ಎಲೆಬೇತೂರು : ಶಾಲಾ ಪ್ರಾರಂಭೋತ್ಸವ, ಪುಸ್ತಕ ವಿತರಣೆ

ಎಲೆಬೇತೂರು : ಶಾಲಾ ಪ್ರಾರಂಭೋತ್ಸವ, ಪುಸ್ತಕ ವಿತರಣೆ

ದಾವಣಗೆರೆ, ಜೂ.1- ತಾಲ್ಲೂಕಿನ ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವರ್ಷದಂತೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಶಾಲಾ ಆವರಣವನ್ನು ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು ಸೇರಿಕೊಂಡು  ಸಿಂಗರಿಸಿದ್ದರು. ಬೇಸಿಗೆ ರಜೆ ಖುಷಿಯಲ್ಲಿದ್ದ ವಿದ್ಯಾರ್ಥಿಗಳು ಶಾಲಾ ಪ್ರಾರಂಭೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಶಾಲೆಯ ಬಿಸಿಯೂಟ ತಯಾರಕರು ಅಡುಗೆಗೆ ಬಳಸುವ ಸಾಮಾನುಗಳನ್ನು ಸ್ವಚ್ಛಗೊಳಿಸಿ, ಇಂದಿನ ಸಿಹಿ ಊಟಕ್ಕೆ ಅಣಿ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಎಲ್ಲರೂ ಸೇರಿ, ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಸಂಭ್ರಮದಿಂದ ಸ್ವಾಗತಿಸಿ, ಶಾಲಾ ಆವರಣಕ್ಕೆ ಬರಮಾಡಿಕೊಂಡರು. ನಂತರ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡುವ ಪಠ್ಯಪುಸ್ತಕಗಳನ್ನು ನೀಡಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ಬಸವನಗೌಡಪ್ಪ, ಸದಸ್ಯರಾದ ಬಿ. ಶಿವಕುಮಾರ್, ಹಂಚಿನಮನೆ ಚೇತನ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಂಪುರ ನಾಗರಾಜ್, ಶಾಲಾ ಶಿಕ್ಷಣ ಪ್ರೇಮಿ, ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ, ಜಿ.ಪಂ. ಮಾಜಿ ಸದಸ್ಯ ಬಿ. ಕರಿಬಸಪ್ಪ, ಕಾಡಾ ಸಮಿತಿ ಮಾಜಿ ಸದಸ್ಯ ಎಚ್. ಬಸವರಾಜಪ್ಪ, ದಾಮ್‌ಕೋಸ್ ನಿರ್ದೇಶಕ ಮಠದ ಬಸವರಾಜಯ್ಯ, ಮುಖ್ಯೋಪಾಧ್ಯಾಯಿನಿ ಬಿ. ಸುಜಾತ, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

error: Content is protected !!