ಡಾ. ವೈ.ನಾಗಪ್ಪರ ರಾಜಕೀಯ ನಡೆಗಳು ಯುವಕರಿಗೆ ಮಾರ್ಗದರ್ಶನವಾಗಲಿ

ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಆಶಯ

ಹರಿಹರ, ನ.22- ಹರಿಹರ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ. ವೈ. ನಾಗಪ್ಪ ಅವರ ನಿಧನದಿಂದಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವಂತಹ ಕೊಂಡಿ ಕಳಚಿದಂತಾಗಿದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ವ್ಯಾಕುಲತೆ ವ್ಯಕ್ತಪಡಿಸಿದರು.

ನಗರದ ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಏರ್ಪಾಡಾಗಿದ್ದ ಮಾಜಿ ಸಚಿವ ಡಾ. ವೈ ನಾಗಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕ್ಷೇತ್ರದಲ್ಲಿ ನಾಗಪ್ಪನವರ ಕಾಲದಲ್ಲಿ ಭ್ರಷ್ಠಾಚಾರದ ಸುಳಿವು ಇರಲಿಲ್ಲ. ಆದರೆ, ಈಗ ಗಾಂಧಿವಾದ ಹೋಗಿದೆ. ಭ್ರಷ್ಟಾಚಾರ ಮಾಡದವರನ್ನು ಮತ್ತು ಪ್ರಾಮಾಣಿಕ ವ್ಯಕ್ತಿಗ ಳನ್ನು ದೀಪ ಹಚ್ಚಿ ಹುಡುಕುವ ಕಾಲ ಬಂದಿದೆ. ಪ್ರಾಮಾಣಿಕ ವ್ಯಕ್ತಿಗಳನ್ನು ಸಹ ಭ್ರಷ್ಟಾಚಾರಿ ಎಂಬ ಭೂತಕನ್ನಡಿಯಲ್ಲಿ ನೋಡುವಂತಹ ಕಾಲ ಬಂದಿದೆ. ನಾಗಪ್ಪನವರು ತಮ್ಮ ಆಡಳಿತ ಅವಧಿಯಲ್ಲಿ ವರ್ಣರಂಜಿತ, ಜಾತಿ ರಹಿತ  ಸೇವೆ, ಬಸವಣ್ಣನವರ ಕಾಯಕವೇ ಕೈಲಾಸ ಎಂಬಂತೆ ಎಲ್ಲಾ ವರ್ಗದವರ ಮೇಲೆ ಅಪಾರವಾದ ಅಭಿಮಾನ ಮತ್ತು ಅವರಂತೆಯೇ ಕಾಯಕ ನಿಷ್ಠೆ, ಶ್ರದ್ಧೆ ಹೊಂದಿ ಕ್ಷೇತ್ರದಲ್ಲಿ ಎಲ್ಲಾ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದರ ಮೂಲಕ ಜನರ ಮನಸ್ಸಿನಲ್ಲಿ ಸದಾಕಾಲವೂ ಉಳಿಯುವ ವ್ಯಕ್ತಿಯಾಗಿದ್ದರು. ಆದ್ದರಿಂದ ಅವರ ರಾಜಕೀಯ ನಡೆಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗ ಬೇಕು ಎಂದು ಹೇಳಿದರು.

ಪಂಚಮಸಾಲಿ ಗುರುಪೀಠದ ಶ್ರೀ ವಚ ನನಾಂದ ಸ್ವಾಮೀಜಿ ಮಾತನಾಡಿ, ಹುಟ್ಟು ವಾಗ ಮಗು ಅಳುತ್ತಾ ಇದ್ದರೆ ಕುಟುಂಬದ ಸದಸ್ಯರು ನಗುತ್ತ ಇರುತ್ತಾರೆ, ಅದರೆ, ಸಾಯುವಾಗ ಎಲ್ಲರೂ ಕಣ್ಣೀರ ಹಾಕುತ್ತಾರೆ. ನಾವು ಹುಟ್ಟಿದ ಮೇಲೆ ನಾವು ಮರಣ ಹೊಂದಿದ್ದರೂ ಸಹ ನಮ್ಮನ್ನು ಜನರು ನೆನಪಿ ಸಿಕೊಳ್ಳುವಂತಹ ಸಾಧನೆ ಮಾಡಿದರೆ ಮಾತ್ರ ನಾವು ಹುಟ್ಟಿದ್ದಕ್ಕೂ ಸಾರ್ಥಕವೆನಿಸುತ್ತದೆ. ಹಾಗೆ ಬದುಕುವುದನ್ನು ರೂಡಿಸಿಕೊಳ್ಳಬೇಕು. ಇಲ್ಲಿನ ನೆಲದಲ್ಲಿ ಹುಟ್ಟುವುದು ಒಂದು ಪುಣ್ಯ, ಇಂತಹ ನಗರದಲ್ಲಿ ಹುಟ್ಟಿದ ನಾಗಪ್ಪನವರ ತಮ್ಮ ಆಚಾರ- ವಿಚಾರಗಳು ಮತ್ತು ಅವರಲ್ಲಿ ಇರುವ ಧಾರ್ಮಿಕ ಶ್ರದ್ಧೆ ಅವರನ್ನು ಉನ್ನತ ಪದವಿ ಗಳಿಸುವುದಕ್ಕೆ ದಾರಿ ಕಲ್ಪಿಸಿತು ಎಂದು  ಅಭಿಪ್ರಾಯಪಟ್ಟರು. 

