ಅಂಧರಾಗಿದ್ದ ಗಾನಯೋಗಿ ತಮ್ಮ ಕಾಯಕದೊಂದಿಗೆ ಕಣ್ಣಿದ್ದವರಿಗೂ ಜೀವನ ಚೈತನ್ಯ ನೀಡಿದ `ದಿವ್ಯಜ್ಯೋತಿ’

ಹಿರೇಕೋಗಲೂರು, ಸೆ.18- ಪ್ರಪಂಚದಲ್ಲಿ ಕಣ್ಣಿದ್ದರೂ ಸಹ ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವಲ್ಲಿ, ದುಶ್ಚಟಗಳು ತಮ್ಮ ಮುಂದೆ ನಡೆದರೂ ಸಹ ಕಾಣದಂತೆ ಸಾಗುವ ಇಂದಿನ ಮನುಷ್ಯರು ಕಣ್ಣಿರದಿದ್ದರೂ ಅನೇಕಾನೇಕ ಅಂಧರಿಗೆ ಮಾರ್ಗದರ್ಶಕರಾಗಿ ಸಂಗೀತ ವಿದ್ವಾನ್ ಬಿರುದು ಪಡೆದ ಮಾನವೀಯ ಚೈತನ್ಯಕ್ಕೆ ದೀಪ ಕೊಟ್ಟು ಅದರಂತೆ ಕಣ್ಣಿದ್ದವರಿಗೂ ಸಹ ಪ್ರೇರಣೆ ಏನೆಂಬುದನ್ನು ತೋರಿಸಿಕೊಟ್ಟ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಆದರ್ಶ ಮಹಾತ್ಮರ ಆದರ್ಶದಂತೆ ಎಂದು ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿ  ಆಶೀರ್ವಚನದಲ್ಲಿ ನುಡಿದರು. 

ಹಿರೇಕೋಗಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿ ನಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ನ ತಾಲ್ಲೂಕು ಘಟಕದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾ ರಂಭವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ, ಪರಿಷತ್ ಸ್ಥಾಪನೆಗೊಂಡ ನಂತರದಲ್ಲಿ ಸಂಗೀತಗಾರರ, ಕಲಾವಿದರ ನೋವನ್ನು ನಿವಾರಿಸುವ ಪ್ರಯತ್ನ ಪರಿಷತ್ತಿನಲ್ಲಿ ನಡೆಯಬೇಕು ಎಂದು ಕರೆ ನೀಡಿದರು. 

ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ ಮಾತನಾಡಿ, ಮನುಷ್ಯ ಮಾಡುವ ಕಾಯಕ, ಶ್ರದ್ಧೆ ಮತ್ತು ಉತ್ಸಾಹದ ಪ್ರತೀಕವಾಗಿದ್ದು, ಎಲ್ಲಾ ಜೀವಿಗಳಿಗೂ ಸಂಗೀತ ಅನಿವಾರ್ಯ ಎಂದರೆ ತಪ್ಪಾಗಲಾರದು.  ನಾನೂ ಸಹ ಆ ಭಾಗದವನಾಗಿದ್ದು, ಪುಟ್ಟರಾಜ ಗವಾಯಿಗಳ ಹಲವಾರು ತುಲಾಭಾರ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಅವರನ್ನು ತುಲಾಭಾರ ಗುರುಗಳೆಂದು ಕರೆಯುವ ವಾಡಿಕೆಯಿದೆ ಎಂದು ಪ್ರಸ್ತಾಪಿಸಿದರು.

ಗಾನಯೋಗಿ ಪರಿಷತ್ತಿನ ಜಿಲ್ಲಾಧ್ಯಕ್ಷರಾದ  ಪಂಕಜಾಕ್ಷಿ ಬಕ್ಕೇಶ್ ಮಾತನಾಡಿ, ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಿಸುವ ಕಾರ್ಯಕ್ಕೆ ಒತ್ತಾಯ ಹಾಕಲಾಗುತ್ತಿದ್ದು, ಶಿಕ್ಷಣಾಧಿಕಾರಿಗಳು ಇದಕ್ಕೆ ತಮ್ಮ ಬೆಂಬಲ ಕೊಡಬೇಕು ಎಂದು ಮನವಿ ಮಾಡಿಕೊಂಡರು. 

ರಾಜ್ಯ ಕಾರ್ಯದರ್ಶಿ ಎಂ.ಬಿ. ನಾಗರಾಜ್ ಕಾಕನೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವಾಧ್ಯಕ್ಷ ಕೆ. ಸಿರಾಜ್ ಅಹಮ್ಮದ್, ತಾಲ್ಲೂಕು  ಅಧ್ಯಕ್ಷ ಜಗದೀಶ್ ಗೌಡ, ನಾಗರಾಜ್ ಸಿರಿಗೆರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪರಂಜ್ಯೋತಿ ಜಗದೀಶ್, ಕೆ.ಎಸ್.ವೀರೇಶ್ ಪ್ರಸಾದ್, ಎಂ.ಬಿ. ಪ್ರಭಾಕರ್ ಅವರುಗಳನ್ನು ಸನ್ಮಾನಿಸಲಾಯಿತು. ಅಂಧ ಕಲಾವಿದ ರುದ್ರೇಶ್ ಮತ್ತು ತಂಡದವರಿಂದ ಪ್ರಾರ್ಥನೆ, ಸ್ವಾಗತ ಶರಣಪ್ಪ, ನಿರೂಪಣೆ ಸಿರಿಗೆರೆ ಜಗದೀಶ್, ವಂದನಾರ್ಪಣೆಯನ್ನು ಕೆ.ಬಿ.ಪ್ರದೀಪ್ ನಡೆಸಿಕೊಟ್ಟರು. 

error: Content is protected !!