ದಾವಣಗೆರೆ, ನ. 22- ನಗರದ ಎಸ್.ಎಸ್.ಮಾಲ್ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಅಸ್ತಮಾ ಕಾಂಗ್ರೆಸ್‌ಗೆ ಚಾಲನೆ ದೊರೆಯಿತು. ದೇಶ ವಿದೇಶಗಳಿಂದ ಸುಮಾರು ಐದು ನೂರು ಪ್ರತಿನಿಧಿಗಳು ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಎಸ್‌ಐಎಂಎಸ್ ಮಕ್ಕಳ ವಿಭಾಗದ ಮುಖ್ಯಸ್ಥರೂ, ರೆಸ್ಪಿಕಾನ್ ಆಯೋಜನಾ ಅಧ್ಯಕ್ಷ ಡಾ. ಎನ್.ಕೆ. ಕಾಳಪ್ಪನವರ್ ಮಾತನಾಡಿ, ಶ್ವಾಸಕೋಶ ಆರೈಕೆಯ ಇತ್ತೀಚಿನ ಪ್ರಗತಿಗಳಲ್ಲಿ, ಜೈವಿಕ ಏಜೆಂಟ್‌ಗಳು, ಜೀವರಾಸಾಯಿನಿಕ ಬದಲಾವಣೆಗಳು ಮತ್ತು ಶಾಸಕೋಶ ಕಾರ್ಯ ಸಾಧನೆಗಳನ್ನು ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡರು.
ದೇಶದ ಪ್ರಮುಖ ಶ್ವಾಸಕೋಶ ತಜ್ಞರು ಮತ್ತು ಬ್ರಾಂಕೋಸ್ಕೋಪಿಸ್ಟ್‌ಗಳ ಪ್ರಾಸ್ತಾಪವನ್ನು ಗಮನಿಸಿದರು, ಇದು ಪ್ರಾದೇಶಿಕ ವೈದ್ಯಕೀಯ ತಜ್ಞರು ಮಕ್ಕಳ ಶ್ವಾಸಕೋಶ ಆರೈಕೆಯನ್ನು ಸುಧಾರಿಸಲು ಅದ್ವಿತೀಯ ಅವಕಾಶವನ್ನು ಒದಗಿಸುತ್ತದೆ ಎಂದರು.
ವೈಜ್ಞಾನಿಕ ಅಧಿವೇಶನಗಳು ಆರಂಭವಾದವು, ಇಂಗ್ಲೆಂಡ್, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾ ದೇಶದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರು ಅಸ್ತಮಾ ನಿರ್ವಹಣೆಯ ಇತ್ತೀಚಿನ ನವೀಕರಣಗಳ ಕುರಿತು ಚರ್ಚಿಸಿದರು.
ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ್, ಸಮ್ಮೇಳನದ ಪ್ರಮುಖ ಆಯೋಜಕರಾದ ಡಾ. ಮೂಗನಗೌಡ ಪಾಟೀಲ್, ಡಾ.ಮಧು ಪೂಜಾರ್, ತಜ್ಞರಾದ ಡಾ. ಸಂಜೀವ್ ಸಿಂಗ್ ರಾವತ್, ಡಾ. ಜಗದೀಶ್ ಗೋಯಲ್ ಮತ್ತಿತರರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಎಸ್.ಎಸ್. ಸಭಾಂಗಣ, ಎಸ್.ಎಸ್.ಆಸ್ಪತ್ರೆ, ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯಾಗಾರಗಳು ಆರಂಭವಾದವು.
ಟಿಓಟಿ (ತರಬೇತುದಾರರ ತರಬೇತಿ) ಎಟಿಎಂ ಅಪ್‌ಡೇಟೆಡ್-2024, ಟಿಓಟಿ (ತರಬೇತು ದಾರರ ತರಬೇತಿ) ನನ್ನ ಮನೆ, ನನ್ನ ಮಗು, ಅಸ್ತಮಾ ತರಬೇತಿ ಮಾದರಿ, ಶ್ವಾಸಕೋಶ ಕಾರ್ಯ ಪರೀಕ್ಷೆಗಳು, ಬ್ರಾಂಕೋಸ್ಕೋಪಿ ಕಾರ್ಯಾಗಾರಗಳ ಪ್ರಮುಖ ವಿಷಯಗಳಾಗಿದ್ದವು.