ಮಲೇಬೆನ್ನೂರು, ನ.9- ಜಿಗಳಿ ಗ್ರಾಮ ಪಂಚಾಯಿತಿಗೆ ಹೆೋಸದಾಗಿ ಬಂದಿರುವ `ಸ್ವಚ್ಛವಾಹಿನಿ’ ವಾಹನವನ್ನು ಸೋಮವಾರ ಗ್ರಾ.ಪಂ. ಅಧ್ಯಕ್ಷರಾದ ಆಶಾ ಅಣ್ಣಪ್ಪ ಅವರು ಪೂಜೆ ಮಾಡುವ ಮೂಲಕ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
ಈ ವಾಹನವು ಜಿಗಳಿ, ಜಿ.ಬೇವಿನಹಳ್ಳಿ ಮತ್ತು ಒಡೆಯರ ಬಸಾಪುರ ಗ್ರಾಮಗಳಲ್ಲಿ ಪ್ರತಿನಿತ್ಯ ಸಂಚರಿಸಿ ಮನೆ-ಮನೆಗಳಿಂದ ಕಸವನ್ನು ಸಂಗ್ರಹಿಸಿ ಘನ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡುತ್ತದೆ ಎಂದು ಪಿಡಿಓ ಉಮೇಶ್ ಮಾಹಿತಿ ನೀಡಿದರು.
ಈ ವಾಹನಕ್ಕಾಗಿ 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಸುಮಾರು 2 ಲಕ್ಷ ರೂ. ಮತ್ತು ಜಿ.ಪಂ.ನಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 3.30 ಲಕ್ಷ ರೂ.ನೀಡಲಾಗಿದೆ ಎಂದು ಉಮೇಶ್ ತಿಳಿಸಿದರು.
ಗ್ರಾ.ಪಂ. ಉಪಾಧ್ಯಕ್ಷ ಮಲ್ಲನಗೌಡ, ಸದಸ್ಯರಾದ ಡಿ.ಎಂ.ಹರೀಶ್, ಕೆ.ಜಿ.ಬಸವರಾಜ್, ವೈ.ಆರ್. ಚೇತನ್ ಕುಮಾರ್, ಕರಿಯಮ್ಮ, ವಿನೋದ ಹಾಲೇಶ್ ಕುಮಾರ್, ರೇಣುಕಾ ನಾಗರಾಜ್, ಮಂಜುಳ ಪರಮೇಶ್ವರಪ್ಪ ಮತ್ತು ಜಿ.ಬೇವಿನಹಳ್ಳಿಯ ರೂಪಾ ಸೋಮಶೇಖರ್, ದೇವರಾಜ್, ಕಾರ್ಯದರ್ಶಿ ಶೇಖರ್ ನಾಯ್ಕ, ಬಿ. ದಾನಪ್ಪ, ಬಿ.ಮೌನೇಶ್ ಮತ್ತಿತರರು ಉಪಸ್ಥಿತರಿದ್ದರು.