ಹರಪನಹಳ್ಳಿ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಗೆ ಕಡಿವಾಣ ಹಾಕುವಂತೆ ಹಾಗೂ ಸರ್ಕಾರದ ನಿಯಮಾವಳಿಗಳನ್ನು ಮೀರಿ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಹರಪನಹಳ್ಳಿ ತಾಲ್ಲೂಕಿಗೆ 16 ಕೋಟಿ ರೂ. ಮಂಜೂರು
ಹರಪನಹಳ್ಳಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹರಪನಹಳ್ಳಿ ತಾಲ್ಲೂಕಿಗೆ 16 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.
ದೇವರಮನಿ ದೂಡಾ ಅಧ್ಯಕ್ಷ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದೇವರಮನಿ ಶಿವಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಪೇದೆ ಸಾವು: ಎಫ್ಐಆರ್ ದಾಖಲು
ಬಂದೂಕು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎಆರ್ನ ಶಸ್ತ್ರಾಗಾರ ಸಿಬ್ಬಂದಿ ಓರ್ವನ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶರಣರ ವಚನಗಳನ್ನು ಮಕ್ಕಳಿಗೆ ಕಲಿಸಬೇಕು
ಹರಪನಹಳ್ಳಿ : ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ಮಕ್ಕಳಿಗೆ ಕಲಿಸಿ ಎಂದು ಹಾವೇರಿ ಜಿಲ್ಲೆ ನರಸೀಪುರದ ಅಂಬಿಗರ ಚೌಡಯ್ಯನವರ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಇಂದು ತಾ.ಕಸಾಪ ಉಪನ್ಯಾಸ
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಎಸ್ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆ.
ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಕಳ್ಳನ ಬಂಧಿಸಿದ ಪೊಲೀಸರು
ಹೊನ್ನಾಳಿ : ಹೊನ್ನಾಳಿಯಲ್ಲಿ ಮನೆಯೊಂದನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಬಂಧಿಸಿದ ಪೊಲೀಸರು, 5.50 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಮಲೇಬೆನ್ನೂರಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 260 ವಿದ್ಯಾರ್ಥಿಗಳು
ಮಲೇಬೆನ್ನೂರು : ನಾಳೆ ಶುಕ್ರವಾರದಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡವನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಿದ್ದು, 7 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ನಗರದಲ್ಲಿ ನಾಡಿದ್ದು ಸಿದ್ಧ ಕಣ್ಣಿನ ಹನಿ
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ಇದೇ ದಿನಾಂಕ 23 ರ ಭಾನುವಾರ ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ - ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಅತ್ಯಾಚಾರ ಪ್ರಕರಣ : ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ, 35 ಸಾವಿರ ರೂ ದಂಡ
ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಬಲಾತ್ಕಾರ ಮಾಡಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ-1 ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ ದಂಡ ವಿಧಿಸಿದೆ.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ರಾಜನಹಳ್ಳಿ ಕಲಾ ಭೀಮಾನಂದ್ ಮತ್ತು ಮಕ್ಕಳು, ದಾವಣಗೆರೆ ಇವರು ಇಂದಿನ ದಾನಿಗಳಗಿದ್ದಾರೆ.
ನಗರದಲ್ಲಿ ಇಂದು ಶಾಲಾ – ಕಾಲೇಜು ಅಂಗಳದಲ್ಲಿ ತಾ.ಕಸಾಪ ಉಪನ್ಯಾಸ
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳ ದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪ ನ್ಯಾಸ ಕಾರ್ಯಕ್ರಮವು ಎಂ.ಎಂ. ಶಿಕ್ಷಣ ಮಹಾವಿ ದ್ಯಾಲಯದಲ್ಲಿ ಇಂದು ಮಧ್ಯಾಹ್ನ 2.30 ಗಂಟೆಗೆ ನಡೆಯಲಿದೆ.
ಬಿಎಸ್ಎನ್ಎಲ್ ಪ್ರಾಂಚೈಸಿಗಳು ರಜಾ ದಿನ ಕಾರ್ಯನಿರ್ವಹಣೆ
