ಮಲೇಬೆನ್ನೂರು, ಫೆ. 3 – ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ವೆಂಕಟೇಶ್ ರೆಡ್ಡಿ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಎಂ.ಕೆ. ಪಾಟೀಲ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವನೆಯಲ್ಲಿ ವೆಂಕಟೇಶ್ ರೆಡ್ಡಿ 12 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪವಾಡಿ ಮಂಜಪ್ಪ 11 ಮತಗಳನ್ನು ಪಡೆದು ಪರಾಭವಗೊಂಡಿದ್ದು ಎಪಿಎಂಸಿ ಕಾರ್ಯದರ್ಶಿ ಮರುಳಸಿದ್ದಪ್ಪಯ್ಯ ಚುನವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಇಂದಿರಾಕುಮಾರ್, ಸದಸ್ಯರಾದ ಟಿ.ಪಿ. ಧನ್ಯಕುಮಾರ್ ಮುಸ್ತಾಫ್ ಸೇರಿದಂತೆ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಮುಖಂಡ ಎಸ್.ಹೆಚ್. ಪಾಟೀಲ್ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪಿಡಿಓ ಕಾಳಮ್ಮ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.