ಲಿಂಗಾಯತರ ಗುತ್ತಿಗೆದಾರರಂತೆ ಬಿಜೆಪಿ ವರ್ತನೆ : ಡಾ.ಸಿದ್ದನಗೌಡ ಪಾಟೀಲ್

ಲಿಂಗಾಯತರ ಗುತ್ತಿಗೆದಾರರಂತೆ ಬಿಜೆಪಿ ವರ್ತನೆ : ಡಾ.ಸಿದ್ದನಗೌಡ ಪಾಟೀಲ್ - Janathavaniದಾವಣಗೆರೆ, ಮೇ 2- ಕಾರ್ಪೊರೇಟ್ ಕಂಪನಿಗಳ ಹಿತ ಕಾಪಾಡುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂದು ಭಾರತೀಯ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಆರ್ಥಿಕ ನೀತಿಗಳಲ್ಲಿ ವ್ಯತ್ಯಾಸ ಇಲ್ಲದಿದ್ದರೂ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಬಹುದು. ಆದರೆ ಬಿಜೆಪಿ ಬಂದರೆ ವಿರೋಧ ಪಕ್ಷಗಳು ಪ್ರತಿಭಟಿ ಸುವ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಬಿಜೆಪಿಯ ಮತಾಂಧ ರಾಜಕಾರಣ ತಡೆಯಲು ರಾಜ್ಯದ 215 ಮತ ಕ್ಷೇತ್ರಗಳಲ್ಲಿ ಸಿಪಿಐ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ. ಉಳಿದ ಕ್ಷೇತ್ರಗಳಲ್ಲಿ ಸಿಪಿಐ ಹಾಗೂ ಮಿತ್ರ ಪಕ್ಷಗಳು ಸ್ಪರ್ಧಿಸಿವೆ ಎಂದು ಹೇಳಿದರು.

ಲಿಂಗಾಯತರ ಬಗ್ಗೆ ಮಾತನಾಡುವ ಬಿಜೆಪಿಗೆ ತಾತ್ವಿಕ ಬಲವಿಲ್ಲ. ಲಿಂಗಾಯತರ ಗುತ್ತಿಗೆದಾರರಂತೆ ಬಿಜಿಪಿಯವರು ವರ್ತಿಸುತ್ತಿದ್ದಾರೆ. ವಾಸ್ತವವಾಗಿ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಲಿಂಗಾಯತ ತತ್ವಗಳು ವಿರುದ್ಧವಾಗಿವೆ. ಬಿಜೆಪಿಗೆ ಸಂವಿಧಾನಾತ್ಮಕವಾಗಿಯೂ, ತಾತ್ವಿಕವಾಗಿಯೂ ಲಿಂಗಾಯತವನ್ನು ರಾಜಕಾರಣಕ್ಕೆ ಬಳಸುವ ಹಕ್ಕಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆವರಗೆರೆ ಚಂದ್ರು, ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಆನಂದರಾಜ್, ಟಿ.ಎಸ್. ನಾಗರಾಜ್, ಐರಣಿ ಚಂದ್ರು ಉಪಸ್ಥಿತರಿದ್ದರು.

error: Content is protected !!