ಪುಸ್ತಕ ಬಿಡುಗಡೆ
ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರಾದ ಹೆಚ್.ಕೆ. ಲಿಂಗರಾಜ್ ಅವರು ರಚಿಸಿದ `ಶಿಕ್ಷಕರಿಗಾಗಿ ಸೇವಾ ನಿಯಮಗಳು' ಎಂಬ ಪುಸ್ತಕ ಇಂದು ಬಿಡುಗಡೆಯಾಗಲಿದೆ.
ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಮುಂದಕ್ಕೆ
ಫೆಬ್ರವರಿ 3 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕ ರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ ಆರಂಭವಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಖ್ಯ ಮಂತ್ರಿಗಳ ಭರವಸೆ ಮೇರೆಗೆ ಮುಂದೂಡಲಾಗಿದೆ
ಹರಿಹರ ಪಿಎಲ್ಡಿ ಬ್ಯಾಂಕಿನ 4 ಸ್ಥಾನಗಳ ಪೈಕಿ 3 ಸ್ಥಾನಗಳ ಫಲಿತಾಂಶ ಪ್ರಕಟ
ಹರಿಹರ ಪಿಎಲ್ಡಿ ಬ್ಯಾಂಕಿನ ಆಡಳಿತ ಮಂಡಳಿಯ 4 ನಿರ್ದೇಶಕ ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆಯಿತು. 10 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದವು.
ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ : 340 ಮೆಟ್ರಿಕ್ ಟನ್ ಮರಳು ಜಪ್ತಿ
340 ಮೆಟ್ರಿಕ್ ಟನ್ ಅಕ್ರಮವಾಗಿ ಮರಳನ್ನು ದಾಸ್ತಾನು ಮಾಡಿದ ಅಡ್ಡೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಗುರುಬಸವರಾಜ್ ಮತ್ತು ಗಣಿ ಮತ್ತು ಭೂ ವಿಜ್ಞಾನಿ ತಂಡಗಳೊಂದಿಗೆ ಸೋಮವಾರ ಜಪ್ತಿ ಮಾಡಲಾಯಿತು
ನಗರಕ್ಕೆ 7ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಇದೇ ದಿನಾಂಕ 7ರಂದು ಭೇಟಿ ನೀಡಲಿದ್ದಾರೆ.
ರಾಣೇಬೆನ್ನೂರಿನಲ್ಲಿ ಇಂದು ಮೌನೇಶ್ವರ ಜಯಂತಿ – ಸಾಮೂಹಿಕ ವಿವಾಹ
ಮೌನೇಶ್ವರ ದೇವಸ್ಥಾನ, ವಿಶ್ವಕರ್ಮ ಸಮಾಜ, ಕಾಳಿಕಾದೇವಿ ಮಹಿಳಾ ಮಂಡಳ ಹಾಗೂ ನೌಕರರ ಸಂಘದಿಂದ ಜಗದ್ಗುರು ಮೌನೇಶ್ವರ ಜಯಂತಿಯನ್ನು ಇಂದು ಆಚರಿಸಲಾಗುವುದು ಎಂದು ಸಮಾಜದ ಗೌರವ ಸಮಿತಿ ಅಧ್ಯಕ್ಷ ಬಸವರಾಜ ಬಡಿಗೇರ ತಿಳಿಸಿದರು.
ಪತ್ತೆಯಾಗದ ಬಾಲಕನ ಶವ
ತಾಲೂಕಿನ ಕುರ್ಕಿ ಬಳಿ ಭದ್ರಾ ನಾಲೆಯಲ್ಲಿ ಭಾನುವಾರ ಕೊಚ್ಚಿ ಹೋಗಿರುವ ಗಣೇಶ್ ಶವ ಸೋಮವಾರವೂ ಪತ್ತೆಯಾಗಲಿಲ್ಲ.
