ವನಿತಾ ಸಮಾಜದ ಡಿಜಿಟಲ್ ಲೈಬ್ರರಿಗೆ 25 ರಂದು ಚಾಲನೆ

ದಾವಣಗೆರೆ, ಮಾ. 17- ನಗರದ ವನಿತಾ ಸಮಾಜದ ವತಿಯಿಂದ ಇದೇ ದಿನಾಂಕ 25 ರಂದು `ವನಿತಾ ಡಿಜಿಟಲ್ ಲೈಬ್ರರಿ’ ಆರಂಭಿಸಲಾಗುವುದು ಲೈಬ್ರರಿ ಅಧ್ಯಕ್ಷರಾದ ರೇಖಾ ಪ್ರಸನ್ನಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವನಿತಾ ಸಮಾಜವು ಕಳೆದ 60 ವರ್ಷಗಳಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ವಿವಿಧ ಅಂಗಸಂಸ್ಥೆಗಳನ್ನು ಹೊಂದಿದ್ದು, ಡಿಜಿಟಲ್ ಲೈಬ್ರರಿ ಆರಂಭಿಸುವ ಮೂಲಕ ಬ್ಯಾಂಕಿಂಗ್, ಐಎಎಸ್, ಐಪಿಎಸ್ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಡಿಜಿಟಲ್ ಲೈಬ್ರರಿ ಆರಂಭಿಸಲು ಮಾಜಿ ಮೇಯರ್ ಎಸ್.ಟಿ. ವೀರೇಶ್, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಸಾಕಷ್ಟು ಸಹಕಾರ ನೀಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ ಯನ್ನು ಇನ್‌ಸೈಟ್ಸ್ ಐಎಎಸ್ ಸಂಸ್ಥೆ ವತಿಯಿಂದ ನೀಡುವುದಾಗಿ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಭರವಸೆ ನೀಡಿದ್ದಾರೆ. ಅವರ ಸಂಸ್ಥೆ ಸಹಯೋಗದಲ್ಲಿ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಆನ್‌ಲೈನ್ ತರಗತಿಗಳು ಇದೇ ದಿನಾಂಕ 25 ರಿಂದ ಆರಂಭವಾಗಲಿವೆ. ಇದೇ ದಿನಾಂಕ 16 ರಿಂದ ವನಿತಾ ಸಮಾಜದಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. ಆಸಕ್ತರು ಪುಷ್ಪಾ (9964913202), ಮಂಗಳ (9964114869) ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವನಿತಾ ಸಮಾಜದ ಪದಾಧಿಕಾರಿಗಳಾದ ಪದ್ಮಾ ಪ್ರಕಾಶ್, ವಾಗ್ದೇವಿ, ನಾಗರತ್ನ ಜಗದೀಶ್, ಶೀಲಾ ನಲ್ಲೂರು, ಸುಮಾ ಶಶಿಧರ್, ವಿಜಯಕುಮಾರಿ, ಡಾ. ಎಸ್. ಶುಭಾ ಪಾಟೀಲ್ ಉಪಸ್ಥಿತರಿದ್ದರು.

error: Content is protected !!