ಬಿ.ಎಸ್. ಸಿ. ಶಾಪಿಂಗ್ ಹಬ್ಬ: 2 ನೇ ವಾರದ ಲಕ್ಕಿ ಡ್ರಾ ವಿಜೇತರ ಆಯ್ಕೆ

ಬಿ.ಎಸ್. ಸಿ. ಶಾಪಿಂಗ್ ಹಬ್ಬ:  2 ನೇ ವಾರದ ಲಕ್ಕಿ ಡ್ರಾ ವಿಜೇತರ ಆಯ್ಕೆ

ದಾವಣಗೆರೆ, ಏ. 15- ನಗರದ ಜವಳಿ ವ್ಯಾಪಾರಿ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‍ನ ಬಿ.ಎಸ್.ಸಿ. ಎಕ್ಸ್‍ಕ್ಲೂಸಿವ್ ಶಾಪಿಂಗ್ ಹಬ್ಬ 2024ರ 2ನೇ ವಾರದ ಲಕ್ಕಿ ಡ್ರಾ ವಿಜೇತರನ್ನು ಆಯ್ಕೆ ಮಾಡಲಾಯಿತು. ಗ್ರಾಹಕ ಫೈರೋಜ್ ಹಿರೇಕೆರೂರು ಸಿಟಿಯ (ಕೂಪನ್ ನಂ. 9146) ಇವರು ಎರಡನೇ ವಾರದ ವಿಜೇತರಾಗಿ ಆಯ್ಕೆಯಾಗಿದ್ದಾರೆ. 

ರಾಯ್ಕರ್ ಜ್ಯುಯಲರ್ಸ್ ಮಾಲೀಕ ವಾಸುದೇವ ರಾಯ್ಕರ್, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‍ನ ಮಾಲೀಕ ಬಿ.ಎಸ್. ಮೃನಾಲ್, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಲಕ್ಕಿ ಡ್ರಾ ನೆರವೇರಿಸಲಾಯಿತು.

ಎರಡನೇ ವಾರದ ಬಹುಮಾನವು ಹೈಯರ್ ಕಂಪನಿಯ ರೆಫ್ರಿಜರೇಟರ್ ಅಗಿರುತ್ತದೆ. ಇನ್ನು ಮೂರು ವಾರದ ಲಕ್ಕಿ ಡ್ರಾ ಬಾಕಿ ಇರುತ್ತದೆ. 3ನೇ ವಾರದ ಬಹುಮಾನವಾಗಿ ವಾಷಿಂಗ್ ಮಿಷಿನ್, 4ನೇ ವಾರದ ಬಹುಮಾನವಾಗಿ ಏರ್ ಕೂಲರ್, 5ನೇ ವಾರದ ಬಹುಮಾನವಾಗಿ ಹೋಂ ಥೇಯಟರ್ ಹಾಗೂ ಬಂಪರ್ ಬಹುಮಾನಗಿ ಎಲೆಕ್ಟ್ರಿಕ್ ಸ್ಕೂಟರ್ ವಾಹನ ಇರುತ್ತದೆ. 

 ಇದೇ ವೇಳೆ ಮಾತನಾಡಿದ ವಾಸುದೇವ ರಾಯ್ಕರ್  ಅವರು, ಬಿ.ಎಸ್.ಸಿ.ಎಕ್ಸ್‍ಕ್ಲೂಸೀವ್ ಶಾಪಿಂಗ್ ಹಬ್ಬ 2024ರ ಹಬ್ಬದಲ್ಲಿ ಖರೀದಿ ಮಾಡುವುದರ ಮುಖಾಂತರ ಗ್ರಾಹಕರು ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‍ನ ಮಾಲೀಕರಾದ ಬಿ.ಎಸ್.ಮೃನಾಲ್‍ ಮಾತನಾಡಿ, ಬಿ.ಎಸ್.ಸಿ. ಎಕ್ಸ್‍ಕ್ಲೂಸೀವ್ ಶಾಪಿಂಗ್ ಹಬ್ಬ 2024ರ ಪ್ರಯೋಜನ ಪಡೆದುಕೊಳ್ಳಿ ಎಂದು ಕರೆ ನೀಡಿದರು. 

error: Content is protected !!