ಕರುಣಾ ಟ್ರಸ್ಟ್ ಸೇವೆ ಶ್ಲ್ಯಾಘನೀಯ

ಕರುಣಾ ಟ್ರಸ್ಟ್ ಸೇವೆ ಶ್ಲ್ಯಾಘನೀಯ

ದಾವಣಗೆರೆ, ಮೇ 10- ಬಿಸಿಲಿನ ಬೇಗೆಯಿಂದ ಬಳಲಿದ ಜನರ ದೇಹ ತಣಿಸಲು ಕರುಣಾ ಜೀವ ಕಲ್ಯಾಣ ಟ್ರಸ್ಟ್  ವತಿಯಿಂದ  ಹಮ್ಮಿಕೊಂಡಿರುವ ಮಜ್ಜಿಗೆ ವಿತರಣಾ ಕಾರ್ಯ ಶ್ಲಾಘನೀಯ ಎಂದು ಶ್ರೀಮತಿ ಆರ್. ಕಲಾ ಭೀಮಾನಂದ ಹೇಳಿದರು.

ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಮಜ್ಜಿಗೆ ವಿತರಣೆಯ ಪ್ರಯುಕ್ತ ಮೊನ್ನೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.

ದಾವಣಗೆರೆಯ ಬಿರು ಬಿಸಿಲಿನಲ್ಲಿ ದೇಹ ನಿರ್ಜಲೀಕರಣ (ಡಿ ಹೈಡ್ರೇಶನ್)ದಿಂದ ಪ್ರಾಣಾಪಾಯವಾಗುವ ಸಾಧ್ಯತೆ ಇರುವ ಕಾರಣ ಈ ಸಂದರ್ಭದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಉಚಿತ ಮಜ್ಜಿಗೆ ವಿತರಣೆ ಮಾಡಿ, ನಿರ್ಜಲೀಕರಣಕ್ಕೆ ಪರಿಹಾರ ನೀಡಿರುವುದು ಉತ್ತಮ ಕಾರ್ಯ ಎಂದರು.

ಶ್ರೀಮತಿ ಮಂಜುಳಾ ಬಸವಲಿಂಗಪ್ಪ ಮಾತನಾಡಿ, ಒಂದು ತಿಂಗಳ ಕಾಲ ಮಜ್ಜಿಗೆಯ ತಯಾರಿ ಮಾಡುವುದು, ಅದಕ್ಕೆ ನೆರವಾದ ದಾನಿಗಳ ಸೇವೆಯನ್ನು ಸ್ಮರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ. ಬಸವರಾಜ್ ಅವರು, ಕರುಣಾ ಟ್ರಸ್ಟಿನ ಸತ್ಕಾರ್ಯಗಳನ್ನು ಶ್ಲ್ಯಾಘಿಸುವುದರ ಜೊತೆಗೆ ಮಜ್ಜಿಗೆಯ ಮಹತ್ವ ತಿಳಿಸಿದರು.

ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಕರುಣಾ ಟ್ರಸ್ಟಿನ ಸತ್ಕಾರ್ಯಗಳಿಗೆ ಕೈ ಜೋಡಿಸುವಲ್ಲಿ ದಾನಿಗಳು ಸಹಕರಿಸಬೇಕಾಗಿ ವಿನಂತಿಸಿದರು. 

ಸತತ ಒಂದು ತಿಂಗಳು ಉಚಿತವಾಗಿ ಮಜ್ಜಿಗೆಯನ್ನು ಒದಗಿಸಿದ ಹೊನ್ನೂರಿನ ಶ್ರೀಪಥ್ ರಾಜ್, ಜಯಪ್ರಕಾಶ್, ಆಟೋ ಅಣ್ಣಪ್ಪನವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಮಂಜುಳಾ ಬಸವಲಿಂಗಪ್ಪ ಸ್ವಾಗತಿಸಿದರು. ನಿರ್ದೇಶಕ ಎನ್.ಪಿ.ಜಯ್ಯಣ್ಣ ವಂದಿಸಿದರು.

error: Content is protected !!