ನಗರದಲ್ಲಿ ಬೇಸಿಗೆ ಕಬಡ್ಡಿ ತರಬೇತಿ ಶಿಬಿರ

ದಾವಣಗೆರೆ, ಏ.2- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಸೃಷ್ಠಿ ಕಬಡ್ಡಿ ಅಕಾಡೆಮಿ, ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 5 ರಿಂದ 25 ವರೆಗೆ ಪ್ರತಿದಿನ ಬೆಳಿಗ್ಗೆ 6.30 ರಿಂದ 8 ರ ವರೆಗೆ ಮತ್ತು ಸಾಯಂಕಾಲ 5.30 ರಿಂದ 7.30 ರವರೆಗೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಬೇಸಿಗೆ ಕಬಡ್ಡಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ವಿವರಗಳಿಗಾಗಿ ಕಬಡ್ಡಿ ತರಬೇತುದಾರರಾದ ಶೈಲ ಎಸ್.(9448667255), ರಾಕೇಶ್‍ (9448835907), ಶಿವಯೋಗಿ (90196 19900) ಮತ್ತು ನೂರುಲ್ಲಾ (9740107364) ಇವರನ್ನು ಸಂಪರ್ಕಿಸಬಹುದೆಂದು  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿಬಾಯಿ ತಿಳಿಸಿದ್ದಾರೆ.

error: Content is protected !!