ನಗರದಲ್ಲಿ ಇಂದು ಕ್ಯಾನ್ಸರ್ ಜಾಗೃತಿ ಜಾಥಾ
ಜಿ.ಎಂ. ವಿಶ್ವವಿದ್ಯಾಲಯ, ಜಿ.ಎಂ.ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ಅಂಡ್ ರಿಸರ್ಚ್ ವಿಭಾಗ ಮತ್ತು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ (ವಾಕಥಾನ್) ನಾಳೆ ದಿನಾಂಕ 4 ರ ಮಂಗಳವಾರ ಬೆಳಿಗ್ಗೆ 7.30 ಕ್ಕೆ ಹಮ್ಮಿಕೊಳ್ಳಲಾಗಿದೆ
ಬೇಸಿಗೆ ಹಂಗಾಮು : ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ
ಜಿಲ್ಲೆಯಾದ್ಯಂತ ಬೇಸಿಗೆ ಹಂಗಾಮಿನಲ್ಲಿ ಒಟ್ಟಾರೆ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆ ಕಾಂಗ್ರೆಸ್ ಸಭೆ : ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಮನ
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಶೀಘ್ರ ನಡೆಯಲಿದ್ದು, ಈ ಚುನಾವಣೆಗೆ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಉದ್ದೇಶದಿಂದ ದಾವಣಗೆರೆ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಯನ್ನು ನಾಡಿದ್ದು ದಿನಾಂಕ 5ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಎಸ್.ಭವನದಲ್ಲಿ ಕರೆಯಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಆಮಿಷ: ಆರೋಪ
ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಚುನಾವಣೆಯಲ್ಲಿ ಮತದಾರರಿಗೆ ಹಣ ಹಾಗೂ ಇತರೆ ಆಮಿಷಗಳನ್ನು ವೊಡ್ಡಿ ಆಯ್ಕೆಯಾಗಿರುವ ಬಗ್ಗೆ ನನ್ನ ಬಳಿ ಹಲವಾರು ದಾಖಲೆಗಳಿದ್ದು, ಇದೇ ದಿನಾಂಕ 7 ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು
ಶ್ರೀ ಪುರಂದರ ದಾಸರ ದೇವರ ನಾಮ, ಶ್ರೀ ತ್ಯಾಗರಾಜರ ಕೀರ್ತನೆ ಸ್ಪರ್ಧೆ
ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಶ್ರೀ ಪುರಂದರ ದಾಸರ ಹಾಗೂ ಶ್ರೀ ತ್ಯಾಗರಾಜರ ಆರಾಧನೆ ಪ್ರಯುಕ್ತ ಶ್ರೀ ಪುರಂದರ ದಾಸರ ದೇವರ ನಾಮ ಹಾಗೂ ಶ್ರೀ ತ್ಯಾಗರಾಜರ ಕೀರ್ತನಾ ಸ್ಪರ್ಧೆಯನ್ನು ಇದೇ ದಿನಾಂಕ 16 ರ ಶನಿವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.
