ಭಾವಸಾರ ವಿಷನ್ ಜಾಗೃತಿ ಜಾಥಾದಲ್ಲಿ ಜಿಪಂ ಯೋಜನಾಧಿಕಾರಿ ಮಲ್ಲಾನಾಯ್ಕ
ದಾವಣಗೆರೆ, ಏ.2- ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶೇ.90 ಕ್ಕಿಂತಲೂ ಹೆಚ್ಚು ಮತದಾನ ವಾಗಬೇಕೆಂಬ ಗುರಿ ಹೊಂದಿದ್ದು, ಗುರಿ ತಲುಪಲು ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾವಸಾರ ವಿಷನ್ ಇಂಡಿಯಾ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾರರು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಸ್ಪಷ್ಟ ಅಭಿಪ್ರಾಯ ವನ್ನು ವ್ಯಕ್ತಪಡಿಸಬೇಕು. ಚುನಾವಣೆಯಲ್ಲಿ ಎಲ್ಲಾ ಮತದಾರರು ಮತ ಚಲಾಯಿಸಿದಲ್ಲಿ ಉತ್ತಮ ನಾಯಕ ರನ್ನು ಆಯ್ಕೆ ಮಾಡಲು ಸಹಕಾರಿಯಾಗಲಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಬಿಸಿಎಂ ಅಧಿಕಾರಿ ಗಾಯತ್ರಿ, ವಿವಿಧ ಇಲಾಖೆಯ ವಾರ್ಡನ್‌ಗಳು, ಭಾವಸಾರ ವಿಷನ್ ಇಂಡಿಯಾ ಅಧ್ಯಕ್ಷರಾದ ಶ್ರೀಮತಿ ಸರಳಾ ಆಮ್ಟೆ, ಕಾರ್ಯದರ್ಶಿ ರಮೇಶ್ ಗುಜ್ಜರ್, ಉಪಾಧ್ಯಕ್ಷ ಅಶೋಕ್ ನವಲೆ, ರಮೇಶ್ ಅಂಬರ್‍ಕರ್, ಅರುಣ್ ಗುಜ್ಜರ್, ನಿಂಗೋಜಿರಾವ್ ಗುಜ್ಜರ್, ಆರ್ಥಿ ಗುಜ್ಜರ್, ರಮೇಶ್ ತೇಲ್ಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಜಯದೇವ ವೃತ್ತದಿಂದ ಪ್ರಾರಂಭವಾದ ಮತದಾನ ಜಾಗೃತಿ ಜಾಥಾ ಅಂಬೇಡ್ಕರ್ ಸರ್ಕಲ್ ಮೂಲಕ ವಿದ್ಯಾರ್ಥಿ ಭವನ ಮಾರ್ಗವಾಗಿ ತೆರಳಿ ಗುಂಡಿ ಸರ್ಕಲ್ ತಲುಪಿತು.