ದಾವಣಗೆರೆ ಮತ್ತು ಚಿತ್ರದುರ್ಗ ಪ್ರದೇಶಗಳ ಎಲ್ಲಾ ಬಿಎಸ್ಎನ್ಎಲ್ ಗ್ರಾಹಕರು ಪ್ರಸಕ್ತ ಹಣಕಾಸು ವರ್ಷ ಮುಕ್ತಾಯ ವನ್ನು ಪರಿಗಣಿಸಿ, ಎಲ್ಲಾ ಬಿಎಸ್ಎನ್ಎಲ್ ಸಿಎಸ್ಸಿ ಗಳನ್ನು ಇದೇ ದಿನಾಂಕ 23 ಮತ್ತು ದಿನಾಂಕ 30 ರಂದು ಸಾಮಾನ್ಯ ಕೆಲಸದ ಸಮಯದೊಂದಿಗೆ ತೆರೆದಿಡಲು ನಿರ್ಧರಿಸಲಾಗಿದೆ.
ಸಾಲಿಗ್ರಾಮ ಗಣೇಶ್ ಶೆಣೈಗೆ ಕನ್ನಡ ರತ್ನ
ರಾಯಭಾಗ ತಾಲ್ಲೂಕಿನ ಬ್ಯಾಕೂಡಿನ ಲಕ್ಕಮ್ಮದೇವಿ ಕಲಾ ಪೋಷಕರ ಸಂಘ ಕೊಡಮಾಡುವ `ಕನ್ನಡ ರತ್ನ' ಪ್ರಶಸ್ತಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಭಾಜನರಾಗಿದ್ದಾರೆ.
ಇಂದು ಅಕ್ಕಮಹಾದೇವಿ ಜಯಂತಿ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಶಿವ ಶರಣೆ ಅಕ್ಕಮಹಾದೇವಿ ಜಯಂತಿ ಆಚರಿಸಲಾಗುವುದು.
ನಗರದಲ್ಲಿ ಇಂದು ಸಿಇಟಿ ತರಬೇತಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ ಶಿಬಿರವನ್ನು ಇಂದಿನಿಂದ ನಡೆಸಲಾಗುವುದು. ಪ್ರತಿ ವಿಷಯದ ಮುದ್ರಿತ ನೋಟ್ಸ್, ಪ್ರಶ್ನೆ ಪತ್ರಿಕೆಗಳನ್ನು ತರಗತಿಗಳಲ್ಲೇ ವಿತರಿಸಲಾಗುವುದು ಹಾಗೂ ಎರಡು ಮಾದರಿ ಪರೀಕ್ಷೆಗಳನ್ನು ನಡೆಸಲಾಗುವುದು.
ದೊಣೆಹಳ್ಳಿ : ನಾಳೆ ದಂತ ಪಂಕ್ತಿ ಜೋಡಣಾ ಶಿಬಿರ
ದೊಣೆಹಳ್ಳಿ ಶರಣ ಬಸವೇಶ್ವರ ದಾಸೋಹ ಮಠದ ವತಿಯಿಂದ ನಾಡಿದ್ದು ದಿನಾಂಕ 22 ಮತ್ತು 23ರಂದು ಹಳ್ಳಿಗಾಡಿನ ಜನರಿಗಾಗಿ ಮಠದಲ್ಲಿ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ನಡೆಯಲಿದೆ.
ನಗರದಲ್ಲಿ ಇಂದು ವಿಶ್ವ ಗ್ರಾಹಕರ ಹಕ್ಕುಗಳ ದಿನ
ಆರ್.ಎಲ್ ಕಾನೂನು ಕಾಲೇಜು ರೆಫರೆನ್ಸ್ ಹಾಲ್ನಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನ ಕಾರ್ಯಕ್ರಮವು ಇಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಕೆ.ಎನ್. ಪ್ರದೀಪ್ ವಹಿಸಲಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ಡಿ.ಕೆ. ಉದ್ಘಾಟಿಸಲಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ : ಶೀಘ್ರ ಅನುದಾನಕ್ಕೆ ಸಂಸತ್ನಲ್ಲಿ ಸಂಸದ ಗೋವಿಂದ ಕಾರಜೋಳ ಆಗ್ರಹ
ಚಿತ್ರದುರ್ಗ, ದಾವಣಗೆರೆ, ತುಮಕೂರು ಚಿಕ್ಕಮಗಳೂರು ಜಿಲ್ಲೆಗಳ ರೈತರ ಆಶಾಕಿರಣ ಭದ್ರಾ ಮೇಲ್ದಂಡೆ ಯೋಜನೆ ಕೆಲಸವು ಕುಂಟುತ್ತಾ ಸಾಗಿದ್ದು, ಮಧ್ಯ ಕರ್ನಾಟಕದ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಶೀಘ್ರ ಅನುದಾನ ಒದಗಿಸುವಂತೆ ಸಂಸದ ಗೋವಿಂದ ಎಂ.ಕಾರಜೋಳ ಒತ್ತಾಯಿಸಿದರು.
ಜಿಲ್ಲೆಯಾದ್ಯಂತ ಕಾಂಗ್ರೆಸ್ ಶಾಸಕರಿದ್ದರೂ ಬಜೆಟ್ನಲ್ಲಿ ಜಿಲ್ಲೆಗೆ ಏನನ್ನೂ ತರಲಿಲ್ಲ
ಜಿಲ್ಲೆಯಾದ್ಯಂತ ಕಾಂಗ್ರೆಸ್ ಶಾಸಕರಿದ್ದರೂ ಸಹ ಬಜೆಟ್ನಲ್ಲಿ ಜಿಲ್ಲೆಗೆ ಏನನ್ನೂ ತರಲಿಲ್ಲ, ನಮ್ಮ ಪಕ್ಷದ ಸರ್ಕಾರ ಇದ್ದಾಗ ಮಂಜೂರಾಗಿದ್ದ ಬಡೆಬಸಾಪುರ ಬಳಿಯ ಜವಳಿ ಪಾರ್ಕ್ ಅನ್ನೇ ಮತ್ತೊಮ್ಮೆ ಘೋಷಣೆ ಮಾಡಲಾಗಿದೆ.
ಅಂಬೇಡ್ಕರ್ ಭವನ ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನೆ
ಯಾವುದೇ ನೆಪ ಹೇಳದೇ ಏಪ್ರಿಲ್ ತಿಂಗಳಲ್ಲಿ ನಡೆಯುವ ಅಂಬೇಡ್ಕರ್ ಜಯಂತಿ ದಿನದಂದೇ ಅಂಬೇಡ್ಕರ್ ಭವನದ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲೇ ಬೇಕೆಂದು ಆಗ್ರಹಿಸಿ
ಕಬ್ಬೂರಿನಲ್ಲಿ ಗೋಮಾಳ-ಕೆರೆ ಒತ್ತುವರಿ ಹದ್ದುಬಸ್ತ್ ಮಾಡಲು ಇಂದು ಸರ್ವೆ
ಒತ್ತುವರಿಯಾಗಿರುವ ಗೋಮಾಳ ಜಮೀನು ಮತ್ತು ಕೆರೆ ಜಮೀನುಗಳನ್ನು ಹದ್ದುಬಸ್ತ್ ಮಾಡಲು ನಾಳೆ ದಿನಾಂಕ 19 ರಂದು ಭೂಮಾಪಕರನ್ನು ನಿಯೋಜಿಸಲಾಗಿದೆ.
ಭಾರತೀಯ ಸೇನೆಯ ಅಗ್ನಿ ವೀರ್ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನ
ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಉಚಿತ ಕವನ ಸ್ಪರ್ಧೆ
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ ಮಟ್ಟದ ಉಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕೆ ತರಬೇತಿ
