ಹರಿಹರ, ನ.11- ಸಹಸ್ರಾರ್ಜುನ ಜಯಂತಿ ಯನ್ನು ಆಚರಣೆ ಮಾಡುವುದರಿಂದ ಎಸ್ಎಸ್ಕೆ ಸಮಾಜದವರು ಒಗ್ಗಟ್ಟಿನಿಂದ ಇರುವುದಕ್ಕೆ ದಾರಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಹೇಳಿದರು.
ನಗರದ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ರುವ ಸಹಸ್ರಾರ್ಜುನ ವೃತ್ತದ ಬಳಿ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಸಹಸ್ರಾರ್ಜುನ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜ ಒಗ್ಗಟ್ಟಿನಿಂದ ಇರಲು, ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು, ಸಮಾಜದ ಒಳಿತಿಗಾಗಿ ಶ್ರಮಿಸಿರುವ ದಾರ್ಶನಿಕರ ಜಯಂ ತಿಯ ಆಚರಣೆಗಳು ಬಹು ಮುಖ್ಯ ಪಾತ್ರವಹಿ ಸುತ್ತವೆ. ಎಸ್ಎಸ್ಕೆ ಸಮಾಜವು ನಗರದಲ್ಲಿ ಚಿಕ್ಕ ಸಮಾಜವಾದರೂ ಒಗ್ಗಟ್ಟಿನಿಂದ ಇದ್ದು, ಇತರೆ ಸಮಾಜಗಳಿಗೆ ಮಾದರಿಯಾಗಿದೆ ಎಂದರು.
ಸಮಾಜದ ಅಧ್ಯಕ್ಷ ನಾಗರಾಜ್ ಮೆಹ ರ್ವಾಡೆ, ತುಳಜಪ್ಪ ಭೂತೆ, ರಮೇಶ್ ಕಾಟ್ವೆ, ಶ್ರೀನಿವಾಸ್ ಮಹರ್ವಾಡೆ, ಅಂಬಾಸಾ ಮೆಹರ್ವಾಡೆ, ಟಿ.ಎಂ. ಮೋಹನ್, ಆರ್.ಎಂ. ರಾಘವೇಂದ್ರ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.