ನೆಹರು ಕ್ಯಾಂಪ್‌ : ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ರಾಮಪ್ಪ ಚಾಲನೆ

ಮಲೇಬೆನ್ನೂರು, ಏ.18- ಮಲ್ಲನಾಯ್ಕನಹಳ್ಳಿ ಸಮೀಪದ ನೆಹರು ಕ್ಯಾಂಪ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ 10 ಲಕ್ಷ ರೂ. ವೆಚ್ಚದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್‌. ರಾಮಪ್ಪ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ತಾ.ಪಂ ಅಧ್ಯಕ್ಷ ಆದಾಪುರದ ವೀರಭದ್ರಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಎಪಿಎಂಸಿ ಮಾಜಿ ಸದಸ್ಯ ಸಣ್ಣ ಶೇಖರಪ್ಪ, ಚಿನ್ನಪ್ಪ, ರಾಜೇಂದ್ರ, ಪ್ರಸಾದ್‌, ಚಲುವಯ್ಯ, ಸತ್ಯನಾರಾಯಣ, ನಾಗೇಶ್ವರರಾವ್‌, ಮಲೇಬೆನ್ನೂರಿನ ಭೋವಿ ಶಿವಕುಮಾರ್‌ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!