ಇಂದಿನಿಂದ ಜಿ.ಎಂ.ಲೀಗ್ ಕ್ರೀಡಾ ಹಬ್ಬ
ನಾಳೆ ದಿನಾಂಕ 4 ರಿಂದ ಇದೇ ದಿನಾಂಕ 15 ರವರೆಗೆ ಜಿ.ಎಂ. ವಿವಿಯ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯ ಜಿ.ಎಂ. ಲೀಗ್ ಕ್ರೀಡಾ ಹಬ್ಬ ನಡೆಯಲಿದೆ. 11 ದಿನಗಳ ಕಾಲ ಕ್ರಿಕೆಟ್, ವಾಲಿಬಾಲ್, ಖೋ-ಖೋ, ಥ್ರೋ ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ
ನಾಡಿದ್ದು ಪಾಲಿಕೆ ಆಯವ್ಯಯ ಸಭೆ
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇದೇ ದಿನಾಂಕ 6ರ ಬೆಳಗ್ಗೆ 11 ಗಂಟೆಗೆ ಮಹಾಪೌರರಾದ ಕೆ. ಚಮನ್ ಸಾಬ್ ಅವರ ಅಧ್ಯಕ್ಷತೆಯಲ್ಲಿ ಆಯವ್ಯಯ ಸಭೆ ಆಯೋಜಿಸಲಾಗಿದೆ
ಇಂದು ಜಿಎಂ ವಿವಿಯ `ಜ್ಞಾನ ಸರಣಿ; ಶೀರ್ಷಿಕೆಯಡಿ ಪುಸ್ತಕ ಲೋಕಾರ್ಪಣೆ
ನಗರದ ಜಿ.ಎಂ. ವಿಶ್ವವಿದ್ಯಾಲಯದ ವತಿಯಿಂದ `ಜ್ಞಾನ ಸರಣಿ' ಶೀರ್ಷಿಕೆಯಡಿ ಒಟ್ಟು 9 ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ನ್ನು ನಾಳೆ ದಿನಾಂಕ 3 ರ ಸೋಮವಾರ ಜಿಎಂ ವಿವಿಯ ಎ.ವಿ. ಕೊಠಡಿಯಲ್ಲಿ ನಡೆಯಲಿದೆ
ಸ್ಪ್ರಿಂಕ್ಲರ್ ಪೈಪ್ ಪಡೆಯಲು ಅರ್ಜಿ ಆಹ್ವಾನ
ಕೃಷಿ ಇಲಾಖೆ ವತಿಯಿಂದ 2024-25ನೇ ಸಾಲಿನ ತುಂತುರು ನಿರಾವರಿ ಯೋಜನೆಯಡಿ ಸ್ಪ್ರಿಂಕ್ಲರ್ ಪೈಪ್ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಲೇಬೆನ್ನೂರಿನಲ್ಲಿ ಇಂದು ಗಂಧ, ನಾಳೆ ಉರುಸ್
ಹಿಂದೂ-ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾದ ಸೂಫಿ ಸಂತ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಗಂಧ (ಸಂದಲ್) ಮತ್ತು ಉರುಸ್ ಇಂದು ಮತ್ತು ನಾಳೆ ಅಪಾರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಹಾಗೂ ಶ್ರದ್ಧಾ-ಭಕ್ತಿಯಿಂದ ಜರುಗಲಿದೆ.
ಹರಪನಹಳ್ಳಿ : ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ರಾಜಕುಮಾರ ಭರ್ಮಪ್ಪ
ಹರಪನಹಳ್ಳಿ : ಸ್ಥಳೀಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಉಚ್ಚಂಗಿದುರ್ಗ ರಾಜಕುಮಾರ ಭರ್ಮಪ್ಳ, ಉಪಾಧ್ಯಕ್ಷರಾಗಿ ನಾಗರಾಜ ಗೊಂಗಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ನೀಡುವ ಸಂಕಲ್ಪ ಮಾಡೋಣ
ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ. ಚೇತನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ಮಲೇಬೆನ್ನೂರು : ಶ್ರೇಷ್ಠ ಶರಣ ಮಡಿವಾಳ ಮಾಚಿದೇವರು ವೀರ ಸೇನಾನಿಯಾಗಿ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನಂದಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರೂ ಆದ ಪುರಸಭೆ ನಾಮಿನಿ ಸದಸ್ಯ ಬಿ. ವೀರಯ್ಯ ಹೇಳಿದರು.
