6 ರಂದು ಕಡ್ಲೇಬಾಳು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

6 ರಂದು ಕಡ್ಲೇಬಾಳು ಶ್ರೀ ಆಂಜನೇಯ  ಸ್ವಾಮಿ ಬ್ರಹ್ಮ ರಥೋತ್ಸವ

ಇಂದಿನಿಂದ ನಾಲ್ಕು ದಿನ ವಿಶೇಷ ಕಾರ್ಯಕ್ರಮಗಳು

ದಾವಣಗೆರೆ ತಾಲ್ಲೂಕಿನ ಕಡ್ಲೇಬಾಳು ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವವು ಇದೇ ದಿನಾಂಕ 6ರಂದು ನಡೆಯಲಿದೆ.   ಉತ್ಸವದ ಅಂಗವಾಗಿ ಇಂದಿನಿಂದ ಇದೇ ದಿನಾಂಕ 7ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಇಂದು ರಥಸಪ್ತಮಿ, ನಾಂದಿ, ಕಂಕಣ, ಬಲಿಹರಣ ಮತ್ತು ಮಹಾಮಂಗ ಳಾರತಿ ಜರುಗಲಿವೆ. ನಾಳೆ ಬುಧವಾರ ಭೀಷ್ಮಾಷ್ಟಮಿಯಂದು ಪವಮಾನ ಹೋಮ, ಬಲಿ ಹರಣ ಮತ್ತು ಮಹಾಮಂಗಳಾರತಿ ಜರುಗಲಿದೆ. ದಿನಾಂಕ 6ರಂದು ಮಧ್ವ ನವಮಿ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಹೋಮ ಹವನದ ನಂತರ ಮಧ್ಯಾಹ್ನ 12.30 ಗಂಟೆಗೆ ಶ್ರೀ ಆಂಜನೇಯ  ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ.

 ತಹಶೀಲ್ದಾರ್ ಎಂ.ಬಿ ಅಶ್ವತ್ಥ್‌ ಮತ್ತು ಗ್ರಾಮದ ಹಿರಿಯರ ನೇತೃತ್ವದಲ್ಲಿ  ನಡೆಯಲಿರುವ ರಥೋತ್ಸವದ ನಂತರ ಲಿಂ.ಶ್ರೀಮತಿ ಲಲಿತಮ್ಮ ಮತ್ತು ಲಿಂ. ಮುದೇಗೌಡ್ರ ಪರಮೇಶ್ವರಪ್ಪ ಮತ್ತು ಮಕ್ಕಳು ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ. 

ದಿನಾಂಕ 7ರಂದು  ಬೆಳಿಗ್ಗೆ 11 ಗಂಟೆಗೆ ಓಕಳಿ ಕಾರ್ಯಕ್ರಮ ಹಾಗೂ ಸತ್ಯ ನಾರಾಯಣ ಪೂಜೆ, ಪಂಚಾಮೃತ ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ ತೀರ್ಥ ಪ್ರಸಾದದ ನಂತರ ಭಜನಾ ಕಾರ್ಯಕ್ರಮವಿರುತ್ತದೆ.

error: Content is protected !!