ಮಲೇಬೆನ್ನೂರಿನಲ್ಲಿ ಅಂಬೇಡ್ಕರ್ ಜಯಂತಿ

ಮಲೇಬೆನ್ನೂರು, ಏ.14- ಪಟ್ಟಣದ ವಿವಿಧೆಡೆಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಆಚರಿಸಲಾಯಿತು.

ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್, ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ಮುಖ್ಯಾಧಿಕಾರಿ ದಿನಕರ್, ಸದಸ್ಯರಾದ ಬಿ. ಸುರೇಶ್, ಎ. ಆರೀಫ್‌ ಅಲಿ, ಮಾಸಣಗಿ ಶೇಖರಪ್ಪ, ಮಹಾಲಿಂಗಪ್ಪ, ಯುಸೂಫ್, ನಾಮಿನಿ ಸದಸ್ಯರಾದ ಬಿ.ಹೆಚ್. ಮಂಜಪ್ಪ, ಪಿ.ಆರ್. ರಾಜು, ಎ.ಕೆ. ಲೋಕೇಶ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಕೆ.ಜಿ. ಲೋಕೇಶ್, ಭೋವಿ ಕುಮಾರ್, ಫಕೃದ್ದೀನ್ ಅಹಮದ್, ಪುರಸಭೆ ಅಧಿಕಾರಿಗಳಾದ ಉಮೇಶ್, ಪ್ರಭು, ನವೀನ್ ಹಾಗೂ ಸಿಬ್ಬಂದಿ ವರ್ಗವದರು ಹಾಜರಿದ್ದರು.

ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆರ್. ರವಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅಂಬೇಡ್ಕರ್  ಕೊಡುಗೆಯನ್ನು ತಿಳಿಸಿದರು. ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಕೊಟ್ರೇಶ್, ಶ್ರೀಧರ್ ಮೂರ್ತಿ, ಆನಂದ ತೀರ್ಥ, ಗ್ರಾಮ ಸಹಾಯಕರಾದ ಅಂಜಿನಪ್ಪ, ಮಾರುತಿ, ಶಶಿಕುಮಾರ್, ಜೈಮಾರುತಿ, ಸಂತೋಷ್, ಕಂಪ್ಯೂಟರ್ ಆಪರೇಟರ್ ಬಸವರಾಜ್ ಮತ್ತು ಪಿಎಸಿಎಸ್‌ ನಿರ್ದೇಶಕ ಪಿ.ಆರ್. ಕುಮಾರ್ ಪಾಲ್ಗೊಂಡಿದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸಂಘದ ಉಪಾಧ್ಯಕ್ಷ ಎ.ಕೆ. ನರಸಿಂಹಪ್ಪ, ನಿರ್ದೇಶಕರಾದ ಜಿ. ಮಂಜುನಾಥ್ ಪಟೇಲ್, ಸೈಫುಲ್ಲಾ, ಚಂದ್ರಮ್ಮ, ಪಿ.ಆರ್. ಕುಮಾರ್, ಯುನೂಸ್, ಕೆ.ಜಿ. ಪರಮೇಶ್ವರಪ್ಪ, ಸಿಇಓ ಸಿದ್ದಪ್ಪ, ಪ್ರಕಾಶ್, ಜಫಾರ್ ಇನ್ನಿತರರು ಭಾಗವಹಿಸಿದ್ದರು.

ಶ್ರೀ ಗುರು ರೇಣುಕ ರೈಸ್ ಇಂಡಸ್ಟ್ರೀಸ್‌ನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿದರು. ಪುರಸಭೆ ಸದಸ್ಯರಾದ ಬಿ.ಎಂ. ಚನ್ನೇಶ್ ಸ್ವಾಮಿ, ಬಿ.ಹೆಚ್. ಮಂಜಪ್ಪ, ಪಿ.ಆರ್. ರಾಜು, ಎ.ಕೆ. ಲೋಕೇಶ್, ಆಶ್ರಯ ಸಮಿತಿ ಸದಸ್ಯರಾದ ಬಿ. ಚಂದ್ರಪ್ಪ, ಭೋವಿ ಹನುಮಂತಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಾನಿಪೂರಿ ರಂಗನಾಥ್, ಬಗರ್‌ ಹುಕ್ಕುಂ ಸಮಿತಿ ಸದಸ್ಯ ಮುದೇಗೌಡ್ರ ತಿಪ್ಪೇಶ್ ಮತ್ತು ಕುಂಬಳೂರು ರಾಜು, ಬಿ. ಬಸವರಾಜ್ ಹಾಜರಿದ್ದರು.

ಸ್ಥಳೀಯ ಪೊಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ನೀರಾವರಿ ಇಲಾಖೆ, ಬೀರಲಿಂಗೇಶ್ವರ ವಿದ್ಯಾಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಲಯನ್ಸ್ ಕ್ಲಬ್, ಎಸ್‌ಬಿಕೆಎಂ ಶಾಲೆ, ಮಾಲತೇಶ್ ಪಬ್ಲಿಕ್ ಸ್ಕೂಲ್‌ ಸೇರಿದಂತೆ, ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಎ.ಕೆ. ಕಾಲೋನಿಯಲ್ಲಿ ಅಂಬೇಡ್ಕರ್ ಅವರ ಬೃಹತ್ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ ಜಯಂತಿ ಆಚರಿಸಿದ ಯುವಕರು, ನಂತರ ಸಿಹಿ ಹಂಚಿದರು.

error: Content is protected !!