ಮಹಿಳೆಯರಿಗೆ ಸಂವಿಧಾನದಡಿ ನಿಜವಾದ ಸ್ವಾತಂತ್ರ್ಯ ನೀಡಿದ್ದು ಅಂಬೇಡ್ಕರ್

ಮಹಿಳೆಯರಿಗೆ ಸಂವಿಧಾನದಡಿ ನಿಜವಾದ ಸ್ವಾತಂತ್ರ್ಯ ನೀಡಿದ್ದು ಅಂಬೇಡ್ಕರ್

ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಏ.15- ಮಹಿಳೆಯರಿಗೂ ಸಹ ಸಂವಿಧಾನದಲ್ಲಿ ಪ್ರಾತಿನಿಧ್ಯ ನೀಡಿದ ಅಂಬೇಡ್ಕರ್ ಅವರು ಎಂದಿಗೂ ಸಹ ಚಿರಸ್ಮರಣೀಯರು ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವತಂತ್ರ ಭಾರತಕ್ಕೆ ಶ್ರೇಷ್ಠತೆಯ ಸಂವಿಧಾನವನ್ನು ನೀಡಿದ ಡಾ. ಬಿ.ಆರ್ . ಅಂಬೇಡ್ಕರ್ ಅವರು ಈ ದೇಶದ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿರುವುದು ಸೌಭಾಗ್ಯವಾಗಿದ್ದು, ನಮ್ಮ ಸಂವಿಧಾನ ಇತರೆ ರಾಷ್ಟ್ರಗಳಿಗೆ ಪ್ರೇರಣೆಯಾಗುವಂತೆ ನೀಡಿರುವುದು ಈ ದೇಶದ ಹೆಮ್ಮೆಯ ಪ್ರತೀಕ ಎಂದರು. ಎಲ್ಲಾ ರೀತಿಯಲ್ಲೂ ವೈವಿಧ್ಯತೆ ಮತ್ತು ಸಮಾನತೆಯನ್ನು ಅಳವಡಿಸಿಕೊಳ್ಳುವ, ರಾಷ್ಟ್ರವನ್ನು ನಿರ್ಮಿಸುವ ಮೂಲಕ ಡಾ. ಬಿ.ಆರ್ ಅಂಬೇಡ್ಕರ್‌ವರ ದೂರದೃಷ್ಟಿಯನ್ನು ಗೌರವಿಸೋಣ ಎಂದು ಕರೆ ನೀಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಮತ್ತು ಪರಂಪರೆ ಭಾರತದ ಇತಿಹಾಸದ ಕೇವಲ ಒಂದು ಭಾಗವಲ್ಲದೇ ನ್ಯಾಯಯುತ ಸಮಾಜದ ಕಡೆಗೆ ನಮ್ಮನ್ನು ಮಾರ್ಗದರ್ಶಿಸುವ ದಾರಿದೀಪವಾಗಿದೆ. ಸಮಾನತೆ ಮತ್ತು ಸಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಡಾ.ಬಿ.ಆರ್. ಅಂಬೇಡ್ಕರ್‍ರವರು ಪ್ರತಿಪಾದಿಸಿದ ಸಂವಿಧಾನ ಇಂದಿನ ಹಾಗೂ ಮುಂಬರುವ ಎಲ್ಲಾ ಪೀಳಿಗೆಗೂ ಸ್ಪೂರ್ತಿದಾಯಕವಾಗಿದೆ ಎಂದರು.

ಸುಸ್ಥಿರ ಸಂವಿಧಾನಕ್ಕೆ ಇಂದಿನ ಪರಿಸ್ಥಿತಿಗಳು ನೀಡುತ್ತಿರುವ ಬೆದರಿಕೆಯ ವಾತಾವರಣದಲ್ಲಿ ನಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ನಾವು ಒಂದುಗೂಡಿ ಪ್ರತಿಯೊಬ್ಬ ವ್ಯಕ್ತಿಯನ್ನು ಘನತೆ ಮತ್ತು ಗೌರವದಿಂದ ಕಾಣುವ ಸಮಾಜದ ನಿರ್ಮಾಣಕ್ಕಾಗಿ ಕಾರ್ಯ ನಿರ್ವಹಿಸೋಣ ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ ಮಾತನಾಡಿ, ಸಂವಿಧಾನದ ಆಶಯಗಳಿಗೆ ತಕ್ಕಂತೆ ನಾವೆಲ್ಲರೂ ನಡೆದುಕೊಳ್ಳೊಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಎಸ್.ಮಲ್ಲಿಕಾರ್ಜುನ್, ಎ.ನಾಗರಾಜ್, ಗೋಪಿನಾಯ್ಕ,  ಹೆಚ್.ಜಯಣ್ಣ, ಸಾಗರ್ ಎಲ್‍ಎಂಹೆಚ್., ಟಿ.ರಮೇಶ್, ಪ್ರವೀಣ್, ರಾಕೇಶ್, ಅನಿಷ್ ಪಾಷ, ಪರಮೇಶ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಶುಭಮಂಗಳ, ಮಂಜಮ್ಮ, ಡೋಲಿ ಚಂದ್ರು, ಕಣ್ಣಾಳ್ ಅಂಜಿನಪ್ಪ, ಆದಾಪುರ ನಾಗರಾಜ್, ಮಾನಸ ತಿಪ್ಪೇಸ್ವಾಮಿ, ಮುಜಾಹಿದ್, ದೇವರಹಟ್ಟಿ ಸಮಿ ಮತ್ತಿತರರಿದ್ದರು.

error: Content is protected !!