ಕಾನೂನುಗಳಿದ್ದರೂ ನ್ಯಾಯಕ್ಕಾಗಿ ಆಗ್ರಹಿಸುವ ಸಂಘ-ಸಂಸ್ಥೆಗಳ ಅಗತ್ಯವಿದೆ

ಹರಿಹರದ ಸಭೆಯಲ್ಲಿ ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಅಭಿಪ್ರಾಯ

ಹರಿಹರ, ನ.12- ಸಂವಿಧಾನ, ಕಾನೂನುಗಳಿದ್ದರೂ ಕೂಡ ನ್ಯಾಯಕ್ಕೆ ಆಗ್ರಹಿಸುವ ಸಂಘ, ಸಂಸ್ಥೆಗಳ ಅಗತ್ಯ ಈ ದೇಶಕ್ಕಿದೆ ಎಂದು ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮೊನ್ನೆ ನಡೆದ ದಸಂಸ ನೂತನ ತಾಲ್ಲೂಕು ಸಮಿತಿ ರಚನಾ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಭಾರತೀಯರ ಮನಸ್ಥಿತಿಯನ್ನು ಅರಿತ ಡಾ.ಅಂಬೇಡ್ಕರ್‌ ಅವರು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಭಾರತಕ್ಕೆ ನೀಡಿದ್ದಾರೆ. ಈ ವಿಶಿಷ್ಟ ಸಂವಿಧಾನವನ್ನಾಧರಿಸಿ ದೇಶದಲ್ಲಿ ನೂರಾರು ಕಾನೂನುಗಳನ್ನು ರಚಿಸಲಾಗಿದೆ. ಇದರಲ್ಲಿ ದಲಿತ, ಶೋಷಿತ, ಮಹಿಳೆ, ಮಕ್ಕಳು, ಬಡವರ ರಕ್ಷಣೆಗೆ ಕಾನೂನುಗಳಿವೆ ಎಂದರು. 

ಕಾನೂನುಗಳಿವೆ ಎಂದು ಕೈಕಟ್ಟಿ ಕುಳಿತುಕೊಳ್ಳಲಾಗದು. ಅಧಿಕಾರಕ್ಕೆ ಬರುವ ಸರ್ಕಾರ, ಅಧಿಕಾರಿಗಳು, ಸಂವಿಧಾನ, ಕಾನೂನು ಬದಿಗೆ ಸರಿಸಿ ಅಥವಾ ಅದರ ಕಣ್ಣಿಗೆ ಮಣ್ಣೆರಚಿ ದುರ್ಬಲರನ್ನು ಹಕ್ಕನ್ನು ಕಸಿಯುವ ಅಪಾಯ ಇದ್ದೇ, ಇದೆ. ಸರ್ಕಾರ ಹಾಗೂ ಅಧಿಕಾರಿಗಳು ದಾರಿ ತಪ್ಪದಂತೆ ಎಚ್ಚರ ವಹಿಸಲು ದಲಿತರ, ದುರ್ಬಲರ ಹಕ್ಕುಗಳ ರಕ್ಷಣೆಗಾಗಿ ಸಂಘ, ಸಂಸ್ಥೆಗಳು, ಹೋರಾಟ ಗಳು ಈ ದೇಶಕ್ಕೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಚಲನಚಿತ್ರ ನಿರ್ದೇಶಕ, ದ್ರಾವಿಡ ಚಳವಳಿ ಮುಖಂಡ ಅಭಿಗೌಡ್ರು ಮಂಡ್ಯ ಮಾತನಾಡಿ, ಈ ಹೋರಾಟವನ್ನು ಒಡೆಯಲು ಕೆಲವು ಪಟ್ಟಭದ್ರರು ಮಾಡುತ್ತಿರುವ ಕುತಂತ್ರದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು. 

ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ತಾಲ್ಲೂಕು ಸಂಚಾಲಕರಾಗಿ ಪುನರ್ ಆಯ್ಕೆಯಾದ ಪಿ.ಜೆ. ಮಹಾಂತೇಶ್ ಮಾತನಾಡಿದರು.

