ವಾಲ್ಮೀಕಿ ಜಾತ್ರೆ ಕೇವಲ ಜಾತ್ರೆಯಲ್ಲ, ಜನ ಜಾಗೃತಿ ಜಾತ್ರೆ

ಕೊಟ್ಟೂರಿನಲ್ಲಿ ವಾಲ್ಮೀಕಿ ಗುರುಪೀಠದ ಶ್ರೀಗಳು

ಕೊಟ್ಟೂರು, ನ.22- ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ ಜನ ಜಾಗೃತಿ ಜಾತ್ರೆಯಾಗಿದೆ  ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ  ಹನುಮಂತರಾಯ ದೇವಸ್ಥಾನದಲ್ಲಿ ಇಂದು ಏರ್ಪಾಡಾ ಗಿದ್ದ ವಾಲ್ಮೀಕಿ ಜಾತ್ರೆಯ ಪೂರ್ವ ಭಾವಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಸರ್ಕಾರ ಮೀಸಲಾತಿ ವಿಚಾರ ದಲ್ಲಿ ಸಂವಿಧಾನ ಬದ್ಧವಾಗಿ ನಮಗೆ ಸಿಗಬೇಕಾದ ಮೀಸಲಾತಿಯನ್ನು ಈಡೇರಿಸುವ ಭರವಸೆ ನೀಡಿದೆ. ಆ ಕಾರಣಕ್ಕೆ ಕಾಲವಕಾಶ ನೀಡಿದ್ದೇವೆ. ಸರ್ಕಾರ ಮೀಸಲಾತಿ ವಿಚಾರವಾಗಿ ಉಪ ಸಮಿತಿ ರಚನೆ ಮಾಡಿರವುದು ನಮಗೆ ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಮೀಸಲಾತಿ ವಿಚಾರವಾಗಿ ಕಾಲಹರಣ ಮಾಡಿದರೆ, ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

ಇದೇ ಸಂದರ್ಭದಲ್ಲಿ ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ರಾಗಿ ಕೆ. ಮಂಜುನಾಥ, ಜಿಲ್ಲಾ ಪಂಚಾಯಿತಿ ಹಾಗೂ ಹರಪನಹಳ್ಳಿ ಪಟ್ಟಣ ಸೇರಿದಂತೆ  ಟಿ.ರಾಮಣ್ಣ, ಎಸ್.ನಾಗರಾಜ್, ಬಿ.ಕೊಟ್ರೇಶ್, ಎಂ.ರಾಜು ಅವರುಗಳನ್ನು ವಾಲ್ಮೀಕಿ ಸೇವಾ ಸಮಿತಿಗೆ ಪದಾಧಿಕಾರಿಗಳ ನ್ನಾಗಿ ಆಯ್ಕೆ ಮಾಡಲಾಯಿತು.

ಈ ವೇಳೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ  ಜಿ.ಮೂಗಪ್ಪ, ಮುಖಂಡರಾದ ಕನ್ನಳ್ಳಿ ಹನುಮಂತಪ್ಪ, ಬಿ.ಅಂಜಿನಪ್ಪ, ಹೆಚ್.ಅಂಜಿನಪ್ಪ, ಕೋವಿ ನಾಗರಾಜ್‌, ಆರ್.ಮೂಗಪ್ಪ, ಹೆಚ್.ಪಕ್ಕೀರಪ್ಪ, ಕೆ.ರಾಜಣ್ಣ, ಕೆ. ಗೋಣೆಪ್ಪ ಸೇರಿದಂತೆ ಹಾಗೂ ಇತರರಿದ್ದರು.

error: Content is protected !!