ದಾವಣಗೆರೆ, ಮಾ. 11 – ಚಂದ್ರ ಗೋಚರಿಸಿರುವ ಮಾಹಿತಿ ಲಭ್ಯವಾಗಲು ಸುಮಾರು ಎರಡು ಗಂಟೆ ತಡವಾದರೂ ಕೊನೆಗೂ ಹೊನ್ನಾಳ್ಳಿಯಲ್ಲಿ ಚಂದ್ರದರ್ಶನ ಮಾಹಿತಿ (ಷರಾ) ಪಡೆದು ರಾತ್ರಿ 10 ಗಂಟೆಗೆ ಅಧಿಕೃತವಾಗಿ ಘೋಷಿಸಲಾಯಿತು.
ಸಂಜೆ ಇಮಾಂ ನಗರದಲ್ಲಿರುವ ತಂಜೀಮ್ ಕಛೇರಿಯಲ್ಲಿ ಉಲೇಮಾಗಳು ಸಭೆ ಸೇರಿ ಈ ನಿರ್ಣಯವನ್ನು ತೆಗೆದುಕೊಂಡರು. ಹೀಗಾಗಿ ಇಂದಿನಿಂದ ರಂಜಾನ್ ರೋಜಾ ಉಪವಾಸ ಆಚರಿಸಲಾಗುವುದು.
ನೂರಾನಿ ಮಸೀದಿ ಪೇಷ್ ಇಮಾಂ ಆಲೇ ರಜಾ ಅವರೊಂದಿಗೆ ಏಳು ಜನರ ತಂಡವನ್ನು ರಚಿಸಿ ಹೊನ್ನಾಳಿಗೆ ತೆರಳಲು ಸೂಚಿಸಲಾಯಿತು. ರಸ್ತೆ ಮಧ್ಯೆ ಮಲೇಬೆನ್ನೂರು ಬಳಿ ಅಧಿಕೃತ ಘೋಷಣಾ ಪತ್ರ ಪಡೆದು ನಗರಕ್ಕೆ ಆಗಮಿಸಿ ಉಲೇಮಾಗಳು ಸರ್ವ ಒಮ್ಮತದಿಂದ ಘೋಷಿಸಿದರು.
ಮೌಲಾನ ಮಹಮ್ಮದ್ ಹನೀಫ್ ರಜಾ ಅವರ ಅಧ್ಯಕ್ಷತೆ ನಡೆದ ಈ ಸಭೆಯಲ್ಲಿ ನಗರದ ಎಲ್ಲ ಮಸೀದಿಗಳ ಉಲೇಮಾಗಳು ಉಪಸ್ಥಿತರಿದ್ದರು.
ತಂಜೀಮ್ ಅಧ್ಯಕ್ಷ ದಾದು ಸೇಠ್, ಉಪಾಧ್ಯಕ್ಷ ಅಮಜದ್ ಉಲ್ಲಾ ಎಸ್. ಕೆ., ಖಾದರ್ ಭಾಷ,, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೀಗಾಗಿ ಪ್ರಥಮ ದಿನದ ತರಾವಿನಮಾಜ್ ಸ್ವಲ್ಪ ತಡವಾಗಿ ಬೋಧಿಸಲಾಯಿತು.