ಮಲೇಬೆನ್ನೂರು, ಸೆ. 8- ಅರಮನೆಯ ರಾಜನಿಗಿಲ್ಲದ ಗೌರವ, ಶಾಲೆಯಲ್ಲಿ ಪಾಠ ಹೇಳಿಕೊಡುವ ಗುರುಗಳಿಗೆ ಇದೆ ಎಂದು ತಾಲೂಕು ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಅಭಿಪ್ರಾಯಪಟ್ಟರು.
ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಹಣ ಇದ್ದರೆ ಖರ್ಚಾ ಗುತ್ತದೆ. ಆದರೆ, ವಿದ್ಯೆಯನ್ನು ಯಾರೂ ಕಳ್ಳತನ ಮಾಡ ಲಾರರು, ಸಹೋದರರಿಗೆ ಹಂಚಿಕೆ ಮಾಡ ಲಾಗದು, ವಿದ್ಯಾಗಮ ಯೋಜನೆಯಂತೆ ಬಯಲು ಪಾಠ ಮಾಡುವ ಶ್ರಮವೇ ಎಸ್.ರಾಧಾಕೃಷ್ಣನ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.
ಎಪಿಜೆ ಅಬ್ದುಲ್ ಕಲಾಂ, ಥಾಮಸ್ ಅಲ್ವಾ ಎಡಿಸನ್ ರವರ ಯಶೋಗಾಥೆಯನ್ನು ಉದಾಹ ರಿಸಿ ಮಾತನಾಡಿದ ಅವರು, ಶಿಕ್ಷಕ ಎಂದರೆ ಸ್ಪರ್ಧಾತ್ಮಕ ಜಗದಲ್ಲಿ ಶಿವನೋಪಾದಿ ಕ್ಷಮಾ ಗುಣವುಳ್ಳ ಕಲಿಕೆ ಹಾಗೂ ಮನಃಪೂರ್ವಕ ವಿದ್ಯಾ ದಾನ ನೀಡುವವರೇ ನೈಜ ಶಿಕ್ಷಕರು, ಬನಾರಸ್ ವಿವಿ ಕುಲಪತಿಯಾಗಿ ಸೇವೆ ಮಾಡಿದ ರಾಧಾ ಕೃಷ್ಣನ್‍ರವರ ಆಶಯ ಉಪಾಧ್ಯಾಯರ ಗೌರವವೇ ಶಿಕ್ಷಕರ ದಿನಾಚರಣೆಯಾಗಿದೆ ಎಂದರು.
ಒಳ್ಳೆಯದನ್ನು ಸಮಾಜಕ್ಕೆ ನೀಡಿದರೆ ಪ್ರತಿಫಲವಾಗಿ ಉತ್ತಮವಾದುದನ್ನೇ ಪಡೆಯುತ್ತೇವೆ ಎಂದು ಅಡ್ಡದಾರಿಯಲ್ಲಿನ ಶಿಕ್ಷಕರಿಗೆ ಸಂದೇಶ ನೀಡುತ್ತಾ ಲಯನ್ಸ್ ಕ್ಲಬ್ ಸದಾ ಕಾಲ ಶಿಕ್ಷಕರ ದಿನವನ್ನು ನಿರಂತರವಾಗಿ ಮುಂದುವರೆಸಲಿ ಎಂದು ವಿನಂತಿ ಮಾಡಿದರು.
ಶಿಕ್ಷಕ ಎನ್. ನಿಂಗನಗೌಡ, ಲಯನ್ಸ್ ಶಾಲೆಯ ಗೋವಿಂದಪ್ಪ, ನಿಟ್ಟೂರು ಪ್ರೌಢಶಾಲೆಯ ರವೀಂದ್ರಪ್ಪ, ಕುಂಬಳೂರು ಪ್ರೌಢಶಾಲೆಯ ವಿಜಯಕುಮಾರ್ ಅಂಗಡಿ, ಜಿಗಳಿ ಗುಡ್ಡಪ್ಪ ಅವರು ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್. ಹನುಮಂ ತಪ್ಪ ಅಧ್ಯಕ್ಷತೆ ವಹಿಸಿ ಕೆಲ ವಿದ್ಯಾರ್ಥಿ ಗಳಿಗೆ ಅಕ್ಕಿ, ಬೇಳೆಯನ್ನು ವಿತರಿಸಿದರು. ಹೆಚ್.ಜಿ. ಚಂದ್ರ ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಓ.ಜಿ. ರುದ್ರಗೌಡ, ಎನ್.ಜಿ. ಶಿವಾಜಿ ಪಾಟೀಲ್, ಜಿಗಳಿಯ ಗೌಡ್ರ ಬಸವರಾಜಪ್ಪ ಮತ್ತಿತರರು ಹಾಜರಿದ್ದರು.