ಜಿಲ್ಲಾ ಆಸ್ಪತ್ರೆಗೆ ಲಯನ್ಸ್‍ನಿಂದ ನೆರವು : ಹೆಗಡೆ

ಮಲೇಬೆನ್ನೂರು, ಅ.23 – ಕೊರೊನಾ ಆರಂಭದಿಂದಲೂ ಅಗತ್ಯ ಸೌಲಭ್ಯ ಕಲ್ಪಿಸಿರುವ ಲಯನ್ಸ್ ಕ್ಲಬ್‍ಗಳು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿವೆ ಎಂದು ಲಯನ್ಸ್ ಜಿಲ್ಲೆ 317 ಸಿ  ರಾಜ್ಯಪಾಲ ಎನ್.ಎಂ. ಹೆಗಡೆ ಹೇಳಿದರು.

ಅವರು ಶುಕ್ರವಾರ ಸಂಜೆ ಮಲೇಬೆನ್ನೂರು ಲಯನ್ಸ್ ಕ್ಲಬ್‍ಗೆ ತಮ್ಮ ಅಧಿಕೃತ ಭೇಟಿ ಕಾರ್ಯ ಕ್ರಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಕೊರೊನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಜಿಲ್ಲಾ ಆಸ್ಪತ್ರೆ ಗಳಿಗೆ ಪಿಪಿಇ ಕಿಟ್‍ಗಳನ್ನು ನೀಡಲು ನಿರ್ಧರಿಸಿದ್ದು,  ಈಗಾಗಲೇ ಉಡುಪಿ ಜಿಲ್ಲಾ ಆಸ್ಪತ್ರೆಗೆ 47 ಲಕ್ಷ ರೂ.ಗಳನ್ನು ಲಯನ್ಸ್‍ನಿಂ ದ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗಳಿಗೆ ನೆರವು ನೀಡುವ ಉದ್ದೇಶ ಹೊಂದಿದ್ದೇವೆ ಎಂದರು. ಕಳೆದ 7 ದಿನಗಳಲ್ಲಿ 54 ಲಯನ್ಸ್ ಕ್ಲಬ್‍ಗಳು 16.50 ಲಕ್ಷ ರೂ ಖರ್ಚು ಮಾಡಿ 24 ಸಾವಿರ ಜನರಿಗೆ ಅಗತ್ಯ ಸೇವೆ ಒದಗಿಸಿದ್ದಾರೆ ಎಂದು ಅವರು ವಿವರಿಸಿದರು.

ಲಯನ್ಸ್ ಸಂಪುಟ ಕಾರ್ಯದರ್ಶಿ ಟಿ.ಜಿ.ಆಚಾರ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪಿ.ಹರೀಶ್, ಮಾಜಿ ರಾಜ್ಯಪಾಲರುಗಳಾದ ಡಾ.ಟಿ ಬಸವರಾಜ್, ಹೆಚ್.ಎನ್.ಶಿವಕುಮಾರ್, ಎ.ಆರ್. ಉಜ್ಜಿನಪ್ಪ, ದಾವಣಗೆರೆ ಆಸರೆ ಲಯನ್ಸ್ ಕ್ಲಬ್‌ ಅಧ್ಯಕ್ಷ ಮೌನೇಶ್ವರ, ಚನ್ನಗಿರಿ ಲಯನ್ಸ್ ಕ್ಲಬ್‌ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು. 

ಮಲೇಬೆನ್ನೂರು ಲಯನ್ಸ್ ಕ್ಲಬ್‌ ಅಧ್ಯಕ್ಷ ಕೆ.ಎನ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಎನ್.ಜಿ. ಶಿವಾಜಿ ಪಾಟೀಲ್ ಖಜಾಂಚಿ ಜಿಗಳಿಯ ಗೌಡ್ರ ಬಸವರಾಜಪ್ಪ ಓ.ಜಿ.ರುದ್ರಗೌಡ್ರು, ಎನ್.ಜಿ.ಬಸವನಗೌಡ, ಇ.ಎಂ. ಮರುಳಸಿದ್ದೇಶ್, ಬಿ.ಎಂ.ಜಗದೀಶ್ವರ ಸ್ವಾಮಿ, ಹೆಚ್.ಜಿ.ಚಂದ್ರಶೇಖರ್, ಲಯನ್ಸ್ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!