ಹರಪನಹಳ್ಳಿ, ಫೆ.3- ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ (ಪಿಕಾರ್ಡ್) ಅಧ್ಯಕ್ಷರಾಗಿ ಉಚ್ಚಂಗಿದುರ್ಗ ಕ್ಷೇತ್ರದ ಬಿ. ರಾಜಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹರಪನಹಳ್ಳಿಯ ಗೊಂಗಡಿ ನಾಗರಾಜ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಬಿ.ವಿ. ಗಿರೀಶಬಾಬು ಅವಿರೋಧ ಆಯ್ಕೆ ಘೋಷಿಸಿದರು.
ಮತ್ತಿಹಳ್ಳಿ ಕ್ಷೇತ್ರದ ಮಂಜುನಾಥ ಕಮ್ಮಾರ ಮಾತ್ರ ಗೈರು ಆಗಿದ್ದು, ಉಳಿದ 14 ಜನ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದರು.
ಸಹಾಯಕ ಚುನಾವಣಾಧಿಕಾರಿ ಗಿರಜ್ಜಿ ಮಂಜುನಾಥ, ಬ್ಯಾಂಕ್ ಕಾರ್ಯದರ್ಶಿ ಎಂ. ಶಾಹೀದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಕೆ. ಕುಬೇರಗೌಡ, ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್, ಕಾಂಗ್ರೆಸ್ ಮುಖಂಡ ಬಸವರಾಜ ಸಂಗಪ್ಪನವರ, ಹೆಚ್. ದೇವೇಂದ್ರಗೌಡ, ಮೈದೂರು ರಾಮಣ್ಣ, ಅಗ್ರಹಾರ ಅಶೋಕ, ಚಿಕ್ಕೇರಿ ಬಸಪ್ಪ, ಮುತ್ತಿಗಿ ಜಂಬಣ್ಣ, ಲಾಟಿ ದಾದಾಪೀರ್, ರೆಡ್ಡಿ ಶಾಂತಕುಮಾರ, ಪಿ.ಬಿ. ಗೌಡ, ಬೇಲೂರು ಸಿದ್ದೇಶ, ಪಿ.ಎಲ್. ಪೋಮ್ಯಾನಾಯ್ಕ, ಜಗದೀಶ್ ಇತರರಿದ್ದರು.