ನಗರದಲ್ಲಿ ಇಂದಿನಿಂದ ಸಾಕು, ಬೀದಿ ನಾಯಿಗಳಿಗೆ ಉಚಿತ ರೇಬೀಸ್ ಲಸಿಕೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಸಂಯುಕ್ತಾಶ್ರಯದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮದಡಿ ಇಂದಿ ನಿಂದ ಬರುವ ಅಕ್ಟೋಬರ್‌ 10ರ ವರೆಗೆ ನಗರ ಮತ್ತು ಗ್ರಾಮೀಣ ಪ್ರದೇ ಶಗಳ ವ್ಯಾಪ್ತಿಯಲ್ಲಿ ಶಾಲಾ, ಕಾಲೇಜುಗಳು, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಜನ್ಯ ರೋಗಗಳ ಅರಿವು ಕಾರ್ಯಕ್ರಮ ಮತ್ತು ಉಚಿತ ಹುಚ್ಚು ನಾಯಿ ರೋಗ (ರೇಬೀಸ್) ಲಸಿಕಾ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ ಎಸ್. ಸುಂಕದ್ ತಿಳಿಸಿದ್ದಾರೆ.

error: Content is protected !!