ಶಾಸಕ ಎಸ್. ರಾಮಪ್ಪ ಮಾತನಾಡಿ, ನಮಗೆ ವೈ. ನಾಗಪ್ಪ ಅವರು ರಾಜಕೀಯ ಮಾರ್ಗದರ್ಶಕರಾಗಿದ್ದರು. ಅವರು ತಮ್ಮ ಆಡಳಿತ ದಿನಗಳಲ್ಲಿ ಎಲ್ಲರೂ ನಮ್ಮವರೆ ಎನ್ನುವ ಭಾವನೆಯಿಂದ ನೋಡುವ ಮೂಲಕ ಎಲ್ಲಾ ವರ್ಗದ ಜನರ ಒಳಿತಿಗಾಗಿ ಶ್ರಮಿಸಿದ್ದರು ಎಂದರು.

ನಂದಿಗುಡಿ ಮಠದ ಶ್ರೀ ವೃಷಭಪುರಿ ಸ್ವಾಮೀಜಿ, ನಗರಸಭೆ ಸದಸ್ಯ ಶಂಕರ್ ಖಟಾವ್ಕರ್, ರಾಮಚಂದ್ರಕಲಾಲ್, ಡಾ. ರಶ್ಮಿ ಮಾತನಾಡಿದರು.

ಹದಡಿಯ ಶ್ರೀ ಮುರುಳೀಧರ ಸ್ವಾಮೀಜಿ, ವೈ.ಎನ್. ಮಹೇಶ್, ಸುರೇಶ್ ಹಾದಿಮನಿ, ಸವಿತಾ, ಸುನಿತಾ, ಏಕಾಂತಪ್ಪ, ನಾಗೇಂದ್ರಪ್ಪ ಕಡಾರನಾಯಕನಹಳ್ಳಿ, ನಾಗೇಂ ದ್ರಪ್ಪ ವಕೀಲರು, ತಿಪ್ಪೇರುದ್ರರಡ್ಡಿ, ಕೆ.ಬಿ. ಬಸವರಾಜಪ್ಪ, ಟಿ.ಜೆ. ಮುರುಗೇಶಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಯುವ ಮುಖಂಡ ನಂದಿಗಾವಿ ಎನ್‌.ಹೆಚ್‌. ಶ್ರೀನಿವಾಸ್‌, ವೈ. ರಾಮಪ್ಪ, ಟಿ. ಓಬಳಪ್ಪ, ಮಠದ ನಾಗೇಂದ್ರಪ್ಪ, ಕನ್ನಪ್ಪ ಭಾನುವಳ್ಳಿ, ಬಸವರಾಜ್ ಬೆಳ್ಳೂಡಿ, ಕುಂಬಳೂರು ವಿರು ಪಾಕ್ಷಪ್ಪ, ಬಿ. ರೇವಣಸಿದ್ದಪ್ಪ, ಶಾಂತಮ್ಮ, ದ್ಯಾಮಪ್ಪ ಕೊಕ್ಕನೂರು, ಬೆಣ್ಣೆಹಳ್ಳಿ ಹಾಲೇ ಶಪ್ಪ,  ಹಾಲಿವಾಣ ಪರಮೇಶ್ವರಪ್ಪ, ಬಿ.ಬಿ. ಸಕ್ರಿ, ಮುರುಗಣ್ಣ, ಭಾನುವಳ್ಳಿ ಬೀರಪ್ಪ, ರೋ ಷನ್ ಸಾಬ್, ಗಂಗಾಧರ ಮಲೇಬೆನ್ನೂರು, ಮಂಜುನಾಥ ಪಾಟೀಲ್, ಜಿಗಳಿ ಆನಂದಪ್ಪ, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!