ನ್ಯಾಮತಿ : 13ರಿಂದ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ
ನ್ಯಾಮತಿ : ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಇದೇ ದಿನಾಂಕ 13ರಿಂದ 15ರ ವರೆಗೆ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಈ ಸಂಭ್ರಮದಲ್ಲಿ ಯಾವುದೇ ಲೋಪ ಆಗದಂತೆ ಜಿಲ್ಲಾಧಿಕಾರಿಗಳು ಇಲ್ಲೇ ಇದ್ದು, ಸಿದ್ಧತಾ ಕಾರ್ಯದ ಬಗ್ಗೆ ನಿಗಾವಹಿಸಬೇಕು
ರಾಜ್ಯ ವಕ್ಫ್ ಮಂಡಳಿಯಿಂದ ಹರಿಹರಕ್ಕೆ ಹೈಟೆಕ್ ಆಂಬ್ಯುಲೆನ್ಸ್
ಹರಿಹರ : ನಗರದ ಅಂಜುಮಾನ್ ಇಸ್ಲಾಮಿಯಾ ಸಮಿತಿಗೆ ರಾಜ್ಯ ವಕ್ಫ್ ಮಂಡಳಿ ಹೈಟೆಕ್ ಆಂಬ್ಯುಲೆನ್ಸ್ ನೀಡಿದ್ದು, ಅತಿ ಶೀಘ್ರದಲ್ಲೇ ಅದನ್ನು ಲೋಕಾರ್ಪಣೆ ಮಾಡಲಾಗುತ್ತದೆ
ವಿಶ್ವಚೇತನ ವಿದ್ಯಾನಿಕೇತನ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಕಂಡೆ
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ಗೆ ನೇಮಕ
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿ ಯನ್ನ ರಾಜ್ಯ ಉಪಾಧ್ಯಕ್ಷರಾಗಿ ನಗರದ ಕೆ.ವಿಶ್ವನಾಥ್ ಬಿಲ್ಲವ ನೇಮಕವಾಗಿದ್ದಾರೆ.
ಮಡಿವಾಳ ಸಮಾಜ ಮುಖ್ಯವಾಹಿನಿಗೆ ಬರದಿರಲು ಆರ್ಥಿಕ ಸಂಕಷ್ಟವೇ ಕಾರಣ
ಹರಿಹರ : ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಮಡಿವಾಳ ಬಂಧುಗಳು ತಮ್ಮ ಕಾಯಕದಿಂದಲೇ ಬದುಕು ಸಾಗಿಸುತ್ತಿದ್ದಾರೆ. ಇವರೆಲ್ಲಾ ಮುಖ್ಯ ವಾಹಿನಿಗೆ ಬರದಿರಲು ಆರ್ಥಿಕ ಸಂಕಷ್ಠವೇ ಮೂಲ ಕಾರಣವಾಗಿದೆ ಶಾಸಕ ಬಿ.ಪಿ.ಹರೀಶ್ ಹೇಳಿದರು.
ಗಡಿ ಭದ್ರತಾ ಪಡೆಯ ಬಲ್ಲೂರು ಬಸವರಾಜ ಮುದೇನೂರು ಅವರಿಗೆ ಆತ್ಮೀಯ ಸ್ವಾಗತ
23 ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ ದಾವಣಗೆರೆ ತಾಲ್ಲೂಕಿನ ಬಲ್ಲೂರು ಬಸವರಾಜ ಮುದೇನೂರು ಅವರನ್ನು ದಾವಣಗೆರೆ ಜಿಲ್ಲಾ ಪ್ಯಾರಾ ಮಿಲಿಟರಿ ಸಂಘ, ಜಿಲ್ಲಾ ರೈತರ ಒಕ್ಕೂಟದಿಂದ ಇಂದು ಸ್ವಾಗತಿಸಲಾಯಿತು.
ಕ್ಯಾನ್ಸರ್ ದಿನಾಚರಣೆ: ಜಿಎಂ ವಿ.ವಿ.ಕಾಲ್ನಡಿಗೆ ಜಾಥಾ
ನಗರದ ಜಿಎಂ ವಿಶ್ವವಿದ್ಯಾಲಯ ಹಾಗೂ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ನಿರೋಧಕತೆ ಮತ್ತು ಬೆಂಬಲ ಕುರಿತ ಕಾಲ್ನಡಿಗೆಯ ಜಾಗೃತಿ ಜಾಥಾ ನಡೆಯಿತು.
