ಜೈನ್ ಕಾಲೇಜಿನಲ್ಲಿ ಐಸಿಇಐ-2023

ಜೈನ್ ಕಾಲೇಜಿನಲ್ಲಿ ಐಸಿಇಐ-2023

ದಾವಣಗೆರೆ, ಜೂ. 4- ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಟೆಕ್ನಿಕ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅವರ ಸಹಯೋಗದೊಂದಿಗೆ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಇಂಜಿನಿಯರಿಂಗ್ ಇನ್ನೋವೇಷನ್ – 2023ರ 2ನೇ ಹಂತದ  ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೋಲ್ಟನ್ ವಿಶ್ವವಿದ್ಯಾಲಯದ ಡಾ. ಸೆಲೆಸ್ಟೀನ್ ಐವೆಂಡಿ ಮತ್ತು ಅಲ್ಟಿಮೇಟ್ ಕ್ರೋನೋಸ್ ಗ್ರೂಪ್‍ನ ಮಂಜುನಾಥ್ ಪರಮಶಿವಯ್ಯ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಮೈಸೂರಿನ ಜಿಎಸ್‍ಎಸ್‍ಐಇಟಿಡಬ್ಲು ಪ್ರಾಧ್ಯಾಪಕ ಡಾ. ಬಿ.ಡಿ. ಪರಮೇಶಚಾರಿ, ಬೆಂಗಳೂರು ಹಾಗೂ ಚೆನ್ನೈನ ಸೇಂಟ್ ಪೀಟರ್ಸ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್‍ನ ಪ್ರಾಧ್ಯಾಪಕ ಡಾ. ಜಿ.ಪಿ. ರಮೇಶ್ ಉಪಸ್ಥಿತರಿದ್ದರು.

ಜೆಐಟಿ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಸಂತೋಷ್ ಹೆರೂರ್ ಐಸಿಇಐ-2023ರ ತಾಂತ್ರಿಕ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಇ ಅಂಡ್ ಸಿ ವಿಭಾಗದ
ಪ್ರೊ. ರವಿರಾಯಪ್ಪ ಮತ್ತು ಪ್ರೊ. ಹೆಚ್.ಬಿ. ಶರಣ ಬಸವೇಶ್ವರ
ಮತ್ತಿತರರು ಉಪಸ್ಥಿತರಿದ್ದರು.

error: Content is protected !!