ದಾವಣಗೆರೆ, ನ.23- ವಿದ್ಯಾರ್ಥಿ-ವಿರೋಧಿ, ಕಾರ್ಪೊರೇಟ್-ಪರ ಹೊಸ ಶಿಕ್ಷಣ ನೀತಿ-2020 ತಿರಸ್ಕರಿಸಿ ಇದೇ ದಿನಾಂಕ 26ಕ್ಕೆ ದೇಶದ ಕಾರ್ಮಿಕ ಹಾಗೂ ರೈತ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಆಲ್ ಇಂಡಿಯಾ ಡೆಮಾಕ್ರಾಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ವತಿಯಿಂದ ನಗರದ ಹೈಸ್ಕೂಲ್ ಸಮೀಪದಲ್ಲಿ ಇಂದು ಗೋಡೆ ಬರಹದ ಮೂಲಕ ಬೆಂಬಲಿಸಲಾಯಿತು.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕಾಯ್ದೆಗಳು ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಕಾರ್ಮಿಕ ಹಾಗೂ ರೈತ ಸಂಘಟನೆಗಳು ನವೆಂಬರ್ 26 ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯು ಬೆಂಬಲ ವ್ಯಕ್ತಪಡಿಸುತ್ತದೆ. ಈಗಾಗಲೇ ಎಐಡಿಎಸ್‍ಓ ವಿದ್ಯಾರ್ಥಿ ವಿರೋಧಿ, ಕಾರ್ಪೊರೇಟ್-ಪರ ಹೊಸ ಶಿಕ್ಷಣ ನೀತಿ-2020 ತಿರಸ್ಕರಿಸಿ ರಾಜ್ಯದಲ್ಲಿಯು ಸಾವಿರಾರು ಸಹಿಗಳನ್ನು ಸಂಗ್ರಹಿಸಿದೆ. ಈ ಎಲ್ಲಾ ಸಹಿಯನ್ನೊಳಗೊಂಡ ಮನವಿ ಪತ್ರವನ್ನು ಭಾರತದ ರಾಷ್ಟ್ರಪತಿ ಹಾಗೂ ಎಲ್ಲಾ ರಾಜ್ಯಗಳ ರಾಜ್ಯಪಾಲರಿಗೆ ನಾಳೆ ನೀಡಲಾಗುವುದು ಎಂದು ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸೌಮ್ಯ, ಜಿಲ್ಲಾ ಕಾರ್ಯದರ್ಶಿ ಪೂಜಾ, ಉಪಾಧ್ಯಕ್ಷರಾದ ನಾಗಜ್ಯೋತಿ, ಜಂಟಿ ಕಾರ್ಯದರ್ಶಿ ಕಾವ್ಯ, ಸಂಘಟನಾ ಕಾರರಾದ ಪುಷ್ಪ, ಸುಮನ್, ಪರಶುರಾಮ್ ಭಾಗವಹಿಸಿದ್ದರು.