ಕಕ್ಕರಗೊಳ್ಳ ಪ್ರಾ.ಕೃ. ಪ. ಸ. ಸಂಘಕ್ಕೆ ಸುಭಾಶ್ಚಂದ್ರ ಅಧ್ಯಕ್ಷ, ಕಲ್ಲಿಂಗಪ್ಪ ಉಪಾಧ್ಯಕ್ಷ
ತಾಲ್ಲೂಕಿನ ಕಕ್ಕರಗೊಳ್ಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ಲಾಟರಿ ಮೂಲಕ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಸ್ವಾಭಿಮಾನಿಗಳಾಗಿ ಬದುಕುವ ಗಟ್ಟಿ ನಿರ್ಧಾರದ ಕ್ರಾಂತಿ ಆಗಲಿ
ಹೊನ್ನಾಳಿ : ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕುವ ಗಟ್ಟಿ ನಿರ್ಧಾರದ ಕ್ರಾಂತಿ ಆಗಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ವಯಸ್ಸಿನ ಮಕ್ಕಳು ಶಾಪವೂ ಹೌದು, ವರವೂ ಹೌದು
ವಯಸ್ಸಿನ ಮಕ್ಕಳು ಶಾಪವೂ ಹೌದು, ವರವೂ ಹೌದು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನೀರು ಕಾಯಿಸುವ ಬಾಯ್ಲರ್ ಬಿದ್ದು ವಿದ್ಯಾರ್ಥಿಯ ಸಾವು
ನೀರು ಕಾಯಿಸುವ ಬಾಯ್ಲರ್ಗೆ ಉರಿ ಹಾಕುತ್ತಿರುವಾಗ ಶಿಥಿಲಗೊಂಡಿದ್ದ ಬಾಯ್ಲರ್ ಇದ್ದಕ್ಕಿದ್ದಂತೆ ಮೈಮೇಲೆ ಬಿದ್ದು ವಿದ್ಯಾರ್ಥಿಯೋರ್ವ ಹಾಸ್ಟೆಲ್ನಲ್ಲಿ ಸಾವಿಗೀಡಾಗಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿ ಸಮಿತಿ ಸದಸ್ಯರಾಗಿ ಮಂಜಪ್ಪ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಸಮಿತಿ ಸದಸ್ಯರನ್ನಾಗಿ ಪರಿಸರ ತಜ್ಞ ಡಾ. ಎಸ್. ಮಂಜಪ್ಪ ಸಾರಥಿ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಪರಮಾತ್ಮನ ಮರೆತ ಮನುಷ್ಯನಿಗೆ ಮುಕ್ತಿ ಸಿಗದು
ರಾಣೇಬೆನ್ನೂರು : 'ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಪೊಗಳುವ ಕುನ್ನಿಗಳನೇನೆಂಬೆ ರಾಮನಾಥ' ಎನ್ನುವಂತೆ ಇಲ್ಲಿರುವುದೆಲ್ಲ ಪರಮಾತ್ಮನದೆ. ಈ ದೇಹ ಪರಮಾತ್ಮನದೆ. ಈ ದೇಹ ದಾನ ನೀಡಿದ ಪರಮಾತ್ಮನನ್ನು ಮರೆಯಬಾರದು
ವ್ಯಕ್ತಿ ಶಕುನಿಯಾಗದೇ ವೀರಭದ್ರನಾದರೆ ಸಮಾಜ ಸುಭದ್ರ
ಹೊನ್ನಾಳಿ : ವ್ಯಕ್ತಿ ಶಕುನಿ ಯಾದರೆ ಸಮಾಜವು ಛಿದ್ರಗೊಳ್ಳುತ್ತದೆ, ಶಿವನ ಅಪಮಾನ ತಡೆದು ದುಷ್ಟಶಕ್ತಿ ನಿರ್ನಾಮ ಮಾಡಿದ ವೀರಭದ್ರನಂತಾ ದರೆ ಸಮಾಜವು ಸುಭದ್ರವಾಗಿ ರುತ್ತದೆ ಎಂದು ರಂಭಾಪುರಿ ಡಾ. ವೀರ
ಸೋಮೇಶ್ವರ ಜಗದ್ಗುರುಗಳು ಹೇಳಿದರು.
