ನೀರಿನ ಬವಣೆ ನೀಗಿಸಲು ಮಾನದಂಡ ಸಡಿಲಿಸಿ

ನೀರಿನ ಬವಣೆ ನೀಗಿಸಲು ಮಾನದಂಡ ಸಡಿಲಿಸಿ

ಹರಿಹರ: ನಗರಸಭೆ ಅಧಿಕಾರಿಗಳಿಗೆ  ಶಾಸಕ ಹರೀಶ್ ಸೂಚನೆ

ಹರಿಹರ, ಮಾ.26- ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವಾಗ  ಸರ್ಕಾರದ ಮಾನದಂಡ ಗಳನ್ನು ಸಡಿಲಿಕೆ ಮಾಡಿಕೊಂಡು ನಗರದ ಜನತೆಯ ನೀರಿನ ಬವಣೆ ನೀಗಿಸುವಂತೆ ಶಾಸಕ ಬಿ.ಪಿ. ಹರೀಶ್ ಅಧಿಕಾರಿಗಳಿಗೆ ತಿಳಿಸಿದರು.

ನಗರಸಭೆಯ ಆವರಣದಲ್ಲಿ  ಪೌರಾಯುಕ್ತ ಐಗೂರು ಬಸವರಾಜ್ ಬಳಿ ನಗರದ ಜನತೆಯ ನೀರಿನ ಸಮ ಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿರುವ ಸಂದ ರ್ಭದಲ್ಲಿ ಅವರು ಈ ಸಲಹೆ ನೀಡಿದರು.

ನಗರದ ಜನತೆಗೆ ಬಾಡಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಕ್ಕೆ ಜಿಲ್ಲಾಡಳಿತ ಅನೇಕ ಮಾನದಂಡಗಳನ್ನು  ವಿಧಿಸಿದ್ದು, ಅದರ ಆಧಾರದ ಅಡಿಯಲ್ಲಿ ಬಾಡಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡು ವಂತೆ, ಆದೇಶ ನೀಡಿದ್ದಾರೆ. ಯಾವುದೇ ಗುತ್ತಿಗೆದಾರರು ನೀರು ಸರಬರಾಜು ಮಾಡಲು ಮುಂದೆ ಬರದಂತಹ ಮಾನದಂಡಗಳು ಇವೆ. ಹಾಗಾಗಿ   ಜಿಲ್ಲಾಧಿಕಾರಿಗಳು ಕೆಲವು ಮಾನದಂಡ ಗಳನ್ನು ಸಡಿಲಿಕೆ ಮಾಡಿಕೊಂಡು ನೀರು ಸರಬರಾಜು ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು. ಈ ವಿಚಾರಗಳ ಬಗ್ಗೆ ಅವರ ಬಳಿ   ಚರ್ಚೆ ಮಾಡುವುದಾಗಿ ಹೇಳಿದರು. ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ ಈಗಾಗಲೇ ನಮಗೆ ಜಿಲ್ಲಾಧಿಕಾರಿಗಳು ಕೆಲವೊಂದು ಷರತ್ತುಗಳೊಂದಿಗೆ  ಬಾಡಿಗೆ ಟ್ಯಾಂಕರ್ ಪಡೆಯುವುದಕ್ಕೆ ಆದೇಶ ನೀಡಿದ್ದು, ಅದರ ಅನ್ವಯದಂತೆ ಕೆಲವು ಗುತ್ತಿಗೆದಾರರಿಗೆ ಕರೆಸಿ ಮಾತನಾಡಿ ಟ್ಯಾಂಕರ್ ನಿಂದ ನೀರು ಸರಬರಾಜು ಮಾಡುವುದಕ್ಕೆ ತಿಳಿಸಿದ್ದರಿಂದ ಅವರು ಕೆಲವು ಮಾನದಂಡಗಳು ಬಹಳ ಕ್ಲಿಷ್ಟಕರ ವಾಗಿರೋದರಿಂದ ನಾವು ಟ್ಯಾಂಕರ್ ಬಾಡಿಗೆ ರೂಪದಲ್ಲಿ ಸರ್ಕಾರದ ಮಾನದಂಡಗಳನ್ನು ಸಡಿಲಿಕೆ ಮಾಡಿದರೆ ಮಾತ್ರ ನಾವು ಟ್ಯಾಂಕರ್ ಬಾಡಿಗೆ ಕೊಡುವುದಾಗಿ ಹೇಳಿದ್ದಾರೆ. ಹಾಗಾಗಿ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಏನು ನಿರ್ದೇಶನ ನೀಡುತ್ತಾರೋ ಅದನ್ನು ಪಾಲಿಸುವ ಮೂಲಕ ಸಾರ್ವಜನಿಕರಗೆ  ನೀರಿನ ತೊಂದರೆಗಳನ್ನು ನೀಗಿಸಲಾಗುವುದು.  ಜೊತೆಗೆ ನದಿಗೆ ಸಮರ್ಪಕವಾಗಿ ನೀರು ಬರುವವರೆಗೂ ಈ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟಕರವಾಗಿದೆ ಎಂದು ಹೇಳಿದರು.

ಕೇಶವ ಬಡಾವಣೆ ನಿವಾಸಿ ಸಂಗನಾಳಮಠ  ಮಾತನಾಡಿ, ನಮ್ಮ ಬಡಾವಣೆಯಲ್ಲಿ ನೀರಿನ ಸಮಸ್ಯೆ ಬಹಳ ದೊಡ್ಡ ಮಟ್ಟದಲ್ಲಿ ಇದ್ದು, ದಿನಕ್ಕೆ ಒಂದು ಟ್ಯಾಂಕರ್ ಮಾತ್ರ ನೀರು ಸರಬರಾಜು ಮಾಡುವುದರಿಂದ ಬಡಾವಣೆಯ ಎಲ್ಲಾ ನಿವಾಸಿಗಳಿಗೆ ನೀರು  ಸಾಕಾಗುತ್ತಿಲ್ಲ. ಆದ್ದರಿಂದ ಹೆಚ್ಚು ಟ್ಯಾಂಕರ್ ವ್ಯವಸ್ಥೆ ಮಾಡಿ ಎಂದು ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಎಇಇ ತಿಪ್ಪೇಸ್ವಾಮಿ, ಇಂಜಿನಿಯರ್ ಮಂಜುನಾಥ್,  ನಗರಸಭೆ ಸದಸ್ಯೆ ನಾಗರತ್ನ, ನಗರ ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಮಾಜಿ ನಗರಸಭೆ ಸದಸ್ಯ ರಾಜು ರೋಖಡೆ,  ವಿನಾಯಕ ಆರಾಧ್ಯಮಠ, ಶಿವಶಂಕರ್ ಚಿಕ್ಕಬಿದರಿ,  ಗುತ್ತಿಗೆದಾರರಾದ ಕಾಳೇರ್ ಮಂಜುನಾಥ್, ಜಗದೀಶ್ ಭೀಮನಗರ ಹಾಗೂ  ಇತರರು ಹಾಜರಿದ್ದರು.

error: Content is protected !!