ಹರಿಹರ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ : ವಿನಯ್

ಹರಿಹರ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ : ವಿನಯ್

ಹರಿಹರ, ಮೇ 5- ನಾನು ಲೋಕಸಭೆ ಸದಸ್ಯನಾದರೆ ಹರಿಹರ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತೇನೆ ಎಂದು   ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಭರವಸೆ ನೀಡಿದರು. 

 ಹರಿಹರೇಶ್ವರ ದೇವಾಲಯ, ಲಕ್ಷ್ಮಿ ದೇವಾಲಯ, ಕಾಲಭೈರವ, ಒಡಬಾಂಡೇಶ್ವರ, ತಾರಕೇಶ್ವರ, ಚಿಕ್ಕ ಹರಿಹರೇಶ್ವರ, ಕಾಶಿ ವಿಶ್ವನಾಥ, ಯೋಗೇಶ್ವರ, ಆಂಜನೇಯ, ಅಂಬಾಭವಾನಿ, ವಿಠ್ಠಲ ಮಂದಿರ, ಬಸವೇಶ್ವರ, ಶ್ರೀ ರಾಮದೇವರ ಗುಡಿ, ವೆಂಕಟರಮಣಸ್ವಾಮಿ, ಮಾರ್ಕಂಡೇಶ್ವರ ದೇವಾಲಯ, ಶ್ರೀ ವೀರಭದ್ರೇಶ್ವರ ಗುಡಿ, ಉಕ್ಕಡಗಾತ್ರಿ ದೇವಾಲಯವೂ ಸೇರಿದಂತೆ, ಅನೇಕ ಧಾರ್ಮಿಕ, ಶ್ರದ್ಧಾ ಕೇಂದ್ರಗಳಿವೆ. ಈ ದೇವಾಲಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು. 

ಈ ವೇಳೆ ಭಾನುವಳ್ಳಿ ಗ್ರಾಮದ ವಿ. ನಾಗರಾಜ್, ಎಂ. ಮಾಂತೇಶ್, ಬಿ. ಎನ್. ಕರಿಯಪ್ಪ, ಬಿ. ಮಹಾದೇವಪ್ಪ, ಬಿ. ಚಂದ್ರಪ್ಪ, ಹೆಚ್.ಸುರೇಶ್, ಎ.ಲೋಕೇಶ್, ಜೋಗಪ್ಪರ ಸುರೇಶ್, ಕೋಲ್ಕರ್ ನಾಗಪ್ಪ, ನಾಗರಾಜ ಶಿಕಾರಿಪುರ ಮತ್ತಿತರರು ಹಾಜರಿದ್ದರು.

ಭಾನುವಳ್ಳಿ, ಮಲೇಬೆನ್ನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.  

ಮಲೇಬೆನ್ನೂರಿನಲ್ಲಿ  ಮಾತನಾಡಿದ ವಿನಯ್ ಕುಮಾರ್, ಮಲೇಬೆನ್ನೂರು ಸೇರಿದಂತೆ, ಹಲವು ಗ್ರಾಮಗಳಲ್ಲಿ ಇಂದಿಗೂ ಭದ್ರಾ ಅಚ್ಚುಕಟ್ಟುದಾರರಿದ್ದಾರೆ. ತುಂಗಭದ್ರಾ ನದಿಯು ಹರಿಯುತ್ತದೆ. ಈ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗಲೇಬಾರದು. ಒಂದೆಡೆ ಭದ್ರಾ ಡ್ಯಾಂನಿಂದಲೂ ನೀರು ಬರುತ್ತದೆ. ತುಂಗಭದ್ರಾ ನದಿಯೂ ಹರಿಯುತ್ತದೆ. ಆದರೂ ಈ ಭಾಗದ ಅಡಿಕೆ, ಭತ್ತ ಬೆಳೆಗಾರರು ನೀರು ಸಿಗದೇ ಪರದಾಡುವಂತಾಗಿದೆ. ತನ್ನ ಹಕ್ಕಿಗಾಗಿ ಹೋರಾಡುವಂಥ ಸ್ಥಿತಿ ನಿರ್ಮಾಣ ಆಗಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದರು. 

ಈ ಸಂದರ್ಭದಲ್ಲಿ ಮಲೇಬೆನ್ನೂರು ಗ್ರಾಮದ ಮುಖಂಡರಾದ ಸೈಯ್ಯದ್ ಗೌಸ್, ಸುಲೇಮಾನ್, ಸೈಯ್ಯದ್ ಮುಬಾರಕ್, ಸೈಫುಲ್ಲಾ, ಪ್ರಭು, ಜಮೀರ್, ಶ್ರೀನಿವಾಸ, ದಾನಪ್ಪ, ವಿನಯ್, ಪವನ್, ವಿಜಯ್ ಕುಮಾರ್, ರೇವಣಸಿದ್ಧ, ಗೋರಪುರ ಹನುಮಂತಪ್ಪ, ಮಂಜುನಾಥ ಮತ್ತಿತರರು ಹಾಜರಿದ್ದರು.

error: Content is protected !!