ಚಿತ್ರದುರ್ಗ ಜಿಲ್ಲೆಯ ಐಯ್ಯನಹಳ್ಳಿ, ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಭರಮಸಾಗರದಲ್ಲಿ ನಾಡಿದ್ದು ಗುರುವಂದನಾ ಕಾರ್ಯಕ್ರಮ
ಭರಮಸಾಗರ : ಚಿತ್ರದುರ್ಗ ತಾಲ್ಲೂಕು ಭರಮಸಾಗರ ಮಲ್ಲಾರಿರಾವ್ ನಾಡಿಗೇರ್ ಕುಟುಂಬದವರಿಂದ ನಾಡಿದ್ದು ದಿನಾಂಕ 21 ಮತ್ತು 22 ರಂದು ಭರಮಸಾಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಹತ್ತಿರವಿರುವ ಶ್ರೀ ಗುರುದತ್ತ ಮಂದಿರದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದೊಡ್ಡಾಲಘಟ್ಟದಲ್ಲಿ ಇಂದು ಶ್ರೀ ರಂಗನಾಥಸ್ವಾಮಿ ರಥೋತ್ಸವ
ಚಿತ್ರದುರ್ಗ ತಾಲ್ಲೂಕು ದೊಡ್ಡಾಲಘಟ್ಟ (ಕೋಟೆ) ಗ್ರಾಮದ ಶ್ರೀ ರಂಗನಾಥಸ್ವಾಮಿ ರಥೋತ್ಸವ ಇಂದು ಸಂಜೆ 5ಕ್ಕೆ ಪ್ಯಾತಪ್ಳರ ಸಣ್ಣ ನಾಗಪ್ಪ ಮತ್ತು ಮಕ್ಕಳಿಂದ ಶ್ರೀ ರಂಗನಾಥ ಸ್ವಾಮಿ ರಥೋತ್ಸವ ನಡೆಯಲಿದೆ.
6 ಟಿ.ಎಂ.ಸಿ ನೀರು ಹರಿಸಲು ಒತ್ತಾಯ ಭಾರತೀಯ ರೈತ ಒಕ್ಕೂಟ ವಿರೋಧ
ಸಿಂಧನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಮುಖಂಡತ್ವದಲ್ಲಿ ಸರ್ಕಾರಕ್ಕೆ ಭದ್ರಾ ಅಣೆಕಟ್ಟಿಯಿಂದ 6 ಟಿಎಂಸಿ ನೀರು ಬಿಡಬೇಕೆಂದು ಒತ್ತಾಯಿಸಿರುವುದನ್ನು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಎ.ಎಂ. ಮಂಜುನಾಥ್ ವಿರೋಧಿಸಿದ್ದಾರೆ.
ಕೊಲೆ ಅಪರಾಧಿಗಳಿಗೆ ಜೀವಾವಧಿ
ಹಣ ದೋಚುವ ಉದ್ದೇಶದಿಂದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರೂ ದಂಡ ವಿಧಿಸಿದೆ.
ಅಪ್ರಾಪ್ತ ವಾಹನ ಚಾಲನೆ : 25 ಸಾವಿರ ರೂ. ದಂಡ, 1 ವರ್ಷ ವಾಹನ ನೋಂದಣಿ ರದ್ದು
ಅಪ್ರಾಪ್ತ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಮಾಲೀಕರಿಗೆ 1ನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯವು 25 ಸಾವಿರ ದಂಡ, ಒಂದು ದಿನ ಸಾದಾ ಸಜೆ ಹಾಗೂ 1 ವರ್ಷ ವಾಹನ ನೋಂದಣಿಯನ್ನು ರದ್ದು ಪಡಿಸಿದೆ.
ಮನೆಗಳ್ಳನ ಬಂಧನ : 3.15 ಲಕ್ಷ ಮೌಲ್ಯದ ಸ್ವತ್ತು ವಶ
ಮನೆ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು 3.15 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ
ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವನನ್ನು ಹಾಡು ಹಗಲೇ ಬರ್ಬರವಾಗಿ ಕೊಲೆ ಮಾಡಿದ ಹಂತಕನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ನಗರದಲ್ಲಿಂದು ದೃಶ್ಯ ಕಲೆಯ ಬಹುಮುಖಿ ಆಯಾಮಗಳು ವಿಚಾರ ಸಂಕಿರಣ
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಹರಿಹರದಲ್ಲಿನ ಊರಮ್ಮ ಜಾತ್ರೆ ಎತ್ತುಗಳ ಅದ್ಧೂರಿ ಮೆರವಣಿಗೆ
ಹರಿಹರ : ನಗರದಲ್ಲಿ ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಎತ್ತು ಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಹರಾಜು ಪ್ರಕ್ರಿಯೆ ಮುಂದೂಡಿಕೆ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ
ಹರಿಹರ : ನಗರದ ಕ್ರೀಡಾಂಗಣ ಇಲಾಖೆಯ ಅಡಿಯಲ್ಲಿ ಬರುವ 22 ಮಳಿಗೆಗಳ ಹರಾಜ್ ಪ್ರಕ್ರಿಯೆಯನ್ನು, ದಿಢೀರ್ ಮುಂದಕ್ಕೆ ಹಾಕಿರುವ ಕ್ರಮವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಮುಖಂಡರು ಕ್ರೀಡಾ ಇಲಾಖೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಪರೀಕ್ಷೆ ಬಗ್ಗೆ ಭರವಸೆ ಆತ್ಮವಿಶ್ವಾಸ ಇರಲಿ, ಭಯ ಬೇಡ
ಹರಿಹರ : ವಿದ್ಯಾರ್ಥಿಗಳೇ ನಿಮ್ಮ ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಮಾತ್ರ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಬಹುದು ಎಂದು ಹರಪನಹಳ್ಳಿ ಎಸ್.ಯು.ಜೆ.ಎಂ ಕಾಲೇಜಿನ ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ ಪರೀಕ್ಷಾ ತಂತ್ರಗಳನ್ನು ವಿವರಿಸಿದರು.

