ಕನ್ನಡ ಭಾಷಾ ಸೂಕ್ತಿಗಳನ್ನು ಪರಿಚಯಿಸುವ ಕೆಲಸ ಆಗಬೇಕು : ಕಣ್ಣನ್

ಕನ್ನಡ ಭಾಷಾ ಸೂಕ್ತಿಗಳನ್ನು ಪರಿಚಯಿಸುವ ಕೆಲಸ ಆಗಬೇಕು : ಕಣ್ಣನ್

ಸಾಣೇಹಳ್ಳಿ,ಅ.6-  ಹೆಸರಾಂತ ವಾಗ್ಮಿ  ಹಿರೇಮಗಳೂರು ಕಣ್ಣನ್  ಅವರು ಇಲ್ಲಿನ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   ಆಶೀರ್ವಾದ ಪಡೆದರು.  

ಈ ಸಂದರ್ಭದಲ್ಲಿ ಮಾತನಾಡಿದ  ಕಣ್ಣನ್,   ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಯ ವಿಚಾರಧಾರಣೆ. ಕನ್ನಡ ಮನಮಿಡಿಯುವ ಭಾಷೆಯಾಗಿದೆ. ಪ್ರತಿಯೊಬ್ಬರಿಗೂ ಭಾಷಾಭಿಮಾನ ಹೊಂದಬೇಕು. ನಾವು ಆಗಾಗ ಕೆಲವು ಗಾದೆಗಳನ್ನು  ನಾಣ್ಣುಡಿಗಳನ್ನು ನಮ್ಮ ಮಾತಿನ ಮಧ್ಯದಲ್ಲಿ ಬಳಸುತ್ತೇವೆ. ಆ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡುವುದು ಆಂಗ್ಲ ಭಾಷೆಯ ಸೂಕ್ತಿಗಳೇ ಆಗಿವೆ. 

ನಮ್ಮ ಭಾಷಿಕರಲ್ಲಿ ಉತ್ತಮವಾದ ಸೂಕ್ತಿಗಳು, ಹಿತವಚನಗಳು ಇಲ್ಲವೆಂದು ನಮ್ಮ ತಿಳಿವಳಿಕೆ. ಆದರೆ ನಿಮಗೆ ತಿಳಿದಿದೆಯೋ, ಇಲ್ಲವೋ ನಮ್ಮ ಕನ್ನಡ ಭಾಷೆಯಲ್ಲಿ ಉತ್ತಮವಾದ ಸೂಕ್ತಿಗಳು ಇವೆ. ಇವುಗಳನ್ನು ಕನ್ನಡಿಗರಿಗೆ, ಕರ್ನಾಟಕದವರಿಗೆ ಕನ್ನಡದ ಸೊಗಡು, ಪರಂಪರೆ, ಸಂಸ್ಕೃತಿ, ಸಂಸ್ಕಾರವನ್ನು ಪರಿಚಯಸುವ ಕಾರ್ಯವನ್ನು ಮಾಡಬೇಕು ಎಂದು   ಕಣ್ಣನ್ ಹೇಳಿದರು.

ಈ ಸಂದರ್ಭದಲ್ಲಿ ಅನೇಕ ಕನ್ನಡದ ಚುಟುಕುಗಳನ್ನು ಹಾಡಿದರು. ಚಿಕ್ಕಮ ಗಳೂರಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ತ್ಯಾಗರಾಜ್ ಉಪಸ್ಥಿತರಿದ್ದರು.

error: Content is protected !!