ದಾವಣಗೆರೆ ಎಸ್.ಎಸ್. ಬಡಾವಣೆ `ಎ’ ಬ್ಲಾಕ್ ನಿವಾಸಿ ದಿ. ಹನುಮಂತಪ್ಪ ಮಾಳಕ್ಕಳ್ (ಇಂಜಿನಿಯರ್) ಇವರ ಧರ್ಮಪತ್ನಿ ಅನಸೂಯಮ್ಮ ಮಾಳಕ್ಕಳ್ ಇವರು ದಿನಾಂಕ 22.04.2024ರ ಸೋಮವಾರ ರಾತ್ರಿ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 77 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.04.2024ರ ಮಂಗಳವಾರ ಮಧ್ಯಾಹ್ನ 2.30 ಕ್ಕೆ ಸ್ವಗ್ರಾಮವಾದ ಹೊನ್ನಾಳಿ ತಾಲ್ಲೂಕಿನ ಕೂಲಂಬಿ ಗ್ರಾಮದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
May 9, 2024