ಹೊನ್ನಾಳಿ : ಜೂಜಾಟ 36550 ರೂ. ವಶ

ಹೊನ್ನಾಳಿ, ಜ. 22- ತಾಲ್ಲೂಕಿನ ಅರಕೆರೆ ಕೋಟೆ ಮಲ್ಲೂರು ಗ್ರಾಮಗಳ ರಸ್ತೆ ಮಧ್ಯದಲ್ಲಿ ಜೂಜಾಟ ನಡೆಸುತ್ತಿದ್ದ 8 ಜನರ ಗುಂಪಿನ ಮೇಲೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸರು ದಿಢೀರ್‌ ದಾಳಿ ನಡೆಸಿ ರೂ. 36,550 ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗ ಳನ್ನು ವಶಪಡಿಸಿಕೊಂ ಡಿರುವುದಾಗಿ ಹೊನ್ನಾಳಿ ಪೊಲೀಸ್‌ ನಿರೀಕ್ಷಕ ಸುನಿಲ್‌ಕುಮಾರ್‌ ತಿಳಿಸಿದ್ದಾರೆ.

error: Content is protected !!