ಬೆಳ್ಳಕ್ಕಿ ಹಿಂಡು ….
ಮಲೇಬೆನ್ನೂರು ಸಮೀಪದ ನಿಟ್ಟೂರು ರಸ್ತೆ ಅಕ್ಕಪಕ್ಕದಲ್ಲಿರುವ ಭದ್ರಾ ಅಚ್ಚುಕಟ್ಟು ಪ್ರದೇಶದ ಗದ್ದೆಗಳಲ್ಲಿ ಒಂದೆಡೆ ಮಹಿಳೆಯರು ಭತ್ತದ ನಾಟಿ ಮಾಡುತ್ತಿದ್ದರೆ, ಇನ್ನೊಂದಡೆ ಭತ್ತದ ನಾಟಿ ಮಾಡಲು ಟ್ರಾಕ್ಟರ್ ಗಳು ರೊಳ್ಳಿ ಹೊಡೆಯುತ್ತಿರುವ ಕೆಸರಿನ ಹುಳಗಳನ್ನು ತಿನ್ನಲು ಬೆಳ್ಳಕ್ಕಿ ಹಿಂಡು ಲಗ್ಗೆ ಇಟ್ಟಿರುವ ದೃಶ್ಯ ಸೋಮವಾರ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.
ಸಾಲಗಾರರಿಗೆ ಕಿರುಕುಳ ನೀಡಿದರೆ ಗಡಿಪಾರು
ರಾಣೇಬೆನ್ನೂರು : ಸಾಲಗಾರರಿಗೆ ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರು ವುದು, ಅಸಹ್ಯಪಡಿಸುವುದು ಅಥವಾ ಹಿಂಸಿಸು ವುದು, ಇಂತಹ ಯಾವುದೇ ರೀತಿಯ ಘಟನೆಗಳು ಮೈಕ್ರೋ ಫೈನಾನ್ಸ್ ನವರಿಂದ ಎರಡನೇ ಬಾರಿ ನಡೆದರೆ ಅವರನ್ನು ಗಡಿಪಾರು ಮಾಡಲಾಗುವುದು
ಒಳ್ಳೆಯ ಆಲೋಚನೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳಿ
ನ್ಯಾಮತಿ : ಪರಮಾತ್ಮ ಸರ್ವವ್ಯಾಪಿಯಾ ಗಿದ್ದಾನೆ. ಹಾಗಾಗಿ ಮನುಷ್ಯ ಸದಾ ಒಳಿತನ್ನೇ ಯೋಚಿಸುತ್ತಾ ಒಳ್ಳೆಯ ಜೀವನ ರೂಪಿಸಿಕೊಳ್ಳ ಬೇಕು ಎಂದು ಹಿರೇಕಲ್ಮಠದ ಡಾ. ಚನ್ನಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹರಪನಹಳ್ಳಿ : ಸಹಕಾರಿ ಕೃಷಿ – ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಬಿ. ರಾಜಕುಮಾರ್ ಆಯ್ಕೆ
ಹರಪನಹಳ್ಳಿ : ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ (ಪಿಕಾರ್ಡ್) ಅಧ್ಯಕ್ಷರಾಗಿ ಉಚ್ಚಂಗಿದುರ್ಗ ಕ್ಷೇತ್ರದ ಬಿ. ರಾಜಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹರಪನಹಳ್ಳಿಯ ಗೊಂಗಡಿ ನಾಗರಾಜ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ದೇವರಬೆಳಕೆರೆ, ಕುಣೆಬೆಳಕೆರೆ ಮಾರ್ಗವಾಗಿ ಹರಿಹರ, ದಾವಣಗೆರೆಗೆ ಬಸ್ ಸಂಚಾರ
