ಸದ್ಯದ ಪರಿಸ್ಥಿತಿಯಲ್ಲಿ ವಿಜಯನಗರ ಜಿಲ್ಲೆಯ ಪ್ರಸ್ತಾಪ ಅನುಮಾನ

ಕೂಡ್ಲಿಗಿ, ಅ.4- ಕೂಡ್ಲಿಗಿಯನ್ನು ನೂತನ ಜಿಲ್ಲೆಯಾಗಲಿರುವ ವಿಜಯನಗರ ಜಿಲ್ಲೆಗೆ ಸೇರ್ಪ ಡಿಸುವ ಉದ್ದೇಶಕ್ಕಾಗಿ ಭಾನುವಾರ ಪಕ್ಷಾತೀತ, ಜಾತ್ಯತೀತವಾಗಿ ಮುಖಂಡರು ಒಂದುಗೂಡಿ ಹೊಸಪೇಟೆಗೆ ಸಚಿವರ ಬಳಿಗೆ ನಿಯೋಗ ಹೋಗಿದ್ದು, ಸಚಿವರೂ ಸಹ ವಿಜಯನಗರ ಜಿಲ್ಲೆಯಾ ದಲ್ಲಿ ಕೂಡ್ಲಿಗಿಯನ್ನು ಸೇರ್ಪಡೆ ಮಾಡುವೆ ಎಂಬ ಭರವಸೆಯನ್ನು ನಿಯೋಗದ ಸದಸ್ಯ ರಿಗೆ ವ್ಯಕ್ತಪಡಿಸಿರುವುದು ಕೂಡ್ಲಿಗಿ ತಾಲ್ಲೂ ಕಿನ ಮುಖಂಡರಿಗೆ ಸಂತಸ ತಂದಿದೆ. 

ಕೂಡ್ಲಿಗಿ ಹಾಗೂ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 50ಕ್ಕೆ ಹೊಂದಿಕೊಂ ಡಂತಿರುವ ನಗರ, ಪಟ್ಟಣಗಳಾಗಿದ್ದು ಗಂಟೆಯೊಳಗೆ ಹೊಸಪೇಟೆಗೆ ತಾಲ್ಲೂಕಿನ ಜನತೆ ತಲುಪಬಹುದು. ಬಳ್ಳಾರಿ ಆದರೆ 3 ತಾಸಿಗೂ ಹೆಚ್ಚು ಕಾಲ ಪ್ರಯಾಣ ಮಾಡಬೇಕು. ಹೊಸಪೇಟೆ ಜಿಲ್ಲಾ ಕೇಂದ್ರಕ್ಕೆ ಹೋಗಲು ಕೂಡ್ಲಿಗಿ ತಾಲ್ಲೂಕಿನ ಜನತೆಗೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದಾಗ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿ, ಈಗಿನ ಆರ್ಥಿಕ ಸಂಕಷ್ಟ ಕಾಲದಲ್ಲಿ ಜಿಲ್ಲೆಯ ಪ್ರಸ್ತಾಪ ಅನುಮಾನವಾಗಿದೆ ಎಂದರು.

ನಿಯೋಗದಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಬಂಗಾರು ಹನುಮಂತು, ಕಾಂಗ್ರೆಸ್ ಎಸ್.ಟಿ.ಮೋರ್ಚಾ ಅಧ್ಯಕ್ಷ ಕೆ. ಶಿವಪ್ಪ ನಾಯಕ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ಬಿಜೆಪಿ ಹಿರಿಯ ಮುಖಂಡ ಕೆ.ಎಚ್. ವೀರನಗೌಡ, ಹೂಡೇಂ ತಾ.ಪಂ. ಸದಸ್ಯ ಜಿ.ಪಾಪ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಚನ್ನಪ್ಪ, ಬಿಜೆಪಿ ಮುಖಂಡರಾದ ಮಂಜು ನಾಥ ನಾಯಕ, ಅಂಬಲಿ ನಾಗರಾಜ, ಗುರಿಕಾರ ರಾಘವೇಂದ್ರ, ಜುಬೇರಾ, ಸಿ.ಬಿ.ಗುರುರಾಜ, ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ರಾಘು, ಹಡಗಲಿ ವೀರಭದ್ರಪ್ಪ, ವೆಂಕಟೇಶ್, ಅಬ್ದುಲ್ ರೆಹಮಾನ್, ಆರ್ಯವೈಶ್ಯ ಸಂಘದ ವಿನಾಯಕ, ನವೀನ್, ಪ್ರವೀಣ್, ಗಂಟೆಪ್ಪರ ರಾಜು ಮತ್ತಿತರರು ಇದ್ದರು.

error: Content is protected !!