ನೂತನ ತಾಲ್ಲೂಕು ಸಮಿತಿ: ಪಿ.ಜೆ.ನಮಹಾಂತೇಶ್ (ತಾಲ್ಲೂಕು ಸಂಚಾಲಕರಾಗಿ ಪುನರ್ ಆಯ್ಕೆ). ರವಿಕುಮಾರ್ (ನಗರ ಸಂಚಾಲಕ), ಸಂತೋಷ್ ಎಸ್.ವಿ. ನಂದಿಗಾವಿ, ಪ್ರದೀಪ್ ಜಿಗಳಿ, ಹನುಮಂತಪ್ಪ ಕೆ.ಎನ್.ಹಳ್ಳಿ, ಕರಿಬಸಪ್ಪ ನಿಟ್ಟೂರು, ರವಿ ಸಾರಥಿ, ರಂಗನಾಥ್, ಆಂಜಿ ಬೆಳ್ಳೂಡಿ, ರಾಘವೇಂದ್ರ ಹರಳಹಳ್ಳಿ, ಕಡ್ಲೆಗೊಂದಿ ಮಾಲತೇಶ್ ಬಿ.ಎಚ್., ಅಣ್ಣಪ್ಪ, ಕೊಟ್ರೇಶ್ ನಂದಿಗಾವಿ, ಯುವರಾಜ ಹೊಸಪಾಳ್ಯ, ಚೌಡಪ್ಪ ಭಾನುವಳ್ಳಿ, ಹನುಮಂತಪ್ಪ ಗುಳದಹಳ್ಳಿ, (ತಾಲ್ಲೂಕು ಸಂಘಟನಾ ಸಂಚಾಲಕರು). ಪ್ರವೀಣ್ ಬೆಳ್ಳೂಡಿ (ಖಜಾಂಚಿ). ಭಾನುವಳ್ಳಿ ಚೌಡಮ್ಮ, ರತ್ನಮ್ಮ (ಮಹಿಳಾ ಸಂಚಾಲಕಿಯರು).

ಮಂಜುನಾಥ್ ವಾಸನ (ಮಲೇಬೆನ್ನೂರು ಸಂಚಾಲಕರು). ಜಯಪ್ಪ ಜಿಗಳಿ, ಬಸವರಾಜ್ ಹರಳಹಳ್ಳಿ, ಗುಡ್ಡಪ್ಪ ಮಲ್ಲನಾಯಕನಹಳ್ಳಿ, ಮಹೇಶ್ ನಿಟ್ಟೂರು, ಯಲವಟ್ಟಿ ಕೀರ್ತಿರಾಜ್, ಅಂಜನಿ, ಧರ್ಮರಾಜ್, ಹನುಮಂತಪ್ಪ ಹಳ್ಳಿಹಾಳ್, ಹನುಮಂತಪ್ಪ ಕೊಕ್ಕನೂರು, ಮಂಜುನಾಥ್ ಕಿರಣ್ (ಹೋಬಳಿ ಸಂಘಟನಾ ಸಂಚಾಲಕರು), ರಾಕೇಶ್ ಜಿಗಳಿ (ಖಜಾಂಚಿ).

ಜಿಲ್ಲಾ ಮಹಿಳಾ ಸಂಚಾಲಕರಾದ ವಿಜಯಲಕ್ಷ್ಮಿ, ರವಿ ಶಿವಮೊಗ್ಗ, ನಿಟ್ಟೂರು ಕೃಷ್ಣಪ್ಪ, ಗ್ರಾ.ಪಂ. ಸದಸ್ಯರಾದ ಎಚ್.ಎಂ. ಹನುಮಂತಪ್ಪ, ಕೊಕ್ಕನೂರು ಹನುಮಂತಪ್ಪ, ಗುಳದಹಳ್ಳಿ ಮಂಜಪ್ಪ, ನಿಟ್ಟೂರು ಮಂಜಪ್ಪ, ಗದಿಗೆಪ್ಪ ವಾಸನ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!