ತ್ರಿಪುರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ, ನ.12- ತ್ರಿಪುರ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ  ತಂಜೀಮ್ ಉಲಮಾ ಎ ಅಹ್ಲೆ ಸುನ್ನತ್ ಹಾಗೂ ಅಂಜುಮನ್ ಸಮಿತಿ ವತಿಯಿಂದ ಪ್ರತಿಭಟನೆ ಮಾಡಿ ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು

ಈ ವೇಳೆ ಖಾಜಿ ಮುಷ್ತಾಕ್ ಅಹಮದ್ ರಜ್ಜಿ ಮಾತನಾಡಿ, ತ್ರಿಪು ರಾದಲ್ಲಿ ಕೆಲ ಸಂಘಟನೆಯವರು ದೌರ್ಜನ್ಯ ನಡೆಸುತ್ತಿದ್ದು, ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು.  ತ್ರಿಪುರ ಸರ್ಕಾರವನ್ನು ವಜಾಗೊಳಿಸಬೇಕು. ಮುಸ್ಲಿಮರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಸಿ. ಜಾವೀದ್ ಮಾತನಾಡಿದರು.

ಮೌಲಾನಾ ಅಬು ಸಾಲೇಹ ಮುಜೀಬಿ, ಮೌಲಾನಾ ಗುಲಾಮ್ ರಬ್ಬಾನಿ ರಜ್ವಿ, ಮೌಲಾನಾ ಮುಕ್ತರ್‌ ಆಲಮ್ ಮಿಸ್ಟಾಹಿ, ಮೌಲಾನಾ ಹೈದರ್ ಆಲಿರಜ್ಜಿ, ಮೌಲಾನಾ ಇಮ್ತಿಯಾಜ್ ಖಾನ್ ನಿಜಾಮಿ, ಹಫೀಜ್‌ ಸಯೀದ್ ರಜಾ ರಜ್ಜಿ, ಮುಖಂಡರಾದ ಹಾಜಿ ಷಮ್ನಾ ಸಾಬ್,  ಇರ್ಫಾನ್ ಅಹಮದ್, ಹಾಜಿ ಷರೀಫ್ ಸಾಬ್,  ಬಾಣಗೇರಿ ಮುತುವಲ್ಲಿ  ಇಸ್ಮಾಯಿಲ್ ಸಾಬ್ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

error: Content is protected !!