ದಾವಣಗೆರೆ, ಆ.30- ಜಮಾಯಿತ್ ಈ ಉಲ್ಮಾ ವತಿಯಿಂದ ಸುಮಾರು 30 ಆಮ್ಲಜನಕ ಸಿಲಿಂಡರ್ ಗಳನ್ನು ಉಚಿತವಾಗಿ ಅಗತ್ಯವಿರುವ ಕೋವಿಡ್ ರೋಗಿಗಳ ಸೇವೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿ 24 ತಾಸು ಲಭ್ಯವಿ ರಲಿವೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ಮೌಲಾನ ಸಮೀವು ಲ್ಲಾ, ಕಾರ್ಯದರ್ಶಿ ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ಸಾರ್ವಜನಿಕ ಸೇವೆಗಾಗಿ ನೀಡಲಾಗುವ ಆಮ್ಲಜನಕ ಸಿಲಿಂಡರ್ ದುರ್ಬಳಕೆ ತಪ್ಪಿಸುವ ಸಲುವಾಗಿ ಮುಂಗಡವಾಗಿ 5 ಸಾವಿರ ಕಟ್ಟಿಸಿಕೊಂಡು ಸಿಲಿಂಡರ್ ನೀಡಲಿದ್ದು, ಅದನ್ನು ಉಪಯೋಗಿಸಿ ವಾಪಸ್ ನೀಡಿದ ಮೇಲೆ ಪುನಃ ಕಟ್ಟಿದ ಮುಂಗಡ ಹಣ ವಾಪಸ್ ಪಡೆಯಬಹುದಾಗಿದೆ ಎಂದಿದ್ದಾರೆ.
ಸಿಲಿಂಡರ್ ಗಳ ಅವಶ್ಯಕತೆ ಉಸಿರಾಟದ ತೊಂದರೆಯುಳ್ಳ ಕೊರೊನಾ ರೋಗಿಗಳಿಗೆ ಇದ್ದು, ವೈದ್ಯರ ಸಲಹೆ-ಮಾರ್ಗದರ್ಶನದಡಿ ಇದರ ಬಳಕೆಗೆ ನೀಡಲು ಲಭ್ಯವಿವೆ. ಈಗಾಗಲೇ ಸುಮಾರು 7 ಸಿಲಿಂಡರ್ ಗಳು ಸದ್ವಿನಿಯೋಗವಾಗಿದ್ದು, ಇನ್ನುಳಿದ ಸಿಲಿಂಡರ್ ಗಳ ಸದ್ಬಳಕೆಯನ್ನು ಕೋವಿಡ್ ಆಸ್ಪತ್ರೆಯ ರೋಗಿಗಳಿಗೆ ಹಾಗೂ ನಗರ, ಗ್ರಾಮೀಣ ಭಾಗದ ಜನರು ಸೇರಿದಂತೆ ನಮ್ಮ ಜಿಲ್ಲೆಯ ಜನರು ಅಷ್ಟೇ ಅಲ್ಲದೇ ಅವಶ್ಯವುಳ್ಳ ಇತರೆ ಜಿಲ್ಲೆಯವರು ಸಹ ಮಾಡಿಕೊಳ್ಳಬಹುದಾಗಿದೆ. ಜಮಾಯಿತ್ ಈ ಉಲ್ಮಾ ವತಿಯಿಂದ ಆಮ್ಲಜನಕ ಸಿಲಿಂಡರ್ಗಳ ಸೇವೆ ನೀಡಲು ಸಿದ್ದವಿದ್ದು, 9731009003, 9036693513, 9448045708, 9964239688, 9739192005, 91642 81272 ಈ ಸಂಖ್ಯೆ ಸಂಪರ್ಕಿಸಬಹುದು ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮನವಿ ಮಾಡಿದ್ದಾರೆ.