ಬಿಐಇಟಿ ಕಾಲೇಜಿಗೆ 14 ರ‍್ಯಾಂಕ್‌

ದಾವಣಗೆರೆ, ಆ. 2 – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2022- 23 ಸಾಲಿನ ಪರೀಕ್ಷೆಗಳಲ್ಲಿ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು 14 ರ‍್ಯಾಂಕ್‌ ಪಡದಿದ್ದು, ವಿಶ್ವವಿದ್ಯಾಲಯದ ಮಟ್ಟದ ರ‍್ಯಾಂಕ್‌‌ ಗಳಿಕೆಯಲ್ಲಿ ಕಾಲೇಜು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಜವಳಿ ವಿಭಾಗದಲ್ಲಿ ಶೃತಿ ಕೆ. ಶೆಣೈ ಪ್ರಥಮ ರ‍್ಯಾಂಕ್‌  ಪಡೆದು ಚಿನ್ನದ ಪದಕ ವಿಜೇತರಾಗಿದ್ದಾರೆ. ಜಿ.ಎಂ. ಅನುಷಾ, ಕೆ.ಬಿ. ಸಂಜನಾ, ಎಸ್. ಮಾಲಿನಿ, ಎಸ್.ಎನ್. ರಂಜಿತಾ, ರಕ್ಷಿತಾ ಚಾಂದ್, ಜಿ. ಶುಭಾದೇವಿ, ಎನ್. ಚೈತ್ರಾ ಹಾಗೂ ವಿ. ಅನಿತಾ ಸೇರಿದಂತೆ ಇತರೆ ವಿದ್ಯಾರ್ಥಿಗಳು ರಾಂಕ್‌  ಪಡೆದಿದ್ದಾರೆ. 

ರಸಾಯನ ತಂತ್ರಜ್ಞಾನ ವಿಭಾಗದಲ್ಲಿ ಪವಿತ್ರಾ ಪಾಟೀಲ್ ಹಾಗು ಕೆ.ಜೆ ಅಮೃತವರ್ಷಿಣಿ ಕ್ರಮವಾಗಿ 4 ಮತ್ತು 8ನೇ ರ‍್ಯಾಂಕ್‌‌  ಪಡೆದಿದ್ದು, ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಎಸ್. ಶ್ರೇಯಸ್ ಹಾಗು ಬಿ.ಹೆಚ್. ಯಶಸ್ವಿನಿ ಕ್ರಮವಾಗಿ 4 ಮತ್ತು 7ನೇ ರ‍್ಯಾಂಕ್‌‌  ಪಡೆದಿದ್ದರೆ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದಲ್ಲಿ ಪ್ರಜ್ವಲ್ ವಿ. ಶಿರಗೇರಿ 6ನೇ ರ‍್ಯಾಂಕ್‌  ಪಡೆದಿದ್ದಾರೆ. ಮಂಗಳವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕಾಲೇಜಿನ ಐದು ಜನ ಬೋಧಕ ಸಿಬ್ಬಂದಿಗಳು ಪಿಹೆಚ್‍ಡಿ ಪದವಿ ಪಡೆಯಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಬಿ.ಅರವಿಂದ್  ತಿಳಿಸಿದ್ದಾರೆ.

error: Content is protected !!