ಪಿಎಲ್ಡಿ ನಿರ್ದೇಶಕರಿಗೆ ಎಸ್ಎಆರ್ ಅಭಿನಂದನೆ
ನಗರದ ಪಿಎಲ್ಡಿ ಬ್ಯಾಂಕ್ಗೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರುಗಳಾಗಿ ಆಯ್ಕೆಯಾಗಿರುವ ಎ.ಎಂ. ಮಂಜುನಾಥ್, ಕೆ.ಎಸ್. ವಸಂತ ಕುಮಾರ್, ಹೆಚ್.ಆರ್. ಅಶೋಕ್, ದೇವೇಂದ್ರಪ್ಪ, ಗೌಡ್ರ ಮಂಜುನಾಥ್ ಅವರುಗಳನ್ನು ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ ಅವರು ಅಭಿನಂದಿಸಿದ್ದಾರೆ.

ಹೊನ್ನಾಳಿ : ಶೀಘ್ರವೇ ಕೃಷಿಕ ಸಮಾಜದ ಸಭೆ
ಹೊನ್ನಾಳಿ : ಶಾಸಕರು ಭಾಗವಹಿಸಿ ರುವ ಅಧಿವೇಶನ ಮುಗಿದ ನಂತರ ದಿನಾಂಕ ನಿಗದಿಗೊಳಿಸಿ, ಅವಳಿ ತಾಲ್ಲೂಕಿನ ಕೃಷಿಕ ಸಮಾಜದ ಸಭೆ ಕರೆದು ಕೃಷಿಕ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಕೃಷಿ ಉಪನಿರ್ದೇಶಕ ರೇವಣಸಿದ್ದನ ಗೌಡ ಹೇಳಿದರು.

ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ದಾವಣಗೆರೆಯಲ್ಲೇ ಮರುಸ್ಥಾಪಿಸಿ
ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ನ (ಒಐಸಿ) ವಿಭಾಗೀಯ ಕಚೇರಿ ಯನ್ನು ದಾವಣಗೆರೆಯಲ್ಲೇ ಮರುಸ್ಥಾಪಿಸಿ ಮುಂದುವರೆಸು ವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಪರೀಕ್ಷೆ ಒತ್ತಡ ಬೇಡ : ಧೈರ್ಯ, ಲವಲವಿಕೆಯಿಂದ ಪರೀಕ್ಷೆ ಎದುರಿಸಿ
ಮಲೇಬೆನ್ನೂರು : ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಖ್ಯವಾಗಿದ್ದು, ಇಲ್ಲಿ ನೀವು ಪರಿಶ್ರಮ ಹಾಕಿ, ಚೆನ್ನಾಗಿ ಓದಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ, ಮುಂದಿನ ಓದಿಗೆ ಅನುಕೂಲವಾಗಲಿದೆ ಎಂದು ಮಲೇಬೆನ್ನೂರಿನ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಹುರಿದುಂಬಿಸಿದರು.

ಎಂಇಎಸ್ ಉದ್ಧಟತನ ಹತ್ತಿಕ್ಕುವಂತೆ ಆಗ್ರಹ
ಮಹಾರಾಷ್ಟ್ರ ಏಕೀಕರಣ ಸಮಿತಿಯ ಉದ್ಧಟತನ ಹತ್ತಿಕ್ಕುವಂತೆ ಸರ್ಕಾರವನ್ನು ಒತ್ತಾಯಿಸಿ ನಗರದಲ್ಲಿ ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಸಾಂಕೇತಿಕ ಧರಣಿ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಕಟ್ಟಡ ಅಲಂಕಾರಿಕವಾಗಿ ಕಾಣಬೇಕೆಂದರೆ, ಪರಿಣಿತಿ ಪಡೆದ ಫ್ಲಂಬರ್ನಿಂದ ಮಾತ್ರ ಸಾಧ್ಯ
ಕುಡಿಯುವ ನೀರಾಗಲೀ, ಒಳ ಚರಂಡಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಯಾವುದೇ ಕಟ್ಟಡವನ್ನು ಅಲಂಕಾರಿಕವಾಗಿ ಕಾಣಬೇಕೆಂದರೆ, ಪರಿಣಿತಿ ಪಡೆದ ಫ್ಲಂಬರ್ನಿಂದ ಮಾತ್ರ ಸಾಧ್ಯ.

