ಉಕ್ಕಡಗಾತ್ರಿಯಲ್ಲಿ ವೈಭವದ ಬೆಳ್ಳಿ ರಥೋತ್ಸವ, ಪಾಲಿಕೋತ್ಸವ

ಉಕ್ಕಡಗಾತ್ರಿಯಲ್ಲಿ ವೈಭವದ ಬೆಳ್ಳಿ ರಥೋತ್ಸವ, ಪಾಲಿಕೋತ್ಸವ

ಮಲೇಬೆನ್ನೂರು, ಮಾ.17- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ನಡೆಯುತ್ತಿರುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಜಾತ್ರೆ ಅಂಗವಾಗಿ ಶನಿವಾರ ಬೆಳಗ್ಗೆ ಅಜ್ಜಯ್ಯನ ಬೆಳ್ಳಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. 

ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬೆಳ್ಳಿ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಭಕ್ತರು, ಅಜ್ಜಯ್ಯ ಅಜ್ಜಯ್ಯ ಎಂಬ ಜಯಘೋಷಗಳೊಂದಿಗೆ ಬೆಳ್ಳಿ ರಥವನ್ನು ಎಳೆದು ಸಂಭ್ರಮಿಸಿದರು. ಸಂಜೆ ಅಜ್ಜಯ್ಯನ ಪಾಲಿಕೋತ್ಸವವು ಕೂಡಾ ಸಂಭ್ರಮದಿಂದ ನಡೆಯಿತು. 

ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಅಜ್ಜಯ್ಯನ ಮೂರ್ತಿ ಪ್ರತಿಷ್ಠಾಪಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಪಟಾಕಿ ಸಿಡಿತ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ಎಲ್ಲರ ಗಮನ ಸೆಳೆದವು.  ಗದ್ದುಗೆ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ವಾಸನದ ಜಿ.ನಂದಿಗೌಡ್ರು, ಕಾರ್ಯದರ್ಶಿ ಸುರೇಶ್ ಮತ್ತು ನಿರ್ದೇಶಕರುಗಳು ಹಾಜರಿದ್ದು, ಈ ಎಲ್ಲಾ ಕಾರ್ಯಕ್ರಮಗಳ್ನು ನಡೆಸಿಕೊಟ್ಟರು. 

error: Content is protected !!