ಮಲೇಬೆನ್ನೂರು : ದಾವಣಗೆರೆಯಿಂದ ದೇವರಬೆಳಕೆರೆ, ಕುಣಿಬೆಳಕೆರೆ, ನಂದಿತಾವರೆ ಮಾರ್ಗವಾಗಿ ಹರಿಹರಕ್ಕೆ ಮತ್ತು ಹರಿಹರದಿಂದ ನಂದಿತಾವರೆ, ದೇವರಬೆಳಕೆರೆ, ಕುಣಿಬೆಳಕೆರೆ ಮಾರ್ಗವಾಗಿ ದಾವಣಗೆರೆ ತಲುಪುವ ಕೆಎಸ್ಸಾರ್ಟಿಸಿಯ ಹೊಸ ಬಸ್ ಸಂಚಾರ ಭಾನುವಾರದಿಂದ ಆರಂಭವಾಗಿದ್ದು, ಕುಣಿಬೆಳಕೆರೆಯಲ್ಲಿ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಹೊನ್ನಾಳಿ : ಇಂದಿನಿಂದ ನಾಟಕ ಪ್ರರ್ದಶನ
ಹೊನ್ನಾಳಿ ಅಭಿವ್ಯಕ್ತಿ ಮತ್ತು ಯುವಶಕ್ತಿ, ಹಿರೇಕಲ್ಮಠ ಚನ್ನಪ್ಪಸ್ವಾಮಿ ಜನ ಕಲ್ಯಾಣ ಸೇವಾ ಟ್ರಸ್ಟ್ ಆಶ್ರಯದಲ್ಲಿ ಇಂದಿನಿಂದ ಮೂರು ದಿನ 3 ಪ್ರತ್ಯೇಕ ನಾಟಕಗಳ ಉಚಿತ ಪ್ರರ್ದಶನ ಪ್ರತಿದಿನ ಸಂಜೆ 7 ಗಂಟೆಗೆ ಕನಕದಾಸ ರಂಗ ಮಂದಿರದಲ್ಲಿ ನಡೆಯಲಿದೆ
ಸಾಲಬಾಧೆ: ದೀಟೂರಿನಲ್ಲಿ ರೈತ ಆತ್ಮಹತ್ಯೆ
ಹರಿಹರ : ಸಾಲಬಾಧೆ ತಾಳಲಾರದೆ ದೀಟೂರು ಗ್ರಾಮದ ರೈತನೊಬ್ಬನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ನಡೆದಿದೆ.
ಸ್ವಾವಲಂಬಿ ಬದುಕಿಗೆ ಉತ್ತಮ ಶಿಕ್ಷಣ ಅಗತ್ಯ : ಜಿ.ಬಿ.ವಿನಯ್
ಜಗಳೂರು : ಇಂದಿನ ಪ್ರಪಂಚದಲ್ಲಿ ಜ್ಞಾನ, ಶಿಕ್ಷಣ, ತಂತ್ರಜ್ಞಾನ ಸೇರಿದಂತೆ ಎಲ್ಲವೂ ಲಭ್ಯವಿದೆ. ಬೇಕಾಗಿರುವುದು ಗಟ್ಟಿ ಮನಸ್ಸು ಮಾತ್ರ. ಒಳ್ಳೆಯ ಶಿಕ್ಷಣ ಪಡೆಯುವ ಮೂಲಕ ಸ್ವತಂತ್ರ ಮತ್ತು ಧೈರ್ಯದಿಂದ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ಸಲಹೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ
ಗೌರವ ಧನ ಹೆಚ್ಚಳ ಮತ್ತು ಆರನೇ ಗ್ಯಾರಂಟಿ ಜಾರಿಗೆ ಒತ್ತಾಯಿಸಿ, ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ಸಂಘಟನೆಯಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭವಾಗಿದೆ.
