ದಾವಣಗೆರೆ, ಮಾ. 15- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗದ ಘಟಕ 01 ರಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಿಭಾಗೀಯ ತಾಂತ್ರಿಕ ಶಿಲ್ಪಿ ವೆಂಕಟೇಶ್, ವಿಭಾಗೀಯ ಸಂಚಾಲನಾಧಿಕಾರಿ ಫಕೃದ್ಧಿನ್, ಭದ್ರತಾಧಿಕಾರಿ ಜಗದೀಶ್ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಓಂಕಾರಪ್ಪ, ಕರಿಬಸವ ಸ್ವಾಮಿ ಆಯೋಜಿಸಿದ್ದರು. ಕಾನೂನು ಅಧಿಕಾರಿ ವೀಣಾ ಕುಮಾರಿ ಉಪಸ್ಥಿತರಿದ್ದು, ಮಾತನಾಡಿದರು. ಶ್ರೀಮತಿ ಸುನೀತಾ ಪ್ರಾರ್ಥಿಸಿದರು. ಕೆ.ಎಂ. ವೀರಯ್ಯ ನಿರೂಪಿಸಿದರು. ಶ್ರೀಮತಿ ಪುಷ್ಪಾ ಭಜಂತ್ರಿ ವಂದಿಸಿದರು.