ಮಲೇಬೆನ್ನೂರಿನಲ್ಲಿ ಇಂದು 108 ಶಿವಲಿಂಗಗಳ ಬೃಹತ್ ಶೋಭಾ ಯಾತ್ರೆ

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಇಂದು ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ 108 ಶಿವಲಿಂಗಗಳ ಬೃಹತ್ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 8 ಗಂಟೆಗೆ ಮಲೇಬೆನ್ನೂರಿನ ನೀರಾವರಿ ಇಲಾಖೆ ಆವರಣದಿಂದ ಶೋಭಾಯಾತ್ರೆ ಆರಂಭವಾಗಿ ಅಲ್ಲಿಂದ ಕೊಮಾರನಹಳ್ಳಿ, ಹಾಲಿವಾಣ, ಹರಳಹಳ್ಳಿ, ಯರಲಬನ್ನಿ ಕೋಡು, ಮಲ್ಲನಾಯ್ಕನಹಳ್ಳಿ, ನೆಹರು ಕ್ಯಾಂಪ್, ಬೂದಿಹಾಳ್, ಕುಣೆಬೆಳಕೆರೆ, ನಿಟ್ಟೂರು, ಕುಂಬಳೂರು ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ಮಲೇಬೆನ್ನೂರಿಗೆ ಆಗಮಿಸಲಿದೆ.  ಈ ವೇಳೆ ಶೋಭಾಯಾತ್ರೆಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು. ಜೊತೆಗೆ ಹೆಲಿಕ್ಯಾಪ್ಟರ್ ಮೂಲಕ ಶಿವಸಂದೇಶ ಸಾರುವ ಕರ ಪತ್ರಗಳನ್ನು ಮಲೇಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಕಲಾಗುವುದು.

ಮಧ್ಯಾಹ್ನ 3 ಗಂಟೆ ನಂತರ ಶೋಭಾಯಾತ್ರೆಯು ಮಲೇಬೆ ನ್ನೂರಿನಿಂದ ಜಿಗಳಿ, ಯಲವಟ್ಟಿ, ಲಕ್ಕಶೆಟ್ಟಿಹಳ್ಳಿ, ಹೊಳೆಸಿರಿಗೆರೆ, ಕೆ.ಎನ್. ಹಳ್ಳಿ, ಕೊಕ್ಕನೂರು, ಹಳ್ಳಿಹಾಳ್, ಜಿ. ಬೇವಿನಹಳ್ಳಿ, ವಡೆಯರ ಬಸಾಪುರ ಗ್ರಾಮಗಳಲ್ಲಿ ಸಂಚರಿಸಿ, ಸಂಜೆ 7 ಗಂಟೆ ಸುಮಾರಿಗೆ ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನ ತಲುಪಲಿದ್ದು, ಇದೇ ದಿನಾಂಕ 22ರವರೆಗೆ ಭಕ್ತರ ದರ್ಶನಕ್ಕಾಗಿ 108 ಶಿವಲಿಂಗಗಳನ್ನು ದೇವಸ್ಥಾನದಲ್ಲಿಯೇ ಇಡಲಾಗುವುದೆಂದು ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ತಿಳಿಸಿದ್ದಾರೆ.

error: Content is protected !!