ಹೊಳೆಸಿರಿಗೆರೆ : ಇಂದಿನಿಂದ ಆಂಜನೇಯ ಸ್ವಾಮಿ ಜಾತ್ರೆ

ಹೊಳೆಸಿರಿಗೆರೆ : ಇಂದಿನಿಂದ ಆಂಜನೇಯ ಸ್ವಾಮಿ ಜಾತ್ರೆ

ಮಲೇಬೆನ್ನೂರು ಸಮೀಪದ ಹೊಳೆಸಿರಿಗೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಜಾತ್ರಾ ಕಾರ್ಯಕ್ರಮಗಳು ಇಂದಿನಿಂದ ಇದೇ ದಿನಾಂಕ 18ರವರೆಗೆ  ಜರುಗಲಿವೆ.

ಇಂದು ಬೆಳಿಗ್ಗೆ 5 ಗಂಟೆಗೆ ಆಂಜನೇಯ ಸ್ವಾಮಿಗೆ ಕುಂಭಾಭಿಷೇಕ, ನಂತರ ಗ್ರಾಮಸ್ಥರಿಂದ ಎಣ್ಣೆ ಅರಿಶಿಣ ಸೇವೆ, ಸಾಯಂಕಾಲ 4 ಗಂಟೆಗೆ ಬುಳ್ಳಾಪುರದ ದುರ್ಗಾದೇವಿ ಹಾಗೂ ಶ್ರೀ ಸೋಮೇಶ್ವರಿ ದೇವರುಗಳ ಆಗಮನ, ಸಂಜೆ 6 ಗಂಟೆಗೆ ಮಂಗಳ ವಾದ್ಯಗಳೊಂದಿಗೆ ರಾಜಬೀದಿಯಲ್ಲಿ ಬೃಹತ್ ಮೆರವಣಿಗೆ, ಸಂಜೆ 7 ಗಂಟೆಗೆ ಸ್ವಾಮಿಗೆ ಕಂಕಣಧಾರಣೆ, ನಂತರ ರಥಕ್ಕೆ ಕಳಸಧಾರಣೆ, ರಾತ್ರಿ 8.30ಕ್ಕೆ ಶ್ರೀ ಆಂಜನೇಯ ಸ್ವಾಮಿಯ ಆನೆ ಉಚ್ಛಾಯ ಮತ್ತು ಉಚ್ಛಾಯ ರಥೋತ್ಸವ ನಡೆಯಲಿದೆ.

ನಾಳೆ ದಿನಾಂಕ 17ರ ಬುಧವಾರ ಬೆಳಇಗ್ಗೆ 10.15ಕ್ಕೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗ ಲಿದ್ದು, ಮಧ್ಯಾಹ್ನ 1 ಗಂಟೆಗೆ ಸಾಮೂಹಿಕ ವಿವಾಹ, ಜವಳ, ಉರುಳುಸೇವೆ ಸೇರಿದಂತೆ ಇತ್ಯಾದಿ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಸಾಯಂಕಾಲ 4 ಗಂಟೆಗೆ ಸ್ವಾಮಿಯು ಭೇಟೆಯಾಡಲು ಹೊರಡುವುದು. ನಾಡಿದ್ದು ದಿನಾಂಕ 18ರ ಗುರುವಾರ ಮಧ್ಯಾಹ್ನ 12ಕ್ಕೆ ಕಂಕಣ ವಿಸರ್ಜನೆ, ನಂತರ ಓಕುಳಿ ಕಾರ್ಯಕ್ರಮ, ಸಂಜೆ 5 ಗಂಟೆಗೆ ಸ್ವಾಮಿಯ ಮುಳ್ಳೋತ್ಸವ, ಸಂಜೆ 6 ಗಂಟೆಗೆ ಭೂತನ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ ಎಂದು ಗ್ರಾಮದ ಕೆ. ರುದ್ರೇಶ್ ತಿಳಿಸಿದ್ದಾರೆ.

error: Content is protected !!