ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಶಿಲ್ಪಿಗಳು

ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಶಿಲ್ಪಿಗಳು

ಅನ್‌ಮೋಲ್ ಸ್ಕೂಲ್‌ ಶಿಕ್ಷಕರ ದಿನಾಚರಣೆಯಲ್ಲಿ ಶಿವಕುಮಾರ್ ಎಂ.ಪಿ.

ದಾವಣಗೆರೆ, ಸೆ.26-  ನಮ್ಮೆಲ್ಲರ ಜೀವನದಲ್ಲಿ ತಂದೆ-ತಾಯಿಗಳಂತೆ ಶಿಕ್ಷಕರ ಪಾತ್ರವೂ ಬಹಳ ಮಹತ್ವದ್ದು, ಕೈಹಿಡಿದು ಅಕ್ಷರ ತಿದ್ದಿ, ಓದಿ-ಬರೆಯಲು ಕಲಿಸುವುದಷ್ಟೇ ಅಲ್ಲದೆ, ಬದುಕಿನ ಕೌಶಲ್ಯಗಳನ್ನೂ ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಶಿಕ್ಷಕರು ಒಂದರ್ಥದಲ್ಲಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಶಿಲ್ಪಿಗಳು ಎಂದು   ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಪಡೆದಿರುವ ಕಂಪ್ಯೂಟರ್  ಶಿಕ್ಷಕ   ಶಿವಕುಮಾರ್ ಎಂ.ಪಿ ಅಭಿಪ್ರಾಯಿಸಿದರು.

ಶಿರಮಗೊಂಡನಹಳ್ಳಿಯ ಅನ್‌ಮೋಲ್ ಪಬ್ಲಿಕ್ ಸ್ಕೂಲ್‌ನಲ್ಲಿ  ಆಚರಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಆಗಮಿಸಿ, ಅವರು ಮಾತನಾಡಿದರು  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ  ಸಿ.ಜಿ.ದಿನೇಶ್‌ ವಹಿಸಿ ದ್ದರು.  ಶಿಕ್ಷಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದೇ ಸಮಯದಲ್ಲಿ ಶಿಕ್ಷಕರು ಗೀತ ಗಾಯನ ಮತ್ತು ಉತ್ತಮ ಸಾಹಿತ್ಯವಿರುವ ಹಾಡುಗಳಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

ಪ್ರಾಂಶುಪಾಲ  ಕೊಟ್ರೇಶ್.ಯು, ಸುಬ್ರ ಮಣಿ ಶಾಲೆಯ ಶೈಕ್ಷಣಿಕ ಸಲಹೆಗಾರ ಎಸ್.ಚಿದಾನಂದ್ ಮತ್ತಿತರರು ಭಾಗವಹಿಸಿದ್ದರು.

ರೋಟರಿ ಮತ್ತು ಇನ್ನರ್‌ವ್ಹೀಲ್ ಸಂಸ್ಥೆ ಯಿಂದ    ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ  ಪಡೆದಿರುವ ಶಿವಕುಮಾರ್ ಎಂ.ಪಿ ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದಿಂದ  `ಜಿಲ್ಲಾ ಅತ್ಯುತ್ತಮ ಶಿಕ್ಷಕ ಸೇವಾ ಪ್ರಶಸ್ತಿ’  ಪಡೆದಿರುವ  ಕನ್ನಡ ಶಿಕ್ಷಕ ಆರ್. ಅಣ್ಣಪ್ಪ   ಅವರುಗಳನ್ನು  ಶಾಲೆ ವತಿಯಿಂದ ಅಭಿನಂದಿಸಲಾಯಿತು.

error: Content is protected !!