ಹರಿಹರ : ಹೆಚ್ಚುವರಿ ಬಸ್ಸಿಗೆ ಆಗ್ರಹಿಸಿ ತಡರಾತ್ರಿ ಪ್ರತಿಭಟನೆ
ಹರಿಹರ : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದ ಮಹಿಳಾ ಪ್ರಯಾಣಿಕರು ಹೆಚ್ಚುವರಿ ಬಸ್ ಬಿಡುವಂತೆ ಆಗ್ರಹಿಸಿ, ಬಸ್ಸಿಗೆ ಅಡ್ಡಗಟ್ಟಿ ಭಾನುವಾರ ತಡರಾತ್ರಿ ಪ್ರತಿಭಟನೆ ನಡೆಸಿದರು.
6 ರಂದು ಕಡ್ಲೇಬಾಳು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ
ದಾವಣಗೆರೆ ತಾಲ್ಲೂಕಿನ ಕಡ್ಲೇಬಾಳು ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವವು ಇದೇ ದಿನಾಂಕ 6ರಂದು ನಡೆಯಲಿದೆ. ಉತ್ಸವದ ಅಂಗವಾಗಿ ಇಂದಿನಿಂದ ಇದೇ ದಿನಾಂಕ 7ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ವೆಂಕಟೇಶ್ ರೆಡ್ಡಿ
ಮಲೇಬೆನ್ನೂರು : ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ವೆಂಕಟೇಶ್ ರೆಡ್ಡಿ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಎಂ.ಕೆ. ಪಾಟೀಲ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಹರಿಹರದ ಹಿರಿಯ ಸಾಹಿತಿ ಕಲೀಂಬಾಷ ನಿಧನ
ಹರಿಹರ : ಇಲ್ಲಿನ ವಿದ್ಯಾನಗರದ ನಿವಾಸಿ, ಹಿರಿಯ ಸಾಹಿತಿ ಜೆ. ಕಲೀಂಬಾಷ (74) ಅವರು ಸೋಮ ವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ.
ನಗರದಲ್ಲಿ ಇಂದು ಜಿಲ್ಲಾ ಪ್ಯಾರಾ ಮಿಲಿಟರಿ ಸಂಘದಿಂದ ಸ್ವಾಗತ
ಜಮ್ಮು ಕಾಶ್ಮೀರ್, ಪಂಜಾಬ್, ರಾಜಸ್ಥಾನ್, ಮೇಘಾಲಯ, ಅಸ್ಸಾಂ ಹೀಗೆ ದೇಶದ ಹಲವು ಗಡಿ ಭಾಗಗಳಲ್ಲಿ ತಾಯ್ನಾಡಿನ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿ, ತನ್ನ ಹುಟ್ಟೂರಾದ ಬಲ್ಲೂರಿಗೆ ಇಂದು ಆಗಮಿಸುತ್ತಿರುವ ಬಸವರಾಜ್ ಅವರಿಗೆ ಜಿಲ್ಲಾ ಪ್ಯಾರಾ ಮಿಲಿಟರಿ ಸಂಘದ ವತಿಯಿಂದ ಹಾಗೂ ದೇಶಭಕ್ತ ಜನತೆಯಿಂದ ಅದ್ದೂರಿ ಸ್ವಾಗತ ನಡೆಯಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಪ್ಯಾರಡೈಮ್ ಎಸ್. 25 ಸೀರೀಸ್ ಲೋಕಾರ್ಪಣೆ
ನಗರದ ಗುಪ್ತಾ ಶಾಪೆಯಲ್ಲಿ ಸೋಮವಾರ ಸ್ಯಾಮ್ಸಂಗ್ ಗ್ಯಾಲಕ್ಷಿ ಪ್ಯಾರಡೈಮ್ ಎಸ್-25 ಸೀರೀಸ್ ಹೊಸ ಸ್ಮಾರ್ಟ್ ಫೋನ್ ಲೋಕಾರ್ಪಣೆ ಮಾಡಲಾಯಿತು.