ಹರಿಹರ : ಹದಿಹರೆಯದ ಸಮಸ್ಯೆಗಳ ಉಪನ್ಯಾಸ
ಹರಿಹರ : ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ (ದಾವಣಗೆರೆ) ಹಾಗೂ ಎನ್ಎಸ್ಎಸ್ ಘಟಕ ಸರ್ಕಾರಿ ಪಾಲಿ ಟೆಕ್ನಿಕ್ (ಹರಿಹರ) ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹರಿಹರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಜಿಲ್ಲಾ ವಕೀಲರ ಸಂಘದಿಂದ ಮಜ್ಜಿಗೆ ವಿತರಣೆ ಕಾರ್ಯ ಆರಂಭ
ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಹಕಾರ ದೊಂದಿಗೆ ಬೇಸಿಗೆ ಪ್ರಯುಕ್ತ ಮಜ್ಜಿಗೆ ವಿತರಣೆಯು ನಿನ್ನೆ ಪ್ರಾರಂಭವಾಯಿತು.

ಅಕ್ರಮ ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಜಿ.ಬಿ. ವಿನಯ್ ಆಗ್ರಹ
ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ಕಲ್ಲು ಕ್ವಾರಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪವಿಭಾಗಾಧಿಕಾರಿ ಅಭಿಷೇಕ್, ರಶ್ಮಿ ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿಗಳು ನಿನ್ನೆ ಭೇಟಿ ನೀಡಿದ್ದರು.

ಹರಪನಹಳ್ಳಿಯಲ್ಲಿ ಅಲಿಕಲ್ಲು ಸಹಿತ ಮಳೆ
ಹರಪನಹಳ್ಳಿ : ಬಿರು ಬಿಸಿಲಿನಿಂದ ಬಸವಳಿದಿದ್ದ ತಾಲ್ಲೂಕಿನ ಜನತೆಗೆ ಕಳೆದ ಎರಡು ದಿನಗಳಿಂದ ಪೂರ್ವ ಮುಂಗಾರು ಮಳೆ ಸಿಂಚನವಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದ ಜನತೆಗೆ ತುಸು ನೆಮ್ಮದಿ ಉಂಟಾಗಿದೆ.

ಐಎಂಎ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ
ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸದಸ್ಯರಿಗೆ ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬೆಟ್ಟದ ತುದಿಯಲ್ಲಿ `ತಾಯಿ ಮಮತೆ’
ತಾಯಿ ಮತ್ತು ಮಕ್ಕಳ ಮಮತೆಯ ಮಧ್ಯೆ ಇರುವ ಅವಿನಾಭಾವ ಸಂಬಂಧಕ್ಕೆ ಇಡೀ ವಿಶ್ವದಲ್ಲಿಯೇ ಬೇರೆ ಉದಾಹರಣೆಗಳಿಲ್ಲ ಎಂಬುದಕ್ಕೆ ಈ ವಾಯುಪುತ್ರನೇ ಮೂಕ ಸಾಕ್ಷಿಯಾಗಿದೆ.

ದಾವಣಗೆರೆ ಗೃಹಿಣಿ ಸ್ಪರ್ಧೆ ಕವಿತಾ ಚೇತನ್ ಪ್ರಥಮ
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನಡೆದ `ದಾವಣಗೆರೆ ಗೃಹಿಣಿ ಸ್ಪರ್ಧೆಯಲ್ಲಿ ಕವಿತಾ ಚೇತನ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.

ನಾರಿಯರು ಶಿವ ಶಕ್ತಿಯ ಸ್ವರೂಪ
ನಾರಿಯರು ಶಿವಶಕ್ತಿಯ ಸ್ವರೂಪವಾಗಿದ್ದು, ಒಂದು ಸ್ತ್ರೀ ನೂರು ಗುರುಗಳಿಗೆ ಸಮ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಮನೂರು ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ವಿಶ್ಲೇಶಿಸಿದರು.

ಚಂದ್ರವಳ್ಳಿ ಕೆರೆ ಬಳಿ ವಿಜಯನಗರ ಕಾಲದ ಸ್ತ್ರೀ ಪ್ರತಿಮೆ ಪತ್ತೆ
ಚಿತ್ರದುರ್ಗ, ಮಾ.19- ಇತಿಹಾಸ ಪ್ರಸಿದ್ಧವಾದ ಚಂದ್ರವಳ್ಳಿಯ ಕೆರೆಯ ಪರಿಸರದಲ್ಲಿ ಒಂದು ಅಪರೂಪದ ಸ್ತ್ರೀ ಪ್ರತಿಮೆಯನ್ನು ನಿವೃತ್ತ ಇಂಜಿನಿಯರ್ ಚಂದ್ರಶೇಖರಪ್ಪ ಗುಂಡೇರಿ ಪತ್ತೆ ಮಾಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೇಯರ ಫೆಡರೇಷನ್ನಿನ ತಾಲ್ಲೂಕು ಸಮಿತಿಗೆ ಆಯ್ಕೆ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ನ ದಾವಣಗೆರೆ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ಕೆ.ಸಿ. ನಿರ್ಮಲ, ಕಾರ್ಯದರ್ಶಿಯಾಗಿ ಡಿ. ಗೀತಾ, ಖಜಾಂಚಿಯಾಗಿ ಎಸ್.ಎಮ್. ಸಾಕಮ್ಮ

ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಲು ವಿಶ್ವಾರಾಧ್ಯ ಕರೆ
ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯ ಸರಿಯಾಗಿದ್ದರೆ ಮಾತ್ರ ಶೈಕ್ಷಣಿಕ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಡಾ. ವಿಶ್ವಾರಾಧ್ಯ ಹೇಳಿದರು.

ಜಿಗಳಿ : ಕರ್ಣಾಟಕ ಬ್ಯಾಂಕಿನ 10ನೇ ವಾರ್ಷಿಕೋತ್ಸವ ಆಚರಣೆ
ಮಲೇಬೆನ್ನೂರು, ಮಾ.19- ಜಿಗಳಿ ಗ್ರಾಮದಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆಯ 10ನೇ ವರ್ಷದ ವಾರ್ಷಿಕೋತ್ಸವವನ್ನು ಮಂಗಳವಾರ ಸರಳವಾಗಿ ಸಂಭ್ರಮದಿಂದ ಆಚರಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವ ಧನ ಹೆಚ್ಚಳ, ನಿವೃತ್ತ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಕುರಿತು ಅಂಗನವಾಡಿ ಸಂಘಟನೆಗಳ ನಾಯಕರೊಂದಿಗೆ ನಾಳೆ ಸಭೆ.

ಜೀವನ ಕಟ್ಟಿಕೊಳ್ಳಲು ಪರೀಕ್ಷೆಗಳ ಪಾತ್ರ ಅತ್ಯಂತ ಪ್ರಮುಖ
ಹರಪನಹಳ್ಳಿ : ಜೀವನ ಕಟ್ಟಿಕೊಳ್ಳಲು ಪರೀಕ್ಷೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜ್ಞಾನದೀಪ ನವೋದಯ ಕೋಚಿಂಗ್ ಸೆಂಟರ್ನ ಸಂಸ್ಥಾಪಕ ನಾಗರಾಜ ಮ್ಯಾಕಿ ತಿಳಿಸಿದರು.

ಬಡವರ ಮಕ್ಕಳೂ ಐಎಎಸ್, ಐಪಿಎಸ್ ಆಗಬೇಕು
ಹರಿಹರ : ಬಡವರ ಮಕ್ಕಳೂ ಐಎಎಸ್, ಐಪಿಎಸ್ ಆಗಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಯಾವುದೇ ಅವಕಾಶಗಳಿಂದ ವಂಚಿತರಾಗಬಾರದು.

ರಜತ ಮಹೋತ್ಸವದ ಸಂಭ್ರಮದಲ್ಲಿ ಬಾಪೂಜಿ ಪಾಲಿಟೆಕ್ನಿಕ್ ಶ್ಯಾಬನೂರು
ನಗರದ ಬಾಪೂಜಿ ಪಾಲಿಟೆಕ್ನಿಕ್ ಶ್ಯಾಬನೂರು ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವವು ಸಂಭ್ರಮದಿಂದ ನಡೆಯಿತು.

ಅಡಿಕೆ ಮಾರುಕಟ್ಟೆ ದರದ ಸ್ಥಿರತೆ ಖೇಣಿ ದಾರರಲ್ಲಿ ಒಮ್ಮತ ಮೂಡಬೇಕಿದೆ
ಹೊನ್ನಾಳಿ : ಪ್ರಸ್ತುತ ದಿನಗಳಲ್ಲಿ ಅಡಿಕೆ ಖೇಣಿದಾರರು ಅನೇಕ ತೊಂದರೆ, ಕೆಲವೊಂದು ಬಾರಿ ನಷ್ಟವನ್ನು ಅನುಭವಿಸುತ್ತಿದ್ದು ಇದಕ್ಕೆಲ್ಲ ಸೂಕ್ತವಾದ ಪರಿಹಾರವನ್ನು ಸಭೆ ಮೂಲಕ ಕಂಡುಕೊಳ್ಳಬೇಕಿದೆ ಎಂದು ತರಗನಳ್ಳಿ ಮುರುಗೇಶ್ ಹೇಳಿದರು.

ಒಣಗಿದ ಮರ ತೆರವಿಗೆ ಒತ್ತಾಯ
ನಗರದ ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗ ಸಂಪೂರ್ಣ ಒಣಗಿದ ಮರವೊಂದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಸ್ವಾತಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಬುರಡಿಕಟ್ಟಿ ಒತ್ತಾಯ
ರಾಣೇಬೆನ್ನೂರು : ಓರ್ವ ಮತಾಂಧ ಹಾಗೂ ಇಬ್ಬರು ಕಾಮುಕರು ಸೇರಿ ಹಿಂದೂ ಸನಾತನ ಧರ್ಮದ ಪ್ರತಿಪಾದಕಿ, ಸಹೋದರಿ ರಟ್ಟಿಹಳ್ಳಿಯ ಸ್ವಾತಿ ಬ್ಯಾಡಗಿ ಅವಳ ಹತ್ಯೆ ಮಾಡಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸ್ವಾತಿಗೆ ನ್ಯಾಯ ದೊರಕಿಸುವುದರ ಜೊತೆಗೆ ಸಮಾಜ ದ್ರೋಹಿಗಳಿಗೆ ಎಚ್ಚರಿಕೆ ನೀಡುವಂತಾಗಬೇಕು

ಭದ್ರಾ ಮೇಲ್ದಂಡೆ ಯೋಜನೆ, ಸಮಗ್ರ ನೀರಾವರಿ ಹೋರಾಟಕ್ಕೆ ಪಕ್ಷಾತೀತ ಬೆಂಬಲ
ಜಗಳೂರು : ದಾವಣಗೆರೆ, ಚಿತ್ರದುರ್ಗ, ಜಿಲ್ಲೆಯ ಭದ್ರಾ ಮೇಲ್ದಂಡೆ ಸಮಗ್ರ ನೀರಾವರಿಗಾಗಿ ನಡೆಸುವ ಹೋರಾಟಕ್ಕೆ ಸದಾ ಬೇಂಬಲವಿದೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ತಿಳಿಸಿದರು.

ಹನಗವಾಡಿಯಲ್ಲಿ ಇಂದು ರಥೋತ್ಸವ
ಹರಿಹರ ತಾಲ್ಲೂಕು ಹನಗವಾಡಿ ಗ್ರಾಮದ ಶ್ರೀ ವೀರ ಭದ್ರೇ ಶ್ವರ ಸ್ವಾಮಿಯ ರಥೋ ತ್ಸವವು ಇಂದು ಸಂಜೆ 5.30ಕ್ಕೆ ಜರುಗಲಿದೆ.

ಗೌಹಾತಿಯಲ್ಲಿನ ಬಾಸ್ಕೆಟ್ ಬಾಲ್ ಪಂದ್ಯಕ್ಕೆ ನಗರದ ವಿಷ್ಣು ಆಯ್ಕೆ
ವಿಷ್ಣು ಎನ್.ಎಂ. ಬಾಸ್ಕೆಟ್ ಬಾಲ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಅಸ್ಸಾಂ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಇಂದಿನಿಂದ ಇದೇ ದಿನಾಂಕ 24ರವರೆಗೆ ಗೌಹಾತಿಯಲ್ಲಿ ನಡೆಯಲಿರುವ ಮೊದಲ ರಾಷ್ಟ್ರಮಟ್ಟದ 23 ವರ್ಷದ ಅಡಿಯಲ್ಲಿ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮಲೇಬೆನ್ನೂರು : ಇಂದು ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಮಲೇಬೆನ್ನೂರು ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದ್ದು, 19ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಶ್ರೀಮತಿ ವಿಜಯಲಕ್ಷ್ಮಿ ಕೆ.ಪಿ.ಗಂಗಾಧರ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.

ಅಪ್ರಾಪ್ತರಿಗೆ ಬಳಿ ವಾಹನ ನೀಡಿದ ಮಾಲೀಕರಿಗೆ 25 ಸಾವಿರ ದಂಡ
ಬಾಲಕ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಮಾಲೀಕರಿಗೆ 25 ಸಾವಿರ ದಂಡ, 1 ವರ್ಷ ವಾಹನ ನೋಂದಣಿ ರದ್ದು ಹಾಗೂ ಬಾಲಕನಿಗೆ 25 ವರ್ಷದವರೆಗೂ ಚಾಲನಾ ಪರವಾನಿಗೆ ನೀಡದಂತೆ 3ನೇ ಪಿಆರ್ಎಲ್ಸಿ ಮತ್ತು ಜೆಎಂಎಫ್ಸಿ ನ್ಯಾಯಾಲಯವು ತೀರ್ಪು